ADVERTISEMENT

ಬಾರದ ತಾಯಿ ಚಿರತೆ; ಹೊರಬರದ ಮರಿಗಳು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 6:18 IST
Last Updated 17 ಡಿಸೆಂಬರ್ 2013, 6:18 IST

ರಟ್ಟೀಹಳ್ಳಿ : ಸಮೀಪದ ಕಡೂರ ಗ್ರಾಮದ ಹೊರವಲಯದ ಪೈಪ್ ಒಂದರ ಒಳಗೆ ಸೇರಿಕೊಂಡಿರುವ ಮೂರು ಚಿರತೆ ಮರಿಗಳು ಸೋಮವಾರವೂ ಹೊರ ಬಾರದ ಕಾರಣ ಅರಣ್ಯ ಇಲಾಖೆ ಸಿಬ್ಬಂದಿ ಕಾಯುವ ಕೆಲಸವನ್ನು ಇನ್ನೂ ಮುಂದುವರೆಸಿದ್ದಾರೆ.

ಭಾನುವಾರ ರಾತ್ರಿ  ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದರೂ ತಾಯಿ ಚಿರತೆ ಗೋಚರಿಸಿಲ್ಲ. ಸೋಮವಾರ  ಬೆಳಗಿನಿಂದ ಚಿರತೆ ಮರಿಗಳನ್ನು ನೋಡಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದು ಸಿಬ್ಬಂದಿಗೆ ತಲೆ ನೋವಾಗಿ ಪರಿಣಮಿಸಿದೆ.

ಮರಿಗಳು ಸಿಲುಕಿರುವ ಪೈಪ್ ರಸ್ತೆ ಮಧ್ಯೆ ಇರುವುದರಿಂದ ವಾಹನಗಳ ಭರಾಟೆಯ ಸದ್ದಿನಿಂದ ಹೆದರಿ  ಮರಿಗಳು ಹೊರಗಡೆ ಬಂದಿಲ್ಲ. ಸೋಮವಾರ ಸಂಜೆಯಾದರೂ ಆಹಾರಕ್ಕಾಗಿ ಹೊರ ಬಂದಿಲ್ಲ. ಹೀಗಾಗಿ ಇಲಾಖೆಯ ಸಿಬ್ಬಂದಿ ಸೋಮವಾರ ರಾತ್ರಿ ಕೂಡ ಸ್ಥಳದಲ್ಲಿಯೇ ಮತ್ತೆ ಬೀಡು ಬಿಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.