ADVERTISEMENT

‘ಗತವೈಭವ ಪರಿಚಯಿಸಲು ಇತಿಹಾಸ ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 10:33 IST
Last Updated 27 ಫೆಬ್ರುವರಿ 2018, 10:33 IST

ಹಿರೇಕೆರೂರ: ‘ಇತಿಹಾಸವನ್ನು ಓದದವರು ಇತಿಹಾಸ ಸೃಷ್ಟಿಸಲಾರರು. ನಮ್ಮ ಗತವೈಭವವನ್ನು ಪರಿಚಯಿಸಲು ನಮಗೆ ಇತಿಹಾಸ ಅನಿವಾರ್ಯವಾಗಿದೆ’ ಎಂದು ಧಾರವಾಡ ಪ್ರಾದೇಶಿಕ ಪತ್ರಾಗಾರ ಕಚೇರಿ ಪತ್ರಪಾಲಕರಾದ ಡಾ.ಮಂಜುಳಾ ಯಲಿಗಾರ ಹೇಳಿದರು.

ಪಟ್ಟಣದ ಸಿಇಎಸ್ ಆವರಣದಲ್ಲಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಭಾ ಭವನದಲ್ಲಿ ಬಿ.ಆರ್.ತಂಬಾಕದ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಿದ್ದ ‘ಪತ್ರಾಗಾರ ಕೂಟ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇತಿಹಾಸ ತಿಳಿಸುವ ಅನೇಕ ಸ್ಮಾರಕಗಳು ಅಳಿವಿನ ಅಂಚಿನಲ್ಲಿವೆ. ಅವುಗಳನ್ನು ರಕ್ಷಿಸುವುದು ಹಾಗೂ ಸಂಗ್ರಹಿಸುವುದು ಪ್ರತಿಯೊಬ್ಬರ ಕರ್ತವ್ಯ. ಸರ್ಕಾರ ಸಹ ಇಂತಹ ಕಾರ್ಯಗಳಲ್ಲಿ ಆಸಕ್ತಿ ತೋರುತ್ತಿದ್ದು, ನಾವೆಲ್ಲರೂ ನಮ್ಮ ಸುತ್ತ, ಮುತ್ತಲಿನ ಪರಿಸರದಲ್ಲಿ ಇತಿಹಾಸಕ್ಕೆ ಸಂಬಧಿಸಿ ವಸ್ತುಗಳಿದ್ದರೆ ಅವುಗಳನ್ನು ಸಂರಕ್ಷಿಸಬೇಕು’ ಎಂದರು.

ADVERTISEMENT

ಪ್ರಾಚಾರ್ಯ ಎಸ್.ಬಿ.ಚನ್ನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಹಂಸಭಾವಿ ಎಂಎಎಸ್‌ಸಿ ಕಾಲೇಜಿನ ಪ್ರಾಚಾರ್ಯ ಎಂ.ಎಂ.ಅಕ್ಕಿ, ಸಂಪನ್ಮೂಲ ವ್ಯಕ್ತಿ ಬಿ.ಐ.ಚಿನಗುಡಿ, ಭರತಕುಮಾರ ಸುಣಗಾರ, ನಾಗರಾಜಪ್ಪ, ಕೆ.ಎಂ.ಮರಡಿ ಬಣಕಾರ, ನಳಿನಾ ಸಂಕೊಳ್ಳಿ, ಸಿ.ಆರ್.ದೂದೀಹಳ್ಳಿ, ರೇಖಾ ಮುದಿಗೌಡರ, ಬಿ.ಸಿ.ಯತ್ತಿನಹಳ್ಳಿ, ವಿಜಯ ಕುಮಾರ ಮದಿಗೌಡರ, ಪ್ರದೀಪ ಕೊರಡೇಕರ, ಪ್ರಶಾಂತ ಮರಿಗೊಳಪ್ಪನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.