ಬ್ಯಾಡಗಿ: ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಆಗ್ರಹಿಸಿ ತಾಲ್ಲೂಕಿನ ರಾಮಗೊಂಡನಹಳ್ಳಿ ಗ್ರಾಮದ ಮಹಿಳೆಯರು ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರಿಗೆ ಮನವಿ ಸಲ್ಲಿಸಿದರು.
ಗ್ರಾಮದ ವಿವಿಧ ಮಹಿಳಾ ಸಂಘಟನೆಗಳು ಹಾಗೂ ಗ್ರಾಮಸ್ಥರು ಬೆಂಬಲ ವ್ಯಕ್ತಪಡಿಸಿದ್ದರು. ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಬಳಿಕ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಅಕ್ರಮ ಮದ್ಯ ಮಾರಾಟಕ್ಕೆ ಬೆಂಬಲ ನೀಡುತ್ತಿರುವ ಅಬಕಾರಿ ಅಧಿಕಾರಿಯನ್ನು ಅಮಾನತ್ತುಗೊಳಿಸಿ ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿದರು.ಮಹಿಳಾ ಸಂಘದ ಅಧ್ಯಕ್ಷ ಕಮಲವ್ವ ಮುದಿಗೌಡ್ರ ಮಾತನಾಡಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆದು, ಮದ್ಯ ಪಾನಮುಕ್ತ ಗ್ರಾಮವನ್ನಾಗಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಂಜಪ್ಪ ಕೆಂಚನಗೌಡ್ರ, ಬಸವರಾಜ ಮುದಿಗೌಡರ, ಶಿವರಾಜ ಬಾಗಮ್ಮನವರ, ಶಂಕರ ಸಾಖರೆ, ಮಹೇಂದ್ರ ಹಂಚಿನಮನಿ, ಗಂಗಾಧರ ತಿಪಲಾಪುರ, ಶಿವಪ್ಪ ಕೆಂಚನಗೌಡ್ರ, ಮಾಲಿಂಗಪ್ಪ ಆಡಿನವರ, ನಾಗವ್ವ ಪೂಜಾರ, ಮಹದೇವಕ್ಕ ಹಿರೇಅಣಜಿ, ನಾಗವ್ವ ಆಡಿನವರ, ಮಾಲತೇಶ ಹಂಚಿನಮನಿ, ಎಚ್.ಬಿ.ಕೆಂಚನಗೌಡ್ರ, ಎನ್.ಡಿ.ಬಾಗಮ್ಮನವರ, ಬಿ.ಐ.ಕಲ್ಲಪ್ಪನವರ, ಸಿ.ಎನ್..ಆಡಿನವರ, ಐ.ಎಸ್.ಹಿರೇಅಣಜಿ, ದುರ್ಗಾದೇವಿ, ಮಾತಂಗೇಶ್ವರಿ, ಸರಸ್ವತಿ ಅಜ್ಜಮ್ಮದೇವಿ ಹಾಗೂ ಗ್ರಾಮದ ಮಹಿಳಾ ಮಂಡಳದ ಸದಸ್ಯರು ಸೇರಿದಂತೆ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.