ADVERTISEMENT

ಅರಸೀಕೆರೆ: ಡೈಮಂಡ್ ಜ್ಯುಬಿಲಿ ಜಾಂಬೂರಿಗೆ ತಾಲ್ಲೂಕಿನ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 25 ಜನವರಿ 2025, 13:26 IST
Last Updated 25 ಜನವರಿ 2025, 13:26 IST
ಅರಸೀಕೆರೆ ತಮಿಳುನಾಡಿನಲ್ಲಿ ನಡೆಯುವ ಡೈಮಂಡ್ ಜುಬಿಲಿ ಜಾಂಬೂರಿ ಸ್ಕೌಟ್ಸ್-ಗೈಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ತಾಲ್ಲೂಕು ಆಡಳಿತದಿಂದ ಶುಭ ಕೋರಲಾಯಿತು
ಅರಸೀಕೆರೆ ತಮಿಳುನಾಡಿನಲ್ಲಿ ನಡೆಯುವ ಡೈಮಂಡ್ ಜುಬಿಲಿ ಜಾಂಬೂರಿ ಸ್ಕೌಟ್ಸ್-ಗೈಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ತಾಲ್ಲೂಕು ಆಡಳಿತದಿಂದ ಶುಭ ಕೋರಲಾಯಿತು   

ಅರಸೀಕೆರೆ: ತಮಿಳುನಾಡಿನಲ್ಲಿ ಜ.28ರಿಂದ ಫೆ 3ರವರೆಗೆ ನಡೆಯುವ ಡೈಮಂಡ್ ಜ್ಯುಬಿಲಿ ಜಾಂಬೂರಿ ಸ್ಕೌಟ್ಸ್-ಗೈಡ್ಸ್ ಕಾರ್ಯಕ್ರಮಕ್ಕೆ ತಾಲ್ಲೂಕಿನ ತಂಡಕ್ಕೆ ತಾಲ್ಲೂಕು ಆಡಳಿತದಿಂದ ಶುಭ ಕೋರಲಾಯಿತು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ‘ಸ್ಕೌಟ್ಸ್ ಮತ್ತು ಗೈಡ್ಸ್ 75 ವರ್ಷಗಳಿಂದ ವಿವಿಧ ಸೇವಾ ಕಾರ್ಯಗಳೊಂದಿಗೆ ಗುರುತಿಸಿಕೊಂಡು ಸಾರ್ವಜನಿಕ ವಲಯದಲ್ಲಿ ತನ್ನದೇ ಸ್ಥಾನ ಪಡೆದಿದೆ. ರಾಜ್ಯಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ರಾಷ್ಟ್ರೀಯ ಮಟ್ಟದಲ್ಲೂ ನಮ್ಮ ತಾಲ್ಲೂಕು ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರ. ಉತ್ತಮ ಸಾಧನೆ ಮಾಡಲಿ’ ಎಂದು ಹಾರೈಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳಿಯ ಸಂಸ್ಥೆ ಅಧ್ಯಕ್ಷ ಮುಖೇಶ್ ಮಾತನಾಡಿ, ‘ರಾಷ್ಟ್ರೀಯ ಜಂಬೋರೇಟ್ ಕಾರ್ಯಕ್ರಮದಲ್ಲಿ ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿ ಸೆಂಟ್ ಜಾನ್ ಹೈಸ್ಕೂಲ್‌ನ 21 ವಿದ್ಯಾರ್ಥಿಗಳು ಭಾಗವಹಿಸಲಿದ್ದು, ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಗೈಡ್ಸ್‌ಗಳಿಗೆ 10 ಅಂಕಗಳೊಂದಿಗೆ, ರಾಜ್ಯಮಟ್ಟದಲ್ಲೂ 5 ಅಂಕಗಳು ಲಭಿಸಲಿವೆ’ ಎಂದರು.

ಕಾರ್ಯದರ್ಶಿ ಎಸ್.ಎನ್. ಸುರೇಶ್, ತಹಶೀಲ್ದಾರ್ ಎಂ.ಜಿ. ಸಂತೋಷ್ ಕುಮಾರ್, ನಗರಸಭೆ ಅಧ್ಯಕ್ಷ ಎಂ. ಸಮೀವುಲ್ಲ, ಉಪಾಧ್ಯಕ್ಷ ಮನೋಹರ್, ಸ್ಥಳಿಯ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಿ.ಎಸ್. ಅರುಣ್ ಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ಇಒ ಸತೀಶ್, ಬಿಇಒ ಮೋಹನ್ ಕುಮಾರ್, ಡಿವೈಎಸ್ಪಿ ಲೋಕೇಶ್, ಪೌರಾಯುಕ್ತ ಕೃಷ್ಣಮೂರ್ತಿ, ಸ್ಥಳಿಯ ಸಂಸ್ಥೆ ಉಪಾಧ್ಯಕ್ಷ ಎಚ್.ಟಿ ಮಹದೇವ್, ಶಿಕ್ಷಕರಾದ ದುರ್ಗಪ್ಪ, ಶೋಭ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.