ADVERTISEMENT

ಆರ್ಥಿಕ ಸಂಸ್ಥೆಗಳು ವಿಶ್ವಾಸ, ಪ್ರಾಮಾಣಿಕತೆ ಉಳಿಸಿಕೊಳ್ಳಲಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2011, 7:15 IST
Last Updated 27 ಸೆಪ್ಟೆಂಬರ್ 2011, 7:15 IST

ಹಾನಗಲ್: `ಆರ್ಥಿಕ ಸಂಸ್ಥೆಗಳು ವಿಶ್ವಾಸ, ಪ್ರಾಮಾಣಿಕತೆ ಉಳಿಸಿಕೊಂಡರೆ ಮಾತ್ರ ಅವುಗಳ ಬೆಳವಣಿಗೆ ಸಾಧ್ಯವಿದ್ದು, ಅವ್ಯಹಾರ ಹಾಗೂ ಆರ್ಥಿಕ ಹಿಡಿತ ವಿಲ್ಲದ ಸಂಘ ಸಂಸ್ಥೆಗಳಿಗೆ ಭವಿಷ್ಯ ಇರು ವುದಿಲ್ಲ~ ಎಂದು ಜಿಪಂ ಸದಸ್ಯ ಪದ್ಮನಾಭ ಕುಂದಾಪುರ ಅಭಿಪ್ರಾಯಪಟ್ಟರು.

ಹಾನಗಲ್ಲಿನಲ್ಲಿ ಭಾನುವಾರ ನಡೆದ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಹಣದ ವಿಷಯದಲ್ಲಿ ಶುದ್ಧಹಸ್ತ ರಾಗಿರಬೇಕು. ಮುಖ್ಯವಾಗಿ ಶಿಕ್ಷಕರ ಪತ್ತಿನ ಸಂಘಗಳತ್ತ ಇಡೀ ಸಮಾಜ ತೆರೆದ ಕಣ್ಣಿನಿಂದ ನೋಡುತ್ತದೆ. ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಶಿಕ್ಷಕರು ತಮ್ಮ ಪತ್ತಿನ ಸಂಘವೂ ಕೂಡ ಆದರ್ಶವಾಗಿರುವಂತೆ ಜಾಗೃತಿವಹಿಸಿ ಮಾದರಿಯಾಗಬೇಕು~ ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಮಾರುತಿ ಶಿಡ್ಲಾಪೂರ, ಕ್ಷೇತ್ರ       ಶಿಕ್ಷಣಾಧಿಕಾರಿ ಎಚ್.ಬಿ. ಬಸವರಾಜಪ್ಪ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಎಂ.ಎ.ಜಾಗೀರ ದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕಿನ ಆರ್ಥಿಕ ಪ್ರಗತಿಯನ್ನು ವಿವರಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿ.ಜಿ. ಪಾಟೀಲ, ಉಪಾಧ್ಯಕ್ಷ ಲವಕುಮಾರ ಡಿ. ಜಿಲ್ಲಾ ಉಪಾಧ್ಯಕ್ಷ ಎಂ.ಎನ್.ಚಿಲಕ ವಾಡ, ಕಾರ್ಯದರ್ಶಿ ಬಿ.ಎಸ್.ಚಲ್ಲಾಳ, ಮುಂತಾದವರು ವೇದಿಕೆಯಲಿದ್ಲ್ದರು.

ಸನ್ಮಾನ: ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಎಸ್.ಬಿ.ಮೇಲಿನ ಮನಿ, ಎ.ಬಿ.ದೀಕ್ಷಿತ, ಐ.ಬಿ.ಹೂಗಾರ, ಆರ್.ಎ.ಕೆಲೂರ, ಎಚ್.ಕೆ.ಗಡಾದ, ರಾಜ್ಯ ಮಟ್ಟದ ಬಸವಜ್ಯೋತಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ಶಿವಕುಮಾರ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಎಸ್.ಎಸ್.ಗೊಂದಿ ಸಂಗಡಿಗರು ಪ್ರಾರ್ಥನೆ ಹಾಡಿದರು. ಆರ್.ಎಫ್. ತಿರುಮಲೆ ಸ್ವಾಗತಿಸಿದರು. ಎಸ್.ಎಮ್.ದೊಡ್ಡಮನಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ದಿನೇಶ ಬೇದ್ರೆ ವಾರ್ಷಿಕ ವರದಿ ಓದಿದರು. ಜಯ ಲಕ್ಷ್ಮೀ. ಆರ್ ನಿರೂಪಿಸಿದರು. ಪಿ.ಎಂ. ಚಲವಾದಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.