ADVERTISEMENT

ಮೇಲ್ಸೇತುವೆ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 6:10 IST
Last Updated 21 ಜೂನ್ 2011, 6:10 IST

ಹಾವೇರಿ: ನಗರದ ಬಸ್ ನಿಲ್ದಾಣದ ಎದುರು ಪಾದಚಾರಿಗಳ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತು ವಾರಿ ಸಚಿವ ಸಿ.ಎಂ.ಉದಾಸಿ ಸೋಮ ವಾರ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಸಚಿವರು, `ಪಾದಚಾರಿಗಳ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಬಿ.ಓ.ಟಿ. (ನಿರ್ಮಿಸು, ನಿರ್ವಹಿಸು, ಹಸ್ತಾಂತರಿಸು) ಯೋಜನೆಯಡಿ ಹುಬ್ಬಳ್ಳಿಯ ಶಾಕಾಂಬರಿ ಸಂಸ್ಥೆಗೆ ನೀಡಲಾಗಿದ್ದು, ಅದನ್ನು ಸುಮಾರು 22 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.

ಮುಂದಿನ ಮೂರು ತಿಂಗಳಲ್ಲಿ ಅಂದರೆ, ಸೆಪ್ಟೆಂಬರ್ ಮೊದಲ ವಾರ ದೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿ ಸಬೇಕೆಂದು ಅವರು ಗುತ್ತಿಗೆದಾರರಿಗೇ ಇದೇ ಸಂದರ್ಭದಲ್ಲಿ ಸೂಚಿಸಿದರು.

ನಂತರದಲ್ಲಿ ಸಂಸ್ಥೆಯ ಪಾಲುದಾರ ನರೇಂದ್ರ ಕುಲಕರ್ಣಿ ಸುದ್ದಿಗಾರ ರೊಂದಿಗೆ ಮಾತನಾಡಿ, ಈ ಹಿಂದೆಯೇ ಹಾವೇರಿ ನಗರಸಭೆ ಹಾಗೂ ತಮ್ಮ ಶಾಖಾಂಬರಿ ಸಂಸ್ಥೆ ನಡುವೆ ಮೇಲ್ಸೇತುವೆ ನಿರ್ಮಾಣಕ್ಕೆ ಒಡಂಬ ಡಿಕೆಯಾಗಿತ್ತು, ಈಗ ಕಾಮಗಾರಿಗೆ ಚಾಲನೆ ದೊರೆತಿದೆ. ಈ ಮೇಲ್ಸೇತುವೆ ನಿರ್ಮಾಣದಿಂದ ನಗರದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣದ ಸುತ್ತ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.

ಈಗಾಗಲೇ ತಮ್ಮ ಸಂಸ್ಥೆಯೂ ಇದೇ ಯೋಜನೆಯಡಿ ಮೈಸೂರು, ಹುಬ್ಬಳ್ಳಿ, ಬಳ್ಳಾರಿಗಳಲ್ಲಿ ಮೇಲ್ಸೇತುವೆ ಗಳು ನಿರ್ಮಾಣ ಮಾಡಿದೆ. ಅದೇ ಮಾದರಿಯಲ್ಲಿ ಹಾವೇರಿ ನಗರದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡುತ್ತಿರು ವುದಾಗಿ ಅವರು ತಿಳಿಸಿದರು.

ಈ ಮೇಲ್ಸೇತುವೆ ನಿರ್ಮಾಣದ ವೆಚ್ಚವನ್ನು ಸಂಸ್ಥೆಯೇ ಭರಿಸಲಿದ್ದು, ಆ ಮೇಲ್ಸೇತುವೆಯ ಇಬ್ಬದಿಗಳಲ್ಲಿ ಅಳ ವಡಿಸುವ ಜಾಹೀರಾತುಗಳಿಂದ ಲಭ್ಯ ವಾಗುವ ಆದಾಯದಿಂದ ನಾವು ಹಾಕಿದ ಬಂಡವಾಳವನ್ನು ಹಿಂದಕ್ಕೆ ಪಡೆದುಕೊಳ್ಳಲಾಗುವುದು ಎಂದರು.

ಬಿಓಟಿ ಯೋಜನೆಯಡಿ ಬೇರೆ ಬೇರೆ ಪಟ್ಟಣ, ಜಿಲ್ಲೆಗಳಲ್ಲಿ ಇಂತಹ ಮೇಲ್ಸೇ ತುವೆ ನಿರ್ಮಾಣಕ್ಕೆ ಒತ್ತಾಯಗಳು ಬಂದಿದ್ದು, ಹಂತ ಹಂತವಾಗಿ ಅಲ್ಲಿಯೂ ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳುವ ಚಿಂತನೆ ನಡೆಸಲಾಗಿದೆ ಎಂದು ಕುಲಕರ್ಣಿ ತಿಳಿಸಿದರು.

ಶಾಸಕ ನೆಹರೂ ಓಲೇಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ, ನಗರಸಭಾ ಅಧ್ಯಕ್ಷ ಜಗದೀಶ ಮಲಗೋಡ, ಸದಸ್ಯ ವಿಜಯಕುಮಾರ ಚಿನ್ನಿಕಟ್ಟಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿ ಯರ್ ಕೆ. ಶಿವಣ್ಣ,  ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶೇಖರಪ್ಪ, ಶಾಕಾಂಬರಿ ಸಂಸ್ಥೆಯ ಸಿಬ್ಬಂದಿ ಹಾಗೂ ರಮೇಶ ಗುಡಿ ಸೇರಿಂದಂತೆ ಅನೇಕರು ಭಾಗವಹಿ ಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.