ADVERTISEMENT

ಹೆಚ್ಚುವರಿ ರನ್ ವೇ ನಿರ್ಮಾಣಕ್ಕೆ ಸರ್ವೆ

ಬೂವನಹಳ್ಳಿ ವಿಮಾನ ನಿಲ್ದಾಣ: ಅಧಿಕಾರಿಗಳ ಜತೆ ಡಿ.ಸಿ ಸಭೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 13:41 IST
Last Updated 24 ಮಾರ್ಚ್ 2021, 13:41 IST
ಹಾಸನ ವಿಮಾನ ನಿಲ್ದಾಣ ಕಾಮಗಾರಿ ಕುರಿತು ಕೆಎಸ್‌ಐಐಡಿಸಿ ಹಾಗೂ ರೈಟ್‌ ಕಂಪನಿ ಅಧಿಕಾರಿಗಳ ಜತೆಜಿಲ್ಲಾಧಿಕಾರಿ ಆರ್‌.ಗಿರೀಶ್ ಸಭೆ ನಡೆಸಿದರು.
ಹಾಸನ ವಿಮಾನ ನಿಲ್ದಾಣ ಕಾಮಗಾರಿ ಕುರಿತು ಕೆಎಸ್‌ಐಐಡಿಸಿ ಹಾಗೂ ರೈಟ್‌ ಕಂಪನಿ ಅಧಿಕಾರಿಗಳ ಜತೆಜಿಲ್ಲಾಧಿಕಾರಿ ಆರ್‌.ಗಿರೀಶ್ ಸಭೆ ನಡೆಸಿದರು.   

ಹಾಸನ: ನಗರದ ಸಮೀಪದ ಬೂವನಹಳ್ಳಿ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿಯಾಗಿ ರನ್ ವೇ ನಿರ್ಮಿಸಲು ಅಗತ್ಯ
ಸರ್ವೆ ಕಾರ್ಯವನ್ನು ತ್ವರಿತವಾಗಿ ನಡೆಸಿ ಕಾಮಗಾರಿ ವೇಗವಾಗಿ ಆರಂಭಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ
ಆರ್. ಗಿರೀಶ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿಯಾಗಿ ಅಗತ್ಯವಿರುವ ಸೌಲಭ್ಯ
ಕಲ್ಪಿಸುವ ಕುರಿತು ಕೆಎಸ್‌ಐಐಡಿಸಿ ಹಾಗೂ ರೈಟ್‌ ಕಂಪನಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು,
ಈಗಾಗಲೇ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ಸಂಬಂಧಪಟ್ಟ ರೈತರಿಗೆ ಹಣ ಬಿಡುಗಡೆ ಮಾಡುವಂತೆ
ತಿಳಿಸಿದರು.

ಸರಿಯಾದ ರೀತಿಯಲ್ಲಿ ಕೆಎಸ್‌ಐಐಡಿಸಿ ಯಿಂದ ಕಾಮಗಾರಿಗೆ ನಿರ್ದೇಶನ ನೀಡಬೇಕು. ಕೆಪಿಟಿಎಸ್‌ನ ಹೈ
ಟೆನ್ಷನ್‌ ವಿದ್ಯುತ್‌ ಮಾರ್ಗದ ಗೋಪುರಗಳ ಸ್ಥಳಾಂತರ ಕಾರ್ಯ ಚುರುಕುಗೊಳಿಸುವಂತೆ ನಿರ್ದೇಶನ ನೀಡಿದ ಅವರು,
ಇದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಕಾಲಮಿತಿಯೊಳಗೆ ಗುಣಮಟ್ಟ ಕಾಯ್ದುಕೊಂಡು ಕೆಲಸ ನಿರ್ವಹಿಸಬೇಕು
ಎಂದರು

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್, ತಹಶೀಲ್ದಾರ್ ಶಿವಶಂಕರಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳುಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.