ಹಾವೇರಿ: ರಾಜ್ಯದಲ್ಲಿ ಎಸ್‌ಎಪಿ ಕಾಯ್ದೆ ಜಾರಿಗೆ ತರಬೇಕೆಂದು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಇದೇ 21 ರಿಂದ ವಿಧಾನ ಸೌಧದ ಎದುರಿನ ಸ್ವಾತಂತ್ರ್ಯ ಯೋಧನ ಉದ್ಯಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾ ಗುವುದು ಎಂದು ರಾಜ್ಯ ಕಬ್ಬು ಬೆಳೆ ಗಾರರ ಸಂಘದ ಉಪಾಧ್ಯಕ್ಷ ಶಿವಾನಂದ ಗುರುಮಠ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಬ್ಬು ಬೆಳೆಗಾರರು ಸರ್ಕಾರ ಹಾಗೂ ಕಾರ್ಖಾನೆ ಮಾಲೀಕ ರಿಂದ ನಿರಂತರ ಶೋಷಣೆ ಅನುಭವಿಸು ತ್ತಿದ್ದಾರೆ. ಕಬ್ಬಿಗೆ ನ್ಯಾಯಯುತ ಬೆಲೆ ದೊರೆಯದಿರುವುದು ಒಂದು ಕಡೆಮೆ ಯಾದರೆ, ಸಕ್ಕರೆ ಕಾರ್ಖಾನೆಗಳು ಕಬ್ಬಿನ ಹಣವನ್ನು ಸಕಾಲಕ್ಕೆ ಪಾವತಿಸದೇ ಸತಾಯಿಸುತ್ತಿವೆ ಎಂದರು.
ರಾಜ್ಯದಲ್ಲಿರುವ 58 ಸಕ್ಕರೆ ಕಾರ್ಖಾನೆಗಳಲ್ಲಿ ಬಹುತೇಕ ಕಾರ್ಖಾನೆ ಗಳು ಕಬ್ಬು ಪೂರೈಕೆ ಮಾಡಿ ಮೂರು, ನಾಲ್ಕು ತಿಂಗಳು ಗತಿಸಿದರೂ ಕಬ್ಬಿನ ಹಣ ನೀಡುವುದಿಲ್ಲ. ಈವರೆಗೆ ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳಿಂದ ಸುಮಾರು 1500 ಕೋಟಿ ರೂ. ರೈತರಿಗೆ ಬಾಕಿ ಬರಬೇಕಾಗಿದೆ ಎಂದು ತಿಳಿಸಿದರು. ಕಬ್ಬಿನಿಂದ ಉತ್ಪನ್ನವಾಗುವ ಸಕ್ಕರೆ, ಕಾರಂಜಿ , ವಿದ್ಯುತ್, ಬಯೋ ಕಾಂಪೋಸ್ಟ್ ಉತ್ಪನ್ನಗಳ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.
ಅದೇ ರೀತಿ ಕಬ್ಬು ಕಟಾವ್ ಕೂಲಿ ಹಾಗೂ ಕಬ್ಬು ಸಾಗಾಣಿಕೆ ವೆಚ್ಚವೂ ಹೆಚ್ಚಾಗಿದೆ. ಆದರೆ, ರೈತನಿಗೆ ಮಾತ್ರ ನ್ಯಾಯಯುತ ಬೆಲೆ ಮಾತ್ರ ದೊರೆಯದೇ ರೈತರು ಕಬ್ಬು ಬೆಳೆಗೆ ಮಾಡುವಷ್ಟು ವೆಚ್ಚವು ಅವರಿಗೆ ಮರಳಿ ದೊರೆಯುತ್ತಿಲ್ಲ. ಸರ್ಕಾರ ಮಾತ್ರ ರೈತರ ಸಮಸ್ಯೆಗೆ ಸ್ಪಂದಿಸದೇ ಕಾರ್ಖಾನೆ ಮಾಲೀಕರ ಪರ ವಕಾಲತ್ತು ವಹಿಸುತ್ತಿದೆ ಎಂದು ಆಪಾದಿಸಿದರು.
ತಕ್ಷಣವೇ ಸರ್ಕಾರ ರೈತರಿಗೆ ಬರ ಬೇಕಾದ 1,500 ಕೋಟಿ ರೂ.ಗಳನ್ನು ತಕ್ಷಣ ಪಾವತಿಸಲು ಕ್ರಮ ಕೈಗೊಳ್ಳ ಬೇಕು. ಪ್ರಸಕ್ತ ಸಾಲಿಗೆ ಅಂತಿಮ ಕಬ್ಬಿನ ದರ ನಿಗದಿಗೊಳಿಸಬೇಕು. ಕಬ್ಬಿನ ತೂಕ ದಲ್ಲಿ ಮೋಸ ತಪ್ಪಿಸಲು ಸರ್ಕಾರವೇ ಎಪಿಎಂಸಿ ಮೂಲಕ ಸಕ್ಕರೆ ಕಾರ್ಖಾನೆ ಗಳ ಬಳಿ ತೂಕದ ಯಂತ್ರ ಸ್ಥಾಪಿಸಬೇಕು, ಆಕಸ್ಮಿಕ ಬೆಂಕಿ, ಪ್ರಾಣಿಗಳ ಹಾವಳಿ ತಪ್ಪಿಸಲು, ಅತಿವೃಷ್ಟಿ, ಅನಾವೃಷ್ಟಿ ಯಿಂದ ಬೆಳೆ ನಾಶವಾದ ರೈತರ ಸಾಲ ಮನ್ನಾ ಯೋಜನೆ ಜಾರಿ ಯಾಗಬೇಕು, ವಿವಿಧ ವಲಯ ಗಳಿಂದ ಶೇ.1 ತೆರಿಗೆ ಸಂಗ್ರಹಿಸಿ ರೈತರ ಸಂ ಕಷ್ಟ ನಿಧಿ ಸ್ಥಾಪಿಸಿ ರೈತರ ರಕ್ಷಣೆಗೆ ನಿಲ್ಲಬೇಕು ಎಂಬ ಕಬ್ಬು ಬೆಳೆಗಾರರ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ಸತ್ಯಾಗ್ರಹ ನಡೆಸ ಲಾಗುವುದು ಎಂದರು.
ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಜಣ್ಣ ಬೆಟಗೇರಿ, ಕಾರ್ಯ ದರ್ಶಿ ಎ.ಆರ್. ಪಾಟೀಲ, ಬಸವ ಣ್ಣೆಪ್ಪ ಬೆಂಚಿಹಳ್ಳಿ, ಶಿವಪುತ್ರಪ್ಪ ಸಣ್ಣಮನಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.