ADVERTISEMENT

ನಶಿಸುತ್ತಿರುವ ಗ್ರಾಮೀಣ ಕಲೆ: ವಿಷಾದ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 6:25 IST
Last Updated 10 ಏಪ್ರಿಲ್ 2012, 6:25 IST

ಹಾನಗಲ್: ವಿದೇಶಿ ವ್ಯಾಮೋಹದ ಅಂದಾನುಕರಣೆಯ ನಡುವೆ ದೇಶೀಯ ಸೊಗಡಿನ ಗ್ರಾಮೀಣ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ಪರಿಚಯಿಸುವ ಆಟಗಳು ನಶಿಸುತ್ತಿ ರುವುದು ಖೇದಕರ ಸಂಗತಿ ಎಂದು  ಸಚಿವ ಸಿ.ಎಂ.ಉದಾಸಿ ಹೇಳಿದರು.

ಸಮೀಪದ ಅಚಗೇರಿ ಕೆರೆ ಆವರಣ ದಲ್ಲಿ  ಸ್ಥಳೀಯ ರಾಮಲಿಂಗೇಶ್ವರ ಯುವಕ ಮಂಡಳಿ ಆಯೋಜಿಸಿದ ಜನಪದ ಸೊಗಡಿನ ಕೃಷಿ ಸಮುದಾ ಯದ ಹೆಮ್ಮೆಯ ಗಾಡಾ ಓಡಿಸುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳ ಉಳಿವಿಗಾಗಿ ಇಂಥ ಸ್ಪರ್ಧೆಗಳನ್ನು ನಡೆಸುವ ಅವಶ್ಯಕತೆ ಇದೆ. ಸ್ಪರ್ಧೆಯ ಹಿನ್ನೆಲೆಯಲ್ಲಿ ರೈತರು ತಮ್ಮ ಜಾನು ವಾರುಗಳನ್ನು ಪ್ರೀತಿಯಿಂದ ಸಾಕುವ, ಆರೈಕೆ ಮಾಡುವ ಸಂಪ್ರದಾಯ ಬೆಳೆಯುತ್ತದೆ.

ಜಾನುವಾರುಗಳ ಸಂತತಿ ಉಳಿಯುವ ಉದ್ದೆೀಶಕ್ಕಾಗಿ ಇಂಥ ಕ್ರೀಡೆಗಳು ಅವಶ್ಯಕ ಎಂದು ಅವರು ಹೇಳಿದರು. ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜ ರಾಜ ಕರೂದಿ ಮಾತನಾಡಿ, ಜಾನುವಾ ರುಗಳು ರೈತ ಸಮುದಾಯದ ಅಮೂ ಲ್ಯ ಸಂಪತ್ತು. ರೈತ ತನ್ನ ಕುಟುಂಬ ವನ್ನು ಪ್ರೀತಿಸಿದಂತೆ ತನ್ನ ಕೃಷಿ ಚಟು ವಟಿಕೆಗಳಿಗೆ ಸಹಕಾರಿಯಾದ ಜಾನು ವಾರುಗಳನ್ನು ಪ್ರೀತಿಸಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಘಟಕದ  ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಮಾತನಾಡಿ, ಗ್ರಾಮೀಣ ಕ್ರೀಡೆಗಳು ರೈತ ಸಮುದಾಯದಿಂದ ಮಾತ್ರ ಉಳಿಯಲು ಸಾಧ್ಯ. ಪಾಶ್ಚಾತ್ಯ ಸಂಸ್ಕೃತಿಯ ಅತಿ ಯಾದ ಆಕರ್ಷಣೆಯಿಂದ ಗ್ರಾಮೀಣ ಭಾಗದ ಸಾಂಸ್ಕೃತಿಕ ಚಟುವಟಿಕೆಗಳು ಮಂಕಾಗುತ್ತಿವೆ. ನಮ್ಮ ದೇಶದ ಸಂಸ್ಕೃತಿ ಗ್ರಾಮೀಣ ಬದುಕನ್ನು ಆಧರಿಸಿರುವಂತ ದ್ದಾಗಿದೆ ಎಂಬುದನ್ನು ಮರೆಯ ಬಾರದು ಎಂದು ಅವರು ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷ ಹನು ಮಂತಪ್ಪ ನಾಗಜ್ಜನವರ, ಉಪಾಧ್ಯಕ್ಷ ದೇವೇಂದ್ರಪ್ಪ ಮೂಡ್ಲಿ, ಪುರಸಭೆ ಸದಸ್ಯರಾದ ಗಣೇಶ ಮೂಡ್ಲಿ, ಅನಂತ ವಿಕಾಸ ನಿಂಗೋಜಿ, ಗಣ್ಯರಾದ ನಾಗೇಂದ್ರ ಬಮ್ಮನಹಳ್ಳಿ, ಮೋಹನ ಕಮಾಟಿ, ಪ್ರಭು ನಾಗಜ್ಜನವರ, ದಾನಪ್ಪ ಸಿಂಧೂರ, ಸತ್ತಾರಸಾಬ ಅರಳೇಶ್ವರ, ನಾಗಪ್ಪ ಬೆಂಚಳ್ಳಿ, ತಮ್ಮಣ್ಣ ಬಂಕಾಪೂರ, ಸಿದ್ದರಾಮಪ್ಪ ಚಿಕ್ಕಣ್ಣನವರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ 30 ಜೊತೆ ಹೋರಿಗಳು ಪಾಲ್ಗೊಂಡಿದ್ದವು. ಪ್ರಥಮ ಸ್ಥಾನ ಪಡೆದ ತಾಲ್ಲೂಕಿನ ಮಾಸನಕಟ್ಟಿಯ ಮೈಲಾರಲಿಂಗೇಶ್ವರ ಅವರ ಹೋರಿಗಳಿಗೆ ಒಂದು ಜಾತಿ ಹೋರಿಕರುವನ್ನು ಬಹುಮಾನ ಎಂದು ನೀಡಲಾಯಿತು.
 
ಶಿಗ್ಗಾಂವಿ ತಾಲ್ಲೂಕಿನ ಕಾಮನಹಳ್ಳಿ ಹೋರಿಗಳಿಗೆ ದ್ವಿತೀಯ, ಹರನಗಿರಿ ಹೋರಿಗಳಿಗೆ ತೃತೀಯ ಸೇರಿ ದಂತೆ ಒಟ್ಟು  27 ಜೊತೆ ಹೋರಿಗಳು ಬಹುಮಾನ ಪಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.