ಚನ್ನರಾಯಪಟ್ಟಣ: ಪಟ್ಟಣದ ಶಾಲಿನಿ ವಿದ್ಯಾಶಾಲೆಯಲ್ಲಿ ಶನಿವಾರ ಶಾಲಾ ಆವರಣದಲ್ಲಿ ಗಿಡನೆಡುವ ಮೂಲಕ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಎ. ಅರುಣಕುಮಾರಿ ಮಾತನಾಡಿ, 'ವಿದ್ಯಾರ್ಥಿಗಳು ಶಿಕ್ಷಣದ ಜತೆಯಲ್ಲಿ ಯೋಗಾಸನ, ಪ್ರಾಣಾಯಾಮ ಮಾಡಬೇಕು. ದೇಹ ಮತ್ತು ಮನಸನ್ನು ಸಮಸ್ಥಿತಿಗೆ ತರುವ ಶಕ್ತಿ ಯೋಗಕ್ಕೆ ಇದ್ದು, ವಿದ್ಯಾರ್ಥಿಗಳು ನಿತ್ಯ ಯೋಗಾಸನ ಮಾಡಬೇಕು’ ಎಂದು ಸಲಹೆ ನೀಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕುಸುಮಾ ಮಾತನಾಡಿ, ‘ಪ್ರಪಂಚಕ್ಕೆ ಯೋಗಾಸನವನ್ನು ಪರಿಚಯಿಸಿದ್ದು ಭಾರತ. ಸದೃಢ ಆರೋಗ್ಯ ಮತ್ತು ಮನ ಶಾಂತಿಗೆ ಯೋಗಾಸನದ ಅವಶ್ಯಕತೆ ಇದೆ’ ಎಂದು ಹೇಳಿದರು.
ರಾಜ್ಯಮಕ್ಕಳ ಸಾಹಿತ್ಯ ಪರಿಷತ್ತು ಅದ್ಯಕ್ಷ ಸಿ.ಎನ್. ಅಶೋಕ್ ಮಾತನಾಡಿ, ‘ಯೋಗಾಸನ ಮಾಡುವುದರಿಂದ ರೋಗಗಳಿಂದ ದೂರ ಇರಬಹುದು’ ಎಂದು ತಿಳಿಸಿದರು.
ಪುರಸಭೆಯ ಮುಖ್ಯಾಧಿಕಾರಿ ಆರ್. ಯತೀಶ್‍ಕುಮಾರ್, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಂಜುಂಡೇಗೌಡ, ಪ್ರಾಂಶುಪಾಲರಾದ ಮಮತಾ, ಮುಖ್ಯ ಶಿಕ್ಷಕಿ ದೀಪ್ತಿ, ಶಿಕ್ಷಕ ಸಮಾಜಸೇವಕ ಸಿ.ಎಸ್. ಮನೋಹರ್, ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಸಿ.ಎ. ವಿವೇಕ್, ಶಿಕ್ಷಕರಾದ ಲತಾ, ಪದ್ಮಶ್ರೀ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.