ಹಿರೇಕೆರೂರ: ಕೆಲವು ಕಾಳು ಕಟ್ಟುವ ಹಂತದಲ್ಲಿವೆ, ಇನ್ನು ಕೆಲವು ಆಳೆತ್ತರ ಬೆಳೆದಿವೆ. ಮತ್ತೆ ಕೆಲವು ಮೊಳಕೆಯ ಹಂತದಲ್ಲಿವೆ. ಇದು ತಾಲ್ಲೂಕಿನಲ್ಲಿ ಬಿತ್ತನೆಯಾಗಿರುವ ಗೋವಿನ ಜೋಳದ ಚಿತ್ರಣ. ವಿಳಂಬವಾಗಿ ಆರಂಭವಾದ ಮಳೆ ಹಾಗೂ ಅಸಮಾನ ಮಳೆಯ ಹಂಚಿಕೆ ಇದಕ್ಕೆ ಕಾರಣ.
ಮಳೆಗಾಲ ವಿಳಂಬವಾಗಿದ್ದರಿಂದ ಬರ ದಲ್ಲಿಯೇ ಬಹಳಷ್ಟು ರೈತರು ಗೋವಿನ ಜೋಳವನ್ನು ಬಿತ್ತನೆ ಮಾಡಿದ್ದರು. ಸೂಕ್ತ ಹದವಿಲ್ಲದೇ ಕಾಳುಗಳು ಸರಿ ಯಾಗಿ ಹುಟ್ಟಲಿಲ್ಲ, ಹತ್ತಕ್ಕೆ ಒಂದು ಕಾಳು ಹುಟ್ಟಿತು.
ಇದು ರೈತರನ್ನು ಮತ್ತಷ್ಟು ಸಂಕಟಕ್ಕೆ ಈಡು ಮಾಡಿತು.
ಅನಿವಾರ್ಯವಾಗಿ ಬಹಳಷ್ಟು ರೈತರು ಇದನ್ನು ಕುಂಟೆ ಹೊಡೆದು ಮತ್ತೆ ಬಿತ್ತನೆ ಮಾಡಿದ್ದಾರೆ, ಇನ್ನೂ ಕೆಲವರು ಬಿತ್ತನೆ ಮಾಡುತ್ತಿದ್ದಾರೆ. ಕೊಳವೆ ಬಾವಿಗಳನ್ನು ಹೊಂದಿರುವ ರೈತರು ಸಕಾಲದಲ್ಲಿ ಗೋವಿನ ಜೋಳವನ್ನು ಬಿತ್ತನೆ ಮಾಡಿ ಕೊಂಡಿದ್ದಾರೆ. ಆದರೆ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೇ ಪರಿತಪಿಸುತ್ತಿದ್ದಾರೆ.
ಕಳೆದ ಒಂದು ವಾರದಿಂದ ಹಂಸ ಭಾವಿ ಮತ್ತು ಹಿರೇಕೆರೂರ ಹೋಬಳಿ ಯಲ್ಲಿ ಹದ ಮಳೆಯಾಗಿರುವುದು ರೈತರ ಕೃಷಿ ಚಟುವಟಿಕೆ ಹೆಚ್ಚಲು ಕಾರಣವಾಗಿದೆ.
ಹತ್ತಿ ಹಾಗೂ ಗೋವಿನ ಜೋಳ ವನ್ನು ಹರಗುವ ಹಾಗೂ ಕಳೆ ತೆಗೆಯುವ ಕಾರ್ಯ ಭರದಿಂದ ಸಾಗಿದೆ. ರಟ್ಟೀಹಳ್ಳಿ ಹೋಬಳಿಯಲ್ಲಿ ಕಡಿಮೆ ಮಳೆಯಾಗಿದ್ದು, ಒಳ್ಳೆಯ ಹದ ಮಳೆಯ ನಿರೀಕ್ಷೆಯಲ್ಲಿ ರುವ ರೈತರು ಬಿತ್ತನೆಯ ಅಂತಿಮ ಹಂತದಲ್ಲಿದ್ದಾರೆ.
ಒಂದು ದಶಕದಿಂದ ಈಚೆಗೆ ತಾಲ್ಲೂ ಕಿನಲ್ಲಿ ಬಿತ್ತನೆ ಕ್ಷೇತ್ರದ ಶೇ.90ರಷ್ಟು ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳಾದ ಗೋವಿನ ಜೋಳ ಹಾಗೂ ಹತ್ತಿ ಬಿತ್ತನೆಯಾಗುತ್ತಿವೆ. ಈ ವರ್ಷ ಸಕಾಲ ದಲ್ಲಿ ಮಳೆಯಾಗದೇ ಇರುವುದರಿಂದ ಬಿ.ಟಿ.ಹತ್ತಿ ಬಿತ್ತನೆ ಮಾಡಲು ಹೊಲ ವನ್ನು ಸಿದ್ಧಗೊಳಿಸಿದ್ದ ರೈತರು ತಮ್ಮ ನಿರ್ಧಾರ ಬದಲಿಸಿ ಗೋವಿನ ಜೋಳ ಬಿತ್ತನೆ ಮಾಡಿದ್ದಾರೆ.
ಬೆಳೆಗಳಿಗೆ ಯೂರಿಯಾ ಗೊಬ್ಬರ ಕೊಡಲು ರೈತರು ಮುಂದಾಗಿದ್ದಾರೆ. ಸಾಕಷ್ಟು ಗೊಬ್ಬರದ ಲಭ್ಯತೆ ಇಲ್ಲದೇ ರೈತರು ಅಂಗಡಿಯಿಂದ ಅಂಗಡಿಗೆ ಅಲೆದಾಡಬೇಕಾದ ಸ್ಥಿತಿ ಎದುರಾಗಿದ್ದು, ಕೆಲವು ವರ್ತಕರು ಕಳಪೆ ಗೊಬ್ಬರ ನೀಡಿ ರುವ ಬಗ್ಗೆ ಕೃಷಿ ಇಲಾಖೆಗೆ ದೂರುಗಳು ಸಹ ಬಂದಿವೆ.
ಇನ್ನು ಕೆಲವು ವರ್ತಕರು ಹೆಚ್ಚಿನ ಬೆಲೆಗೆ ಯೂರಿಯಾ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಗೊಬ್ಬರದ ಜೊತೆ ಅನಗತ್ಯವಾಗಿ ಬೇರೆ ವಸ್ತುವನ್ನು (ಝಿಂಕ್, ಸಲ್ಫರ್ ಮೊದಲಾದವು) ಕಡ್ಡಾಯವಾಗಿ ಕೊಳ್ಳಬೇಕು ಎಂದು ತಾಕೀತು ಮಾಡುತ್ತಿದ್ದಾರೆ. ಇದು ರೈತರಿಗೆ ಅನಗತ್ಯ ಆರ್ಥಿಕ ಹೊರೆಯಾ ಗುತ್ತಿದೆ. ಈ ಬಗ್ಗೆ ಕೃಷಿ ಇಲಾಖೆ ಕಂಡೂ ಕಾಣದಂತಿದ್ದು, ಅವರೂ ವರ್ತಕ ರೊಂದಿಗೆ ಶಾಮೀಲಾಗಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.