ADVERTISEMENT

ಕಮ್ಮಾರಿಕೆಗೆ ಆಧುನಿಕ ಸ್ಪರ್ಶ ನೀಡಿದ ಯುವಕ

ವಿಜಯ್ ಹೂಗಾರ
Published 6 ಆಗಸ್ಟ್ 2012, 8:55 IST
Last Updated 6 ಆಗಸ್ಟ್ 2012, 8:55 IST
ಕಮ್ಮಾರಿಕೆಗೆ ಆಧುನಿಕ ಸ್ಪರ್ಶ ನೀಡಿದ ಯುವಕ
ಕಮ್ಮಾರಿಕೆಗೆ ಆಧುನಿಕ ಸ್ಪರ್ಶ ನೀಡಿದ ಯುವಕ   

ಹಾವೇರಿ: ಜಾಗತೀಕರಣದ ಪ್ರಭಾವಳಿ ವ್ಯಾಪಕವಾಗಿರುವ ಇಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ವೃತ್ತಿಗಳು ಒಂದೊಂದೆ ನೆಲಕಚ್ಚುತ್ತಿವೆ. ಕೆಲ ವೊಂದು ವೃತ್ತಿಗಳು ಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿವೆ.

ಇಂತಹ ಅಪ್ಪಟ ಗ್ರಾಮೀಣ ವೃತ್ತಿ ಯಾದ ಕಮ್ಮಾರಿಕೆಯನ್ನು ಉಳಿಸಿ ಕೊಳ್ಳಲು ನಗರದ ಅವಿದ್ಯಾವಂತ ಯುವಕನೊಬ್ಬ ಮಷಿನ್ ತಯಾರಿಸುವ ಮೂಲಕ ತನ್ನ ವೃತ್ತಿಗೆ ಆಧುನಿಕ ಸ್ಪರ್ಶ ನೀಡುವಲ್ಲಿ ಯಶಸ್ವಿಯಾಗಿದ್ದಾನಲ್ಲದೇ, ಇತರ ವೃತ್ತಿ ಬಾಂಧವರಿಗೆ ಮಾದರಿ ಯಾಗಿದ್ದಾನೆ.

ನಗರದ ಶಿವಯೋಗಿಶ್ವರ ನಗರದ ರಮೇಶ ಕೃಷ್ಣಪ್ಪ ಕಮ್ಮಾರ ಎಂಬ ಯುವಕ ಶಾಲೆ ಕಲೆತಿದ್ದು ಕೇವಲ ಎರಡನೇ ಇಯತ್ತೆ ಮಾತ್ರ. ಆದರೆ, ಕಳೆದ 35 ವರ್ಷಗಳಿಂದ ಕಮ್ಮಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡ ತನ್ನ ತಂದೆ, ತಾಯಿಗೆ ಸಹಾಯಕನಾಗಿದ್ದಾನೆ.

ವಯಸ್ಸಾದ ತಂದೆ ತಾಯಂದಿರು ದಿನ ನಿತ್ಯ ಕಬ್ಬಿಣದ ಕೆಲಸದಲ್ಲಿ ಕಷ್ಟ ಪಡುತ್ತಿದ್ದರು. ಕೆಲವು ಬಾರಿ ದಿನಕ್ಕೆ 500 ರೂ. ಕೂಲಿ ಕೊಟ್ಟರೂ ಸರಿ ಯಾದ ಸಮಯಕ್ಕೆ ಕೆಲಸಗಾರರು ಸಿಗುತ್ತಿರಲಿಲ್ಲ. ಇದರಿಂದ ವೃತ್ತಿ ನಡೆಸುವುದೇ ಕಷ್ಟವಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ವೃತ್ತಿಯೂ ಉಳಿಯುವುದಿಲ್ಲ. ಬದುಕು ನಡೆಸುವುದು ಕಷ್ಟವಾಗುತ್ತದೆ ಎಂದು ರಮೇಶ ಯೋಚಿಸಿದ ಪರಿಣಾಮವೇ ಹುಟ್ಟಿಕೊಂಡಿದ್ದು ಕಮ್ಮಾರಿಕೆಯ `ಗನ್ ಮಷಿನ್~.

ಈಗಾಗಲೇ ಮಾರುಕಟ್ಟೆಯಲ್ಲಿ ಈ ತರಹದ ಮಷಿನ್‌ಗಳು ಇದ್ದರೂ ಅವು ಗಳ ಬೆಲೆ ಲಕ್ಷಾಂತರ ರೂ. ಇದೆ. ಅಷ್ಟು ದುಡ್ಡು ಕೊಟ್ಟು ಅದನ್ನು ಖರೀದಿ ಸುವುದು ರಮೇಶನಿಗೆ ಅಸಾಧ್ಯವಾ ಗಿತ್ತು. ಅದು ಅಲ್ಲದೇ ಮಾರುಕಟ್ಟೆಯಲ್ಲಿ ದೊರೆಯುವ ಮಷಿನ್ ಕಮ್ಮಾರಿಕೆ ಅಷ್ಟೊಂದು ಅನುಕೂಲಕರವಾಗಿರಲಿಲ್ಲ. ಒಮ್ಮೆ ರಮೇಶ ಶಿವಮೊಗ್ಗ ಜಿಲ್ಲೆಯ ಮಲೆಬೆನ್ನೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋದಾಗ ಅಲ್ಲಿದ್ದ ಗನ್ ಮಷಿನ್‌ನ ಚಿತ್ರವನ್ನು ಮೊಬೈಲ್‌ನಲ್ಲಿ ಚಿತ್ರಿಸಿಕೊಂಡು ಬಂದಿದ್ದಾನಲ್ಲದೇ, ಅದರಂತೆಯೇ ಮಷಿನ್ ತಯಾರಿಕೆಗೆ ಬೇಕಾದ ವಸ್ತುಗಳನ್ನು ಖರೀದಿಸಿ ತಾನೆ ಯಾವುದೇ ಎಂಜಿನಿಯರ್‌ಗೂ ಕಮ್ಮಿ ಇಲ್ಲದಂತೆ ಕೇವಲ 90 ಸಾವಿರ ರೂ.ಗಳಲ್ಲಿ ಗನ್ ಮಷಿನ್ ತಯಾ ರಿಸಿದ್ದಾನೆ.

ರಮೇಶ ಮಷಿನ್ ತಯಾರಿಕೆಗೆ ಎರಡು ಎಚ್‌ಪಿ ಮೋಟರ್, ಕಬ್ಬಿಣದ ಪಾಟಾ, ಕಬ್ಬಿಣದ ಗಾಲಿಗಳನ್ನು ಬಳಸಿದ್ದಾನೆ. ವಿದ್ಯುತ್‌ನಿಂದ ನಡೆಯುವ ಈ ಗನ್ ಮಷಿನ್ ಇಡೀ ದಿನ ಇಬ್ಬರು ಮನುಷ್ಯರು ಮಾಡುವ ಎಲ್ಲ ಕೆಲಸ ವನ್ನು ಒಂದೆರಡು ಗಂಟೆಗಳಲ್ಲಿ ಮಾಡಿ ಮುಗಿಸುತ್ತಿದೆ. ಅಷ್ಟೇ ಅಲ್ಲದೇ ಕಬ್ಬಿಣದ ವಸ್ತುಗಳನ್ನು ಕಾಯಿಸಲು ಬಳಸುವ `ತಿದಿ~ (ಗಾಳಿ ಬಿಡುವ ಸಾಧನ)ಯನ್ನು ಜಗ್ಗಲು ಒಬ್ಬ ಕಾಯಂ ಆಗಿ ಬೇಕಾಗುತ್ತಿತ್ತು. ಅದಕ್ಕೂ ಅರ್ಧ ಎಚ್.ಪಿ.ಯ ಗಾಳಿ ಯಂತ್ರವನ್ನು ಅಳ ವಡಿಸಿ ಆ ಕೆಲಸವನ್ನು ಹಗುರಗೊಳಿ ಸಿದ್ದಾನೆ.

ತಾನು ತಯಾರಿಸಿದ ಮಷಿನ್ ನೋಡಿ ಬಹಳಷ್ಟು ವೃತ್ತಿ ಬಾಂಧವರು ಅಂತಹದೇ ಮಷಿನ್ ತಯಾರಿಸಿ ನೀಡು ವಂತೆ ಕೇಳಿದ್ದಾರೆ. ಆದರೆ, ಕೆಲಸದ ಒತ್ತಡದಲ್ಲಿ ಸಾಧ್ಯವಾಗಿಲ್ಲ. ಮುಂಬ ರುವ ದಿನಗಳಲ್ಲಿ ಮಷಿನ್ ತಯಾರಿಕೆಗೆ ಒತ್ತು ನೀಡುವುದಾಗಿ ತಿಳಿಸುತ್ತಾರೆ ರಮೇಶ ಕಮ್ಮಾರ.

ಮಷಿನ್‌ಗಾಗಿ ಸಾಲ: `ಸಣ್ಣ ಉದ್ಯಮಗಳ ಪುನಶ್ಚೇತನಕ್ಕೆ ಸರ್ಕಾರ ನೀಡುವ ಧನ ಸಹಾಯ ಪಡೆಯಲು ಎಷ್ಟೇ ಪ್ರಯತ್ನಪಟ್ಟರೂ ಪ್ರಯೋಜನ ವಾಗಿಲ್ಲ. ಕೊನೆಗೆ ಬಡ್ಡಿಯಲ್ಲಿ ಖಾಸಗಿ ಸಾಲ ಪಡೆದು ಮಷಿನ್ ತಯಾರಿ ಸಿದ್ದೇವೆ. ಮಾಡಿದ ಸಾಲ ಇನ್ನೂ ತೀರಿಲ್ಲ. ಅದಕ್ಕಾಗಿ ಮನೆಯಲ್ಲಿನ ಎಲ್ಲರೂ ದುಡಿಯುತ್ತಿದ್ದೇವೆ~ ಎನ್ನುತ್ತಾರೆ ರಮೇಶನ ತಂದೆ ಕೃಷ್ಣಪ್ಪ ಕಮ್ಮಾರ.

`ನಮ್ಮ ಮಗನೇ  ಗನ್ (ದೊಡ್ಡ ಪ್ರಮಾಣದ ಸುತ್ತಿಗೆ) ಹೊಡೆಯುವ ಕೆಲಸ ಮಾಡುತ್ತಿದ್ದನು. ನಿತ್ಯ ಐದಾರು ಗಂಟೆ ಗನ್ ಹೊಡೆದರೆ ಮನುಷ್ಯ ಏನೂ ಉಳಿಯುವುದಿಲ್ಲ. ನಾವೆಲ್ಲ (ದಂಪತಿ) ಜೀವನವನ್ನು ಇದರಲ್ಲಿಯೇ ಸವೆಸಿದ್ದೇವೆ. ಮಕ್ಕಳು ಸಣ್ಣ ವಯಸ್ಸಿ ನಲ್ಲಿಯೇ ಕಠಿಣ ಕೆಲಸದಲ್ಲಿ ತೊಡಗಿ ದರೆ, ಅವರ ಭವಿಷ್ಯವೇನು ಎಂಬ ಚಿಂತೆ ಕಾಡುತ್ತಿತ್ತು. ಮಗ ಮಷಿನ್ ತಯಾ ರಿಸಿದ್ದು ಬಹಳ ಸಂತಸವಾಗಿದೆ~ ಎನ್ನು ತ್ತಾರೆ ರಮೇಶ ತಾಯಿ ಮಂಜಮ್ಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.