ADVERTISEMENT

ಧರ್ಮಸ್ಥಳ ಕುರಿತು ಅಪಪ್ರಚಾರ ಸಲ್ಲದು: ಲೋಕೇಶ್

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 7:11 IST
Last Updated 12 ಆಗಸ್ಟ್ 2025, 7:11 IST
ಚನ್ನರಾಯಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎನ್. ಲೋಕೇಶ್ ಮಾತನಾಡಿದರು. ಸಿ.ಎನ್. ಅಶೋಕ್, ಸಿ.ಎಸ್. ಮನೋಹರ್, ಕುಮಾರ್, ಸಿ.ಎಸ್. ಮನೋಹರ್ ಭಾಗವಹಿಸಿದ್ದರು
ಚನ್ನರಾಯಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎನ್. ಲೋಕೇಶ್ ಮಾತನಾಡಿದರು. ಸಿ.ಎನ್. ಅಶೋಕ್, ಸಿ.ಎಸ್. ಮನೋಹರ್, ಕುಮಾರ್, ಸಿ.ಎಸ್. ಮನೋಹರ್ ಭಾಗವಹಿಸಿದ್ದರು   

ಚನ್ನರಾಯಪಟ್ಟಣ: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಕಪ್ಪುಚುಕ್ಕೆ ತರುವ ಹುನ್ನಾರ ತರವಲ್ಲ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷÀತ್ತು ಅಧ್ಯಕ್ಷ ಎಚ್.ಎನ್. ಲೋಕೇಶ್ ಹೇಳಿದರು.
ಪಟ್ಟಣದ ಗಣಪತಿ ಪೆಂಡಾಲ್‍ನಲ್ಲಿ ಸೋಮವಾರ ವಿವಿಧ ಸಂಘ, ಸಂಸ್ಥೆಗಳು ಏರ್ಪಡಿಸಿದ್ದ ಪೂರ್ವಭಾವಿಸಭೆಯಲ್ಲಿ ಮಾತನಾಡಿದ ಅವರು, ಹಿಂದೂಗಳ ಶ್ರದ್ಧಾ, ಭಕ್ತಿ ಕೇಂದ್ರ ಸ್ಥಾನ ಎನ್ನಿಸಿಕೊಂಡ ಧರ್ಮಸ್ಥಳದ ಬಗ್ಗೆ ಕೆಲವರು ಪಿತೂರಿ ನಡೆಸುತ್ತಿದ್ದಾರೆ. ಅನಗತ್ಯವಾಗಿ ಕ್ಷೇತ್ರದಬಗ್ಗೆ ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ. ಧರ್ಮಸ್ಥಳ ಕ್ಷೇತ್ರ ಹಲವು ವರ್ಷಗಳಿಂದ ಜನಪರಸೇವೆ ಮಾಡುತ್ತಿದೆ. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಆದರೂ ಕೆಲವರು ಆರೋಪ ಮಾಡುತ್ತಿದ್ದಾರೆ. ಕ್ಷೇತ್ರದ ಕುರಿತು ಮಾತನಾಡುವ ನೈತಿಕತೆ ಇವರಿಗಿಲ್ಲ ಎಂದು ಟೀಕಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಬಗ್ಗೆ ಮಾಡುತ್ತಿರುವ ಆರೋಪದಲ್ಲಿ ಸತ್ಯವಿಲ್ಲ. ಅಪಪ್ರಚಾರವನ್ನು ಸಹಿಸಲು ಸಾಧ್ಯವಿಲ್ಲ. ಜನರ ಮೌನವನ್ನು ದೌರ್ಬಲ್ಯ ಎಂದು ತಿಳಿಯಬಾರದು. ಅನಗತ್ಯ ಟೀಕೆ ಮುಂದುವರೆÀದಿರುವುದರಿಂದ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದರು.
ಪರಿಸರವಾದಿ ಸಿ.ಎನ್. ಅಶೋಕ್ ಮಾತನಾಡಿ, ಕ್ಷೇತ್ರದ ಕುರಿತು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರಳಿಲ್ಲ ಎಂದರು.
ಧರ್ಮರಕ್ಷಣಾ ವೇದಿಕೆಯ ಸಂಚಾಲಕ ಜಯರಾಂ ಮಾತನಾಡಿ, ಸಂಕಷ್ಟದಲ್ಲಿರುವ ಧರ್ಮಸ್ಳಳದ ನೆರವಿಗೆ ಧಾವಿಸುವ ದೃಷ್ಠಿಯಿಂದ ಆಗಸ್ಟ್ 16 ರಂದು ಪಟ್ಟಣದಲ್ಲಿ ಧರ್ಮಸ್ಥಳದ ಪರವಾಗಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಧರ್ಮರಕ್ಷಣಾ ವೇದಿಕೆಯ ಸಂಚಾಲಕರಾದ ಪುರಿಮಂಜು, ಕುಮಾರ್, ಮುಖಂಡರಾದ ಗಿರೀಶ್, ಜಗದೀಶ್, ಸಮಾಜಸೇವಕ ಸಿ.ಎಸ್. ಮನೋಹರ್, ಸಿ.ವೈ. ಸತ್ಯನಾರಾಯಣ್, ವಿಶ್ವನಾಥ್, ವೆಂಕಟೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.