ADVERTISEMENT

ಇಂದು ಹೋಳಿ: ಬಿಗಿ ಬಂದೋಬಸ್ತ್

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 6:00 IST
Last Updated 6 ಏಪ್ರಿಲ್ 2013, 6:00 IST

ಅಕ್ಕಿಆಲೂರ: ಹೋಳಿ ಪ್ರಯುಕ್ತ ನಡೆ ಯುವ ಓಕಳಿಯ ಹಿನ್ನೆಲೆಯಲ್ಲಿ  ಶುಕ್ರ ವಾರ ಸಂಜೆ 500  ಪೊಲೀಸ್ ಸಿಬ್ಬಂದಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನಸಿಂಗ್ ರಾಠೋರ್ ನೇತೃತ್ವದಲ್ಲಿ ಮುಖ್ಯ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು.

ಹಾವೇರಿ ರಸ್ತೆಯಲ್ಲಿರುವ ಪೊಲೀಸ್ ಹೊರ ಠಾಣೆಯಿಂದ ಸಂಚಲನ ಆರಂಭಗೊಂಡು ಅಂಬೇಡ್ಕರ್ ಸರ್ಕಲ್, ವಿ.ಎಂ.ರಸ್ತೆ, ಕುಂಬಾರ ಓಣಿ, ಇಂದಿರಾ ನಗರ, ಮಾರುತಿ ನಗರ, ಬಸ ವೇಶ್ವರ ನಗರ, ದುಂಡಿಬಸವೇಶ್ವರ ಓಣಿ, ಕಮಾಟಿ ಓಣಿ, ಸಿ.ಎಂ.ಉದಾಸಿ ಮುಖ್ಯರಸ್ತೆ, ಪೇಟೆ ಓಣಿ, ಹಾನಗಲ್ಲ-ಹಾವೇರಿ ರಸ್ತೆ, ಕುಮಾರ ನಗರ, ಬಸ್ ಸ್ಟ್ಯಾಂಡ್ ಪ್ರದೇಶ ಸೇರಿ ದಂತೆ ಮುಖ್ಯ ರಸ್ತೆಗಳಲ್ಲಿ ಹಾಯ್ದು ಪುನಃ ಹೊರ ಠಾಣೆ ತಲುಪಿ ಮುಕ್ತಾಯ ಗೊಂಡಿತು.

  ನೇತೃತ್ವ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನಸಿಂಗ್ ರಾಠೋರ್, ಪ್ರತಿಯೊಬ್ಬರೂ  ಶಾಂತಿ, ಸಾಮರಸ್ಯದಿಂದ ಹೋಳಿ ಆಚರಿಸುವ ಮೂಲಕ ಸೌಹಾರ್ದತೆಯ ಸಂದೇಶ ಸಾರುವ ಅಗತ್ಯವಿದೆ ಎಂದರು.

ಹಾನಗಲ್ಲ ಪೊಲೀಸ್ ವೃತ್ತ ನಿರೀಕ್ಷಕ ಬಿ.ಎಸ್.ಮಂಟೂರ, ಸಬ್‌ಇನ್ಸ್ ಪೆಕ್ಟರ್ ರಂಗನಾಥ ನೀಲಮ್ಮನವರ ಸೇರಿದಂತೆ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಸೇರಿದಂತೆ 500 ಕ್ಕೂ ಅಧಿಕ ಸಿಬ್ಬಂದಿ ಈ ವೇಳೆ ಹಾಜರಿದ್ದರು.

ಖಾಕಿ ಕಣ್ಗಾವಲಿನಲ್ಲಿ ಹೋಳಿ..! ಅಕ್ಕಿಆಲೂರಿನಲ್ಲಿ  ಓಕಳಿ ಖಾಕಿ ಕಣ್ಗಾವ ಲಿನಲ್ಲಿ ನಡೆಯಲಿದೆ. ಜಿಲ್ಲೆಯ ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಬಿಗಿ ಭದ್ರತೆ ಒದಗಿಸಲಾಗಿರುವುದು ಕಂಡು ಬರುತ್ತಿದೆ. ರಾಜ್ಯದ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ನಡೆದಿರುವ ಅಚಾತುರ್ಯಗಳನ್ನು ಗಮನದಲ್ಲಿ ಟ್ಟುಕೊಂಡು ಇಲ್ಲಿಯೂ ಕೂಡ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಈಗಾಗಲೇ ಮದ್ಯ ಮಾರಾಟ ನಿಷೇಧಿಸಲಾಗಿದೆ. ಊರಿನ ನಾಲ್ಕೂ ಪ್ರವೇಶ ದಿಕ್ಕುಗಳಲ್ಲಿ ಪ್ರವೇಶಿಸುವ ವಾಹನಗಳ ತಪಾಸಣೆ ಕೈಗೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.