ADVERTISEMENT

ಪೊಲೀಸರ ಕ್ಷಮೆ ಯಾಚನೆ: ಧ್ವಜ ವಿವಾದ ಅಂತ್ಯ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 10:15 IST
Last Updated 18 ಅಕ್ಟೋಬರ್ 2012, 10:15 IST

ಅಕ್ಕಿಆಲೂರ: ಸ್ಥಳೀಯ ಮುಖ್ಯ ರಸ್ತೆ ಗಳಲ್ಲಿ ಆರ್.ಎಸ್.ಎಸ್. ಪಥಸಂಚಲ ನದ ಪ್ರಯುಕ್ತ ಹಾಕಲಾಗಿದ್ದ ಕೇಸರಿ ಧ್ವಜ, ಕಮಾನು ಹಾಗೂ ಬಂಟಿಂಗ್ಸ್ ಗಳನ್ನು ಪೊಲೀಸ್ ಮತ್ತು ಗ್ರಾ.ಪಂ. ಸಿಬ್ಬಂದಿ ಏಕಾಏಕಿ ತೆರವುಗೊಳಿಸಿರುವು ದನ್ನು ವಿರೋಧಿಸಿ ಮಂಗಳವಾರ ರಾತ್ರಿ ದಿಢೀರ್ ಪ್ರತಿಭಟನೆ ಕೈಗೊಂಡ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಲ್ಲಿ ಶಿಗ್ಗಾವಿ ಡಿ.ವೈ.ಎಸ್.ಪಿ. ವಿ.ಎ.ಪೂಜಾರ ಕ್ಷಮೆ ಯಾಚಿಸಿ ಪ್ರಕರಣಕ್ಕೆ ತೆರೆ ಎಳೆದರು.

ಡಿ.ವೈ.ಎಸ್.ಪಿ. ವಿ.ಎ.ಪೂಜಾರ ಮಾತನಾಡಿ, ಧ್ವಜ, ಕಮಾನು ಮತ್ತು ಬಂಟಿಂಗ್ಸ್‌ಗಳನ್ನು ತೆರವುಗೊಳಿಸುವಂತೆ ಇಲಾಖೆಯ ಮೇಲಾಧಿಕಾರಿಗಳಿಂದ ಒತ್ತಡ ಬಂದಿತ್ತು. ಕೆಲವೆಡೆ ಇವು ಘರ್ಷಣೆಗೆ ಕಾರಣವಾಗಿದ್ದರಿಂದ ಇಲ್ಲಿಯೂ ಕೂಡ ಅಹಿತಕರ ಘಟನೆ ನಡೆ ಯದಿರಲಿ ಎಂಬ ಸದುದ್ದೇಶದಿಂದ ಮಾತ್ರ ತೆರವು ಕಾರ್ಯಾಚರಣೆ ನಡೆಸಲಾಗಿದೆ ಹೊರತು ಇಲ್ಲಿ ಯಾರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿ ಆಗಿರುವ ಪ್ರಮಾದಕ್ಕೆ ಕ್ಷಮೆ ಯಾಚಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾ ಗಿದೆ.

ಹಿಂದೂಪರ ಸಂಘಟನೆಗಳ ಕೃಷ್ಣ ಸವಣೂರ, ಪ್ರದೀಪ ಮಹೇಂದ್ರಕರ, ಪ್ರವೀಣ ಲಿಂಗೇರಿ, ಜಿ.ಪಂ. ಮಾಜಿ ಸದಸ್ಯ ಕೃಷ್ಣ ಈಳಗೇರ, ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್.ಎಸ್.ಮುಚ್ಚಂಡಿ, ರಾಜಣ್ಣ ಅಂಕಸಖಾನಿ, ಯು.ಬಿ.ವಿರುಪಣ್ಣನವರ, ನಾಗರಾಜ್ ಪಾವಲಿ, ವಿಜಯ ಮಾಗನೂರ, ಮಹೇಶ ಸಾಲವಟಗಿ, ಬಸವರಾಜ್ ಬೆಲ್ಲದ, ಚನ್ನವೀರ ಬೆಲ್ಲದ, ವಿಶ್ವನಾಥ ಭಿಕ್ಷಾವರ್ತಿಮಠ, ಶಿವಕುಮಾರ ದೇಶಮುಖ, ಎಚ್. ನಿಂಗಪ್ಪ, ರವಿ ಕಲಾಲ, ಯಲ್ಲಪ್ಪ ಕೊರ ಚರ, ಶಿವಕುಮಾರ ಪಾಟೀಲ, ಮಂಜು ನಾಥ ಮ್ಯಾದಾರ ಹಾಗೂ ನೂರಾರು ಯುವಕರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.