ADVERTISEMENT

ನಿಜ ಮಾನವರಾಗಿ ಬದುಕಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 12:10 IST
Last Updated 9 ಫೆಬ್ರುವರಿ 2011, 12:10 IST

ಹಿರೇಕೆರೂರ: ‘ಮನುಷ್ಯನ ಹೃದಯ ಮಂದಿರದಲ್ಲಿ ಸತ್ಯ ಮತ್ತು ನೀತಿ ಎಂಬ ದೇವರನ್ನು ಪ್ರತಿಷ್ಠಾಪನೆ ಮಾಡಿ, ಮನುಷ್ಯ ಜನ್ಮ ಶ್ರೇಷ್ಠ ಎಂಬುದನ್ನು ತಿಳಿಸಲು ದಿಂಗಾಲೇಶ್ವರ ಸ್ವಾಮೀಜಿ ಪ್ರವಚನಕ್ಕೆ ಆಗಮಿಸಿದ್ದು, ಭಕ್ತರು ನಿಜ ಮಾನವರಾಗಿ ಬದುಕಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು’ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಸಿ.ಇ.ಎಸ್. ವಿದ್ಯಾಸಂಸ್ಥೆಯ ಆವರಣದಲ್ಲಿ ಸರ್ವ ಸಮಾಜ ಸೇವಾ ಪ್ರವಚನ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಬಾಳೇಹೊಸೂರು ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಅವರ ‘ಜೀವನ ದರ್ಶನ’ ಪ್ರವಚನ ಕಾರ್ಯಕ್ರಮವನ್ನು ಮಂಗಳವಾರ ಸಂಜೆ ಉದ್ಘಾಟಿಸಿಅವರು ಮಾತನಾಡಿದರು.

ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಎಲ್ಲ ದೊರಕಿದ್ದರೂ ನೆಮ್ಮದಿ ಸಿಗುತ್ತಿಲ್ಲ, ತನ್ನನ್ನು ತಾನು ನೋಡಿಕೊಳ್ಳುವ ಅಗತ್ಯವಿದೆ. ನೆತ್ತಿಯನ್ನು ತುಂಬಿಸುವ ಪ್ರವಚನ ಮನಸ್ಸಿಟ್ಟು ಕೇಳಿದರೆ ರುಚಿಸುತ್ತದೆ. ಪ್ರವಚನದಲ್ಲಿ ರಾಜಕೀಯ ತಂದೊಡ್ಡದೇ ಎಲ್ಲ ರಾಜಕಾರಣಿಗಳು ಪಾಲ್ಗೊಳ್ಳಲಿ ಎಂದು ತಿಳಿಸಿದರು.  ಕಾಗಿನೆಲೆ ಕನಕ ಗುರುಪೀಠ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.

ಹುಬ್ಬಳ್ಳಿ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ರಟ್ಟೀಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯರು, ಒಪ್ಪತ್ತೇಶ್ವರಮಠದ ಒಪ್ಪತ್ತೇಶ್ವರ ಸ್ವಾಮೀಜಿ, ಮೂಡಿಯ ಸದಾಶಿವ ಸ್ವಾಮೀಜಿ, ಜಡೆಯ ಸಿದ್ದಶಿವಾಚಾರ್ಯ ಸ್ವಾಮೀಜಿ, ಆಡಿಯ ಸಿದ್ದೇಶ್ವರ ಸ್ವಾಮೀಜಿ, ಬಿಜಕಲ್ ಶ್ರೀಗಳು ನೇತೃತ್ವ ವಹಿಸಿದ್ದರು.ಮಾಜಿ ಶಾಸಕರಾದ ಯು.ಬಿ. ಬಣಕಾರ, ಡಿ.ಎಂ.ಸಾಲಿ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಎಲ್.ಬಿ. ತೆಂಬದ, ಅಧ್ಯಕ್ಷ ಆರ್.ಎಸ್. ಹುಲ್ಲಮನಿ, ಪ್ರಧಾನ ಕಾಯದರ್ಶಿ ರಾಮು ಮುದಿಗೌಡ್ರ, ಖಜಾಂಚಿ ಬಿ.ಎಸ್.ಕಾರಗಿ, ಎಂ.ಎಂ. ಹುಲ್ಲಮನಿ, ಎಂ.ಬಿ.ಹಿರೇಮಠ, ಮಹೇಂದ್ರ ಬಡಳ್ಳಿ, ಗುರುಶಾಂತ ಎತ್ತಿನಹಳ್ಳಿ, ನೀಲಮ್ಮ ಹೊಸಮನಿ, ವಿಜಯಲಕ್ಷ್ಮಿ ಛಾಯಾಪತಿ, ಪೂರ್ಣಿಮಾ ಕಾರಗಿ ಇದ್ದರು. ಚನ್ನಮಲ್ಲ ದೇವರು ಕುಕನೂರು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.