ಹಿರೇಕೆರೂರ: ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿರುವುದನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ರೈತಸಂಘ (ಪ್ರೊ.ನಂಜುಂಡಸ್ವಾಮಿ ಬಣ)ದ ಕಾರ್ಯಕರ್ತರು ಪಟ್ಟಣದ ವಾಯವ್ಯ ಸಾರಿಗೆ ಘಟಕ ವ್ಯವಸ್ಥಾಪಕ ಪಿ.ನಂಜುಂಡ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
`ಸರ್ಕಾರ ಬಸ್ ಪ್ರಯಾಣ ದರವನ್ನು ಹೆಚ್ಚಿಸಿರುವುದರಿಂದ ಪ್ರಯಾಣಿಕರ ಮೇಲೆ ಹೊರೆಯಾಗುತ್ತಿದೆ. ಈಗಾಗಲೇ ನೀಡುತ್ತಿರುವ ದರವೇ ಹೆಚ್ಚಾಗಿದೆ. ಕಾರಣ ದರ ಏರಿಕೆಯನ್ನು ಹಿಂದಕ್ಕೆ ಪಡೆಯಬೇಕು' ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ ದೂದಿಹಳ್ಳಿ ಒತ್ತಾಯಿಸಿದರು.
ಶಿವನಗೌಡ ಪಾಟೀಲ, ಬಸನಗೌಡ ದೊಡ್ಡಗೌಡ್ರ, ತೀರ್ಥಪ್ಪ ಸಾತೇನಳ್ಳಿ, ಪೀರಪ್ಪ ಪೂಜಾರ, ಥಾವರಪ್ಪ ಮೂಡಿ, ಬೆನಕಣ್ಣ ಹಾಜರಿದ್ದರು. ಸಂಚಾರ ನಿರೀಕ್ಷಕ ಗಣೇಶ ಉರಣಕರ ಈ ಸಂದರ್ಭದಲ್ಲಿದ್ದರು.
ರಾಹುಲ್ ಹುಟ್ಟುಹಬ್ಬ: ಹಾಲು ಹಣ್ಣು ವಿತರಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.