ಹೊಳೆನರಸೀಪುರ: ಶ್ರೀರಾಮ ನವಮಿ ಪ್ರಯುಕ್ತ ಭಾನುವಾರ ಕೋಟೆ ಮುಖ್ಯರಸ್ತೆಯ ರಘುಪತಿ ದೇವಾಲಯ ಆವರಣವನ್ನು ತಳಿರು ತೋರಣ, ಹೂವುಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿತ್ತು.
ಅರ್ಚಕ ವೆಂಕಟನರಸಿಂಹನ್ ನೇತೃತ್ವದಲ್ಲಿ ಬೆಳಿಗ್ಗೆ ಪಂಚಾಮೃತಾಭಿಷೇಕ ಮಾಡಿ, ಶ್ರೀರಾಮ,ಲಕ್ಷ್ಮಣ ಸೀತಾಮಾತೆ ಹಾಗೂ ಹನುಮನನ್ನು ಅಲಂಕರಿಸಿ ಪೂಜಿಸಿ ಮಹಾಮಂಗಳಾರತಿ ಮಾಡಿದರು. ನಂತರ ತೀರ್ಥ, ಪ್ರಸಾದ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಸ್. ಸುದರ್ಶನ್, ಕಾವ್ಯ ಶರತ್, ಉದ್ಯಮಿ ಪಿಎಚ್‌ಇ ವೆಂಕಟೇಶ್, ವೆಂಕಟೇಶ್ ಗುಪ್ತಾ, ಡಿಶ್ ಕೋವಿಂದ,ಕಿಟ್ಟಿ , ನೂರಾರು ಭಕ್ತರು ಪೂಜೆಯಲ್ಲಿ ಭಾಗವಹಿಸಿದ್ದರು.
ಕೋಸಂಬರಿ, ಮಜ್ಜಿಗೆ ವಿತರಣೆ: ಪಟ್ಟಣದ ಹನುಮೋತ್ಸವ ಆಚರಣೆ ಸಮಿತಿಯಿಂದ ಭಾನುವಾರ ಪುರಸಭೆ ಮುಂಭಾಗ ಶ್ರೀರಾಮನ ದೊಡ್ಡಕಟೌಟ್ ಇಟ್ಟು ಪೂಜಿಸಿದರು. ಮಧ್ಯಾಹ್ನದ ವರೆಗೂ ಸಾರ್ವಜನಿಕರಿಗೆ ಕೋಸಂಬರಿ ಮಜ್ಜಿಗೆ ವಿತರಿಸಿದರು.
ಕೋಟೆ ಶ್ರೀಚತುರ್ಭುಜ ಪಟ್ಟಾಭಿರಾಮ ದೇವಾಲಯ, ದೇವಾಂಗ ಬಡಾವಣೆಯ ಶ್ರೀರಾಮ ಮಂದಿರ, ಆರ್ಯ ಈಡಿಗರ ಶ್ರೀರಾಮ ಮಂದಿರ, ಕುರುಹಿನಶೆಟ್ಟಿ ಶ್ರೀರಾಮ ಮಂದಿರ, ಹಾಗೂ ಆಂಜನೇಯ ದೇವಾಲಯ, ಶ್ ಲಕ್ಚ್ಮೀನರಸಿಂಹಸ್ವಾಮಿ ದೇವಾಲಯ, ಅಯ್ಯಪ್ಪಸ್ವಾಮಿ ದೇವಾಲಯ ಹಾಗೂ ಕನ್ನಿಕಾಪರಮೇಶ್ವರಿ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.