ADVERTISEMENT

ಚನ್ನರಾಯಪಟ್ಟಣ: ₹ 1.73 ಲಕ್ಷ ಮೌಲ್ಯದ ಪೆಟ್ರೋಲ್‌, ಆಯಿಲ್ ಕಳವು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 7:21 IST
Last Updated 6 ಫೆಬ್ರುವರಿ 2023, 7:21 IST

ಚನ್ನರಾಯಪಟ್ಟಣ: ತಾಲ್ಲೂಕಿನ ಮುದ್ದನಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಶ್ರೀ ಲಕ್ಷ್ಮಿ ನರಸಿಂಹ ಪೆಟ್ರೋಲ್ ಬಂಕ್‌ಗೆ ಕನ್ನ ಹಾಕಿರುವ ಕಳ್ಳರು, ₹ 1.65 ಲಕ್ಷ ಮೌಲ್ಯದ 550 ಲೀ. ಎಂಜಿನ್ ಆಯಿಲ್ ಬಾಕ್ಸ್‌ಗಳನ್ನು ಕಳವು ಮಾಡಿದ್ದಾರೆ.

ಈ ಹಿಂದೆ ಡಿಸೆಂಬರ್‌ 31 ರಂದು ಕನ್ನ ಹಾಕಿದ್ದ ಕಳ್ಳರು ₹ 8,918 ಮೌಲ್ಯದ 87.05 ಲೀ. ಪೆಟ್ರೋಲ್ ಕಳವು ಮಾಡಿದ್ದರು. ಇದೀಗ ಫೆ.3 ರಂದು ರಾತ್ರಿ ಮತ್ತೆ ಕಳ್ಳತನ ನಡೆದಿದೆ. ಈ ಬಗ್ಗೆ ಬಂಕ್‌ ಮಾಲೀಕ ರಂಗೇಗೌಡ ದೂರು ನೀಡಿದ್ದು, ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಹಾಯ್ದು ಕಾರ್ಮಿಕ ಸಾವು

ADVERTISEMENT

ಹಾಸನ: ತಾಲ್ಲೂಕಿನ ಅಣಚಿಹಳ್ಳಿ ಬಳಿ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ಕಂಪನಿಯ ಲಾರಿಯೊಂದು ಹಾಯ್ದು ಕಾರ್ಮಿಕ ಮೃತಪಟ್ಟಿದ್ದಾನೆ.

ಲಾರಿಗೆ ಕೆಳಗೆ ಬಿಹಾರದ ರಾಮಜ್ನ ಠಾಕೂರ್ ಮಲಗಿದ್ದು, ಇದನ್ನು ಗಮನಿಸದ ಚಾಲಕ, ಲಾರಿಯನ್ನು ಹಿಮ್ಮುಖವಾಗಿ ಚಲಾಯಿಸಿದ್ದಾನೆ. ರಾಮಜ್ನ ಠಾಕೂರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಾಸನ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹ 2.70 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಹಾಸನ: ತಾಲ್ಲೂಕಿನ ಕಂದಲಿ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಮನೆಯ ಹೆಂಚು ತೆಗೆದು ಒಳಗೆ ನುಗ್ಗಿರುವ ಕಳ್ಳರು, ₹2.70 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.

ಕಂದಲಿ ಗ್ರಾಮದ ಸುಶೀಲಾ ಹಾಗೂ ಮನೆಯವರು, ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದರು. ಸಂಜೆ 5.30 ಕ್ಕೆ ಮನೆಗೆ ಬಂದು ನೋಡಿದಾಗ, ಕಳ್ಳರು ಮನೆಯ ಹೆಂಚುಗಳನ್ನು ತೆಗೆದು ಒಳ ಪ್ರವೇಶಿಸಿರುವುದು ತಿಳಿದಿದೆ, ಬೀರುವಿನ ಬಾಗಿಲನ್ನು ಒಡೆದು ಬೀರುವಿನಲ್ಲಿಟ್ಟಿದ್ದ 66 ಗ್ರಾಂ ತೂಕದ ಚಿನ್ನದ ಆಭರಣಗಳು ಹಾಗೂ 88 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.