ADVERTISEMENT

ಕೆರೆ ಮೀನು ತಿಂದು ಇಬ್ಬರು ಸಾವು: 15 ಮಂದಿ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 3 ಮೇ 2024, 18:59 IST
Last Updated 3 ಮೇ 2024, 18:59 IST
<div class="paragraphs"><p>ಮೀನು </p></div>

ಮೀನು

   

ಕೊಣನೂರು: ಸಮೀಪದ ಬಸವನಹಳ್ಳಿಯಲ್ಲಿ ಕೆರೆ ಮೀನು ತಿಂದು ಗ್ರಾಮದ ರವಿಕುಮಾರ್ (46) ಹಾಗೂ ಕೆ.ಆರ್. ನಗರ ತಾಲ್ಲೂಕಿನ ಸನ್ಯಾಸಿಪುರದ ಪುಟ್ಟಮ್ಮ (50) ಮೃತಪಟ್ಟಿದ್ದು, 15 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

ನೀರಿಲ್ಲದೇ ಬತ್ತಿದ್ದ ಗ್ರಾಮದ ಕೆರೆ ಕೆಸರಿನಲ್ಲಿದ್ದ ಮೀನುಗಳನ್ನು ಗ್ರಾಮಸ್ಥರು ಹಿಡಿದು ಶುಚಿಗೊಳಿಸಿ ಅಡುಗೆ ಮಾಡಿದ್ದರು. ಅದನ್ನು ಸೇವಿಸಿದ ಗ್ರಾಮಸ್ಥರಲ್ಲಿ ಹಲವರು ಅಸ್ವಸ್ಥಗೊಂಡಿದ್ದರು. ಕೂಡಲೇ ಎಲ್ಲರನ್ನೂ ಅರಕಲಗೂಡು ಹಾಗೂ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪೈಕಿ ಇಬ್ಬರು ಮೃತಪಟ್ಟರು.

ADVERTISEMENT

ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಗ್ರಾಮಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮೃತರ ಮನೆಗಳಿಗೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ‘ಮೀನು ತಿಂದ ನಂತರ ಈ ರೀತಿಯಾಗಿದೆ ಎಂದು ಜನ ಹೇಳುತ್ತಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕಾರಣ ಸ್ಪಷ್ಟವಾಗಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.