ADVERTISEMENT

ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಗೆ ಹಾಸನದ ಮಹಿಳೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 3:36 IST
Last Updated 25 ಅಕ್ಟೋಬರ್ 2021, 3:36 IST
ಮಕ್ಕಳೊಂದಿಗೆ ಎಂ.ಬಿ.ಪ್ರೀತಿ ಷಣ್ಮುಖ
ಮಕ್ಕಳೊಂದಿಗೆ ಎಂ.ಬಿ.ಪ್ರೀತಿ ಷಣ್ಮುಖ   

ಹೊಳೆನರಸೀಪುರ (ಹಾಸನ): ತಾಲ್ಲೂಕಿನ ಬೆಟ್ಟಸಾತೇನಹಳ್ಳಿ ಗ್ರಾಮದ ಎಂ.ಬಿ.ಪ್ರೀತಿ ಷಣ್ಮುಖ ಅವರು ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಗೆ ಆಯ್ಕೆಯಾಗಿದ್ದಾರೆ.

ಎಂಟು ವರ್ಷಗಳಿಂದ ಅವರು ಭಾರತೀಯ ಸೇನೆಯಲ್ಲಿ ಕಮಾಂಡೆಂಟ್ ಆಗಿ ದೇಶ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸೇನೆ ನಡೆಸುವ ರೈಫಲ್‌ ಶೂಟಿಂಗ್ ಆಯ್ಕೆ ಪರೀಕ್ಷೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಶಾಂತಿಪಾಲನಾ ಪಡೆಯಲ್ಲಿ ಕಾರ್ಯನಿರ್ವಹಿಸಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈಗಾಗಲೇ ಕರ್ತವ್ಯಕ್ಕೆ ತೆರಳಿದ್ದಾರೆ.

ADVERTISEMENT

ಪ್ರೀತಿ ಅವರಿಗೆ ಇಬ್ಬರು ಮಕ್ಕಳಿದ್ದು, ಪತಿ ಷಣ್ಮುಖ ಬೆಟ್ಟಸಾತೇನಹಳ್ಳಿ ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.