ADVERTISEMENT

ಮದಗ ಮಾಸೂರು ಕೆರೆ ಕಾಮಗಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 10:36 IST
Last Updated 9 ಜುಲೈ 2013, 10:36 IST

ಹಿರೇಕೆರೂರ: ತಾಲ್ಲೂಕಿನ ಮದಗ ಮಾಸೂರ ಕೆರೆ ತುಂಬಿ ಹರಿಯುತ್ತಿರುವುದರಿಂದ ಶಾಸಕ ಯು.ಬಿ.ಬಣಕಾರ ಭಾನುವಾರ ಕೆರೆಗೆ ಭೇಟಿ ನೀಡಿ ವಿವಿಧ ಕಾಮಗಾರಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯು.ಬಿ.ಬಣಕಾರ, `ಮದಗ ಮಾಸೂರು ಕೆರೆಯ ಕೋಡಿ ದುರಸ್ತಿ ಕಾಮಗಾರಿ ರೂ 1.71ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ರೂ 76 ಲಕ್ಷದಲ್ಲಿ ಬಲದಂಡೆ ಕಾಲುವೆ ಕಾಂಕ್ರಿಟ್ ಮಾಡುವ ಕಾಮಗಾರಿ ನಡೆಯುತ್ತಿದೆ. ಗುತ್ತಿಗೆದಾರರು  ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸಬೇಕು' ಎಂದು ಸೂಚಿಸಿದರು.

`ಕೆರೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಬೇಕಿದೆ. ಪ್ರತಿವರ್ಷ ಕೆರೆಯ ಹೂಳು ತೆಗೆಯಲು ಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತೇನೆ. ಕೃಷಿಗೆ ಕೆರೆಯ ಸಮರ್ಪಕ ಬಳಕೆಗೆ ಹಾಗೂ ಈ ಪ್ರದೇಶವನ್ನು ಆಕರ್ಷಕ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲು ಶ್ರಮಿಸುತ್ತೇನೆ' ಎಂದು ಹೇಳಿದರು.

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಸಿ.ಶಂಕರಮೂರ್ತಿ, ಶಾಖಾಧಿಕಾರಿ ವಿಜಯ್ ಮಾಂತೇಶ, ಗ್ರಾ.ಪಂ ಅಧ್ಯಕ್ಷ ಚನ್ನಬಸಪ್ಪ ರಾಮಜ್ಜನವರ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಮುಖಂಡರಾದ ಮಹೇಶ ಗುಬ್ಬಿ, ಷಣ್ಮುಖಪ್ಪ ಚಳಗೇರಿ, ರಮೇಶ ನ್ಯಾಮತಿ, ಬಸವರಾಜ ಗಿರಿಯಣ್ಣನವರ, ಸಿದ್ದಪ್ಪ ಗುಡದಪ್ಪನವರ, ವಾಮನ ನಲವಾಡಿ, ರಾಮರಾವ್ ಕರಾತ, ಕೆಂಚಪ್ಪ ಕನ್ನಕ್ಕನವರ, ಗುಡ್ಡಪ್ಪ ಕರಡೇರ, ಗಣೇಶಪ್ಪ ಮಾಗನೂರು, ಗುರುಶಾಂತಪ್ಪ ಜೋಗಿಹಳ್ಳಿ, ಮಹೇಂದ್ರ ಬಡಳ್ಳಿ, ಚಂದ್ರಪ್ಪ ಕನ್ನಕ್ಕನವರ, ವೆಂಕಟೇಶ ವಾಡೇರ, ನಾಗರಾಜ ನಾಗೇನಹಳ್ಳಿ, ಶಿದ್ದಪ್ಪ ಹೊನ್ನಾಳ್ಳಿ, ಲೋಕೇಶ ಕಡೆಮನಿ ಸೇರಿದಂತೆ ಅನೇಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.