ADVERTISEMENT

ಹಾಸನ: ‘ಬೆಂಬಲ ಬೆಲೆ: ಭಕ್ತ, ರಾಗಿ ಖರೀದಿಸಿ’

ಶಾಸಕ ಎಚ್‌.ಡಿ.ರೇವಣ್ಣ ಆಗ್ರಹ; ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2022, 16:46 IST
Last Updated 3 ಫೆಬ್ರುವರಿ 2022, 16:46 IST
ಎಚ್.ಡಿ.ರೇವಣ್ಣ‌
ಎಚ್.ಡಿ.ರೇವಣ್ಣ‌   

ಹಾಸನ: ‘ರಾಜ್ಯದಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ದರ ಕುಸಿದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಗಿ, ಭತ್ತ, ಮೆಕ್ಕೆಜೋಳಗಳನ್ನು ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿಲ್ಲ’ ಎಂದು ಶಾಸಕ ಎಚ್‌.ಡಿ.ರೇವಣ್ಣ ಆರೋಪಿಸಿದರು.

‘ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿದ್ದ ಪ್ರತಿ ರೈತರಿಂದ ಕೇವಲ ಒಂದು ಕ್ವಿಂಟಲ್‌ ರಾಗಿ, ಭತ್ತ ಖರೀದಿಸಿ ಇಡೀ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರು ಎಪಿಎಂಸಿಗೆ ಅಲೆದಾಡುತ್ತಿದ್ದಾರೆ.ಮಧ್ಯವರ್ತಿಗಳು ರೈತರಿಂದ ಅಗ್ಗದ ಬೆಲೆಗೆ ಖರೀದಿಸಿದ ಜೋಳವನ್ನು ಕೆಎಂಎಫ್‌ಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ಶೋಷಣೆ ತಪ್ಪಿಸಲು ಸರ್ಕಾರವೇ ನೇರವಾಗಿ ರೈತರಿಂದ ರಾಗಿ, ಭತ್ತ, ಜೋಳಗಳನ್ನು ಬೆಂಬಲ ಬೆಲೆಯಡಿ ಖರೀದಿಸಬೇಕು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಜಿಲ್ಲಾ ಕೇಂದ್ರದಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಶಾಮೀಲಾಗಿ ಭೂಮಾಫಿಯಾ ನಡೆಸುತ್ತಿದ್ದಾರೆ. ಕಾಯಂ ಸಾಗುವಳಿ ಚೀಟಿ ಕೊಡಿಸುವುದಾಗಿ ರೈತರಿಗೆಆಮಿಷವೊಡ್ಡಲಾಗುತ್ತಿದೆ. ಜಿಲ್ಲೆಯಲ್ಲಿ ದಾಖಲೆ ತಿದ್ದುವ ಅಧಿಕಾರಿಗಳಿದ್ದಾರೆ ಎಂದುಜಿಲ್ಲಾಧಿಕಾರಿ ಗಮನ ಸೆಳೆದಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವೇಶಾಶ್ವತವಾಗಿರುವುದಿಲ್ಲ. ಕಾನೂನು ಉಲ್ಲಂಘಿಸುವ ಅಧಿಕಾರಿಗಳು ಜೈಲಿಗೆ ಹೋಗುವುದುಖಚಿತ’ ಎಂದರು.

ADVERTISEMENT

‘ಜಿಲ್ಲೆಯ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ಪ್ರವೇಶ ಸಿಗದೆ ಪರದಾಡುತ್ತಿದ್ದಾರೆ. ಶಾಸಕರಮನೆ ಬಾಗಿಲಲ್ಲಿ ನಿಂತು ಸೀಟಿಗಾಗಿ ಅಂಗಲಾಚುತ್ತಿದ್ದಾರೆ. ಆದರೆ, ಅಗತ್ಯಕ್ಕೆ ತಕ್ಕಷ್ಟುವಿದ್ಯಾರ್ಥಿನಿಲಯಗಳನ್ನು ತೆರೆಯದ ಸರ್ಕಾರ, ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಶಾಮೀಲಾಗಿದೆ. ಬಡವರ ಮಕ್ಕಳು ವ್ಯಾಸಂಗ ಮಾಡುವ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸುತ್ತಿಲ್ಲ. ಬಿಜೆಪಿ ಸರ್ಕಾರ ಈಗಲಾದರೂಎಚ್ಚೆತ್ತುಕೊಳ್ಳದಿದ್ದರೆ 2013 ವಿಧಾನಸಭೆ ಫಲಿತಾಂಶ ಮರುಕಳಿಸಲಿದೆ’ ಎಂದು ಎಚ್ಚರಿಸಿದರು.

‘ಕೋವಿಡ್‌ನಿಂದ ಮೃತರಾದವರ ಕುಟುಂಬಗಳಿಗೆ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ.ಕೆಲವರು ಕುಟುಂಬ ಸದಸ್ಯರ ಚಿಕಿತ್ಸೆಗಾಗಿ ಬಡ್ಡಿ ಸಾಲ, ಆಭರಣ ಅಡಮಾನದಂತಹಮಾರ್ಗ ಕಂಡುಕೊಂಡಿದ್ದರು. ಅತ್ತ ರೋಗಿಯೂ ಬದುಕಿಲ್ಲ, ಇತ್ತ ಸಾಲವೂ ಏರಿಕೆಯಾಗುವಪರಿಸ್ಥಿತಿಯಲ್ಲಿ ಸಿಲುಕಿರುವ ಅಸಹಾಯಕರು ಪರಿಹಾರಕ್ಕಾಗಿ ತಾಲ್ಲೂಕು ಕಚೇರಿಗೆ ಅಲೆದಾಡುತ್ತಿದ್ದಾರೆ. ಹಾಸನ ಜಿಲ್ಲೆಯ ಹಲವರು ಕೋವಿಡ್‌ಗೆ ಬೆಂಗಳೂರಿನಲ್ಲಿ ಚಿಕಿತ್ಸೆಪಡೆದು ಮೃತಪಟ್ಟಿದ್ದಾರೆ. ಅವರ ಕುಟುಂಬಗಳನ್ನು ಪರಿಹಾರಕ್ಕೆ ಪರಿಗಣಿಸಿಯೇ ಇಲ್ಲ.ಘೋಷಣೆ ಮಾಡಿದ ಮೊತ್ತವನ್ನು ಕೊಡಲು ಹಣವಿಲ್ಲದ ಸ್ಥಿತಿ ತಲುಪಿದ್ದರೆ, ಸರ್ಕಾರಪಾಪರ್‌ ಆಗಿದೆ ಎಂದು ಘೋಷಿಸಿಕೊಳ್ಳಲಿ’ ಎಂದು ವಾಗ್ದಾಳಿ ನಡೆಸಿದರು.

‘ಹೊಳೆನರಸೀಪುರದ ಸರ್ಕಾರಿ ಕಾಲೇಜಿಗೆ ಎರಡು ಪಿಜಿ ಕೋರ್ಸ್‌ಗಳನ್ನೇ ನೀಡದ ಬಿಜೆಪಿಸರ್ಕಾರ, ಹಾಸನ ಜಿಲ್ಲೆಗೆ ಐಐಟಿ ಮಂಜೂರು ಮಾಡುತ್ತದೆಯೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.