ADVERTISEMENT

ಪಿಎಲ್‌ಡಿ ಬ್ಯಾಂಕ್: ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2011, 7:00 IST
Last Updated 3 ಏಪ್ರಿಲ್ 2011, 7:00 IST
ಪಿಎಲ್‌ಡಿ ಬ್ಯಾಂಕ್: ಅವಿರೋಧ ಆಯ್ಕೆ
ಪಿಎಲ್‌ಡಿ ಬ್ಯಾಂಕ್: ಅವಿರೋಧ ಆಯ್ಕೆ   

ಹಿರೇಕೆರೂರ: ಇಲ್ಲಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಮಲ್ಲನಗೌಡ ಪುಟ್ಟಪ್ಪಗೌಡ್ರ ಹಾಗೂ ಉಪಾಧ್ಯಕ್ಷರಾಗಿ ಬಸವಣ್ಣೆಪ್ಪ ಕಾರಗಿ ಶನಿವಾರ ಅವಿರೋಧವಾಗಿ ಆಯ್ಕೆಯಾದರು.ಆಯ್ಕೆಯ ನಂತರ ಬ್ಯಾಂಕಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ ಯು.ಬಿ.ಬಣಕಾರ, ‘ಹಿಂದಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ತಪ್ಪುಗಳಿಂದಾಗಿ ಬ್ಯಾಂಕು ದುಃಸ್ಥಿತಿ ಎದುರಿಸುವಂತಾಗಿದೆ. ಬ್ಯಾಂಕಿನ ಅಭಿವೃದ್ಧಿಗೆ ನೂತನ ಆಡಳಿತ ಮಂಡಳಿ ಕಳೆದ ಒಂದು ವರ್ಷದಿಂದ ತೀವ್ರವಾಗಿ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ಬೆಳೆಸಾಲ ನೀಡುವ ಮಟ್ಟಕ್ಕೆ ಬ್ಯಾಂಕು ಬೆಳೆಯಬೇಕು’ ಎಂದು ಹೇಳಿದರು.
 

ನೂತನ ಅಧ್ಯಕ್ಷರಾಗಿ ಮಲ್ಲನಗೌಡ ಪುಟ್ಟಪ್ಪಗೌಡ, ಬ್ಯಾಂಕಿನ ಸಾಲಗಾರರು ಮರುಪಾವತಿ ಮಾಡುವ ಮೂಲಕ ಬ್ಯಾಂಕು ಸದೃಢವಾಗಲು ಸಹಕಾರ ನೀಡುವ ಜೊತೆಗೆ ಹೊಸದಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶೇ. 1ರ ಬಡ್ಡಿದರದ ಉಪಯೋಗ ಪಡೆಯಬೇಕು ಎಂದರು.ತಾ.ಪಂ. ಅಧ್ಯಕ್ಷ ಶಿವಪ್ಪ ಗಡಿಯಣ್ಣನವರ ಮಾತನಾಡಿ, ನೀಡಿದ ಸಾಲ ವಸೂಲಿಗೆ ಸಮರ್ಪಕವಾದ ಕ್ರಮ ಕೈಗೊಳ್ಳಬೇಕು. ಸಾಲಗಾರರಿಗೆ ಪಡೆದ ಸಾಲ ಮರುಪಾವತಿಯ ಬಗ್ಗೆ ಚಿಂತೆ ಇರಬೇಕು ಎಂದು ತಿಳಿಸಿದರು.
 

ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ ಮಾತನಾಡಿದರು. ಪಿಎಲ್‌ಡಿ ಬ್ಯಾಂಕಿನ ಹಿಂದಿನ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ಮಾಜಿ ಉಪಾಧ್ಯಕ್ಷ ಷಣ್ಮುಖ ಮಳಿಮಠ, ನಿರ್ದೇಶಕರಾದ ಎಂ.ವಿ.ಹೊಂಬರಡಿ, ಜಿ.ಯು.ಕವಲಿ, ಮಲ್ಲನಗೌಡ ಬುರಡೀಕಟ್ಟಿ, ವೀರನಗೌಡ ಬಿದರಿ, ಗೀತಾ ಪ್ರಕಾಶ ನಂದಿಹಳ್ಳಿ, ಧರ್ಮಪ್ಪ ಚಲವಾದಿ, ಮಂಜಪ್ಪ ಗಿಡ್ಡಣ್ಣನವರ, ತಾ.ಪಂ. ಉಪಾಧ್ಯಕ್ಷೆ ನಿರ್ಮಲಾ ಗುಬ್ಬಿ, ಚಂದ್ರು ಅಪ್ಪಣ್ಣನವರ, ಮಹೇಶ ಗುಬ್ಬಿ, ಪ್ರಕಾಶ ಗೌಡರ, ದತ್ತಾತ್ರೇಯ ರಾಯ್ಕರ, ವೀರಬಸಪ್ಪ ಮತ್ತೂರ, ಸಿದ್ದು ನರೇಗೌಡ್ರ, ಚನ್ನಬಸಪ್ಪ ಬೋಗಾವಿ, ಶಂಕ್ರಪ್ಪ ವಡ್ಡಿನಕಟ್ಟಿ, ಎಸ್.ಎಸ್.ಪಾಟೀಲ, ಬ್ಯಾಂಕಿನ ವ್ಯವಸ್ಥಾಪಕ ಎನ್.ಬಿ.ಬಿದರಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.