ADVERTISEMENT

ವರ್ಷಾಂತ್ಯದಲ್ಲಿ ಕೃಷಿ ಕಾಲೇಜು: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 6:40 IST
Last Updated 14 ಜೂನ್ 2011, 6:40 IST

ಹಾವೇರಿ: ಆದಷ್ಟು ಬೇಗ ಜಿಲ್ಲೆಗೊಂದು ಕೃಷಿ ಕಾಲೇಜು ಮಂಜೂರಾತಿ ಮಾಡ ಲಾಗುತ್ತಿದ್ದು, ಸಾಧ್ಯವಾದರೆ, ಪ್ರಸಕ್ತ ಸಾಲಿನಲ್ಲಿಯೇ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ನಗರದಲ್ಲಿ ಸೋಮವಾರ ವಾರ್ತಾ ಭವನ ಉದ್ಘಾಟನೆ ಹಾಗೂ ಜೆ.ಎಚ್. ಪಟೇಲ ಪುತ್ಥಳಿ ಅನಾವರಣಗೊಳಿಸಿದ ನಂತರ ಇಲ್ಲಿನ ಶಿವಶಕ್ತಿ ಪ್ಯಾಲೇಸ್‌ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೃಷಿ ಕಾಲೇಜು ನೀಡಬೇಕೆಂದು ಈ ಭಾಗದ ಜನಪ್ರತಿನಿಧಿಗಳು ಸೇರಿದಂತೆ ಜನರಿಂದ ಬಹುದಿನಗಳಿಂದ ಬೇಡಿಕೆ ಯಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡು ಮಂಜೂರು ಮಾಡಿ ಆರಂಭಿಸಲಾಗುವುದು ಎಂದರು.

ನೆಪ ಮಾತ್ರಕ್ಕೆ ಜಿಲೆಯ್ಲೇಾಗಿ ಉಳಿ ದಿದ್ದ ಹಾವೇರಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲು ಅಗತ್ಯ ಯೋಜನೆಗಳನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಅಭಿ ವೃದ್ಧಿ ಕೆಲಸಗಳಿಗೆ ಚಾಲನೆ ನೀಡ ಲಾಗಿದೆ ಎಂದ ಅವರು, ಹಾವೇರಿ ಸರ್ಕಾರಿ ಎಂಜನಿಯರಿಂಗ್ ಕಾಲೇಜಿನ ಎರಡನೇ ಹಂತದ ಕಾಮಗಾರಿಗೆ ಅವಶ್ಯವಿರುವ 20 ಕೋಟಿ ರೂ. ಗಳನ್ನು ಶೀಘ್ರವೇ ಬಿಡುಗಡೆ ಮಾಡ ಲಾಗುವುದು ಎಂದರು.

ಮುಖ್ಯಮಂತ್ರಿಗಳು ವಾಪಸ್ಸು ಹೋಗುವ ಅವಸರದಲ್ಲಿ ಇದ್ದುದರಿಂದ ಕಾರ್ಯಕ್ರಮದಲ್ಲಿ ನಾಡ ಗೀತೆ ಹಾಡುತ್ತಿದ್ದಂತೆ ನೇರವಾಗಿ ಮೈಕ್ ಬಳಿ ಬಂದ ಮುಖ್ಯಮಂತ್ರಿಗಳು ತಾವೇ ಸ್ವಾಗತ, ಮಾಡಿ ಭಾಷಣ ಆರಂಭಿಸಿ ಬಿಟ್ಟರು. ಭಾಷಣ ಮುಗಿಯುತ್ತಿದ್ದಂತೆ ತಾವೇ ವಂದನೆಗಳನ್ನು ಹೇಳಿ ವೇದಿಕೆ ಯಿಂದ ಕೆಳಗೆ ಇಳಿಯಲು ಮುಂದಾ ದರು.

ಆಗ ಸ್ಥಳೀಯ ಜನಪ್ರತಿನಿಧಿಗಳು ಸನ್ಮಾನ ಸ್ವೀಕರಿಸಬೇಕು ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ವೇದಿಕೆ ಮೇಲೆ ಕೆಲವೆ ಕ್ಷಣ ನಿಂತು ಸನ್ಮಾನ ಸ್ವೀಕರಿಸಿ, ವಾಪಸ್ಸಾದರು.

ಸಚಿವರಾದ ಸಿ.ಎಂ.ಉದಾಸಿ, ಬಸವ ರಾಜ ಬೊಮ್ಮಾಯಿ, ಶಾಸಕರಾದ ನೆಹರು ಓಲೇಕಾರ್, ಜಿ.ಶಿವಣ್ಣ, ಸುರೇಶಗೌಡ್ರ ಪಾಟೀಲ, ಸಂಸದರಾದ ಶಿವಕುಮಾರ ಉದಾಸಿ, ಪ್ರಹ್ಲಾದ ಜೋಶಿ, ಕಾಡಾಧ್ಯಕ್ಷ ಸೋಮಣ್ಣ ಬೇವಿನಮರದ, ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ, ಧಾರವಾಡ ಹಾಲು ಒಕ್ಕೂ ಟದ ಅಧ್ಯಕ್ಷ ಬಸವರಾಜ ಅರಬ ಗೊಂಡ, ಜಿ.ಪಂ. ಅಧ್ಯಕ್ಷ ಮಂಜುನಾಥ ಓಲೇಕಾರ ಸೇರಿದಂತೆ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.