ADVERTISEMENT

ವ್ಯಕ್ತಿತ್ವವೇ ಮಾನವನ ಶ್ರೇಷ್ಠ ಸಂಪತ್ತು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 10:40 IST
Last Updated 7 ಫೆಬ್ರುವರಿ 2011, 10:40 IST

ರಾಣೆಬೆನ್ನೂರು: ‘ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ. ನಮ್ಮ ಅದೃಷ್ಟಕ್ಕೆ ನಾವೇ ಕಾರಣ. ಹೀಗಾಗಿ ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ಬೆಳೆಯಲು ಪ್ರಯತ್ನಿಸಬೇಕು’ ಎಂದು ಜೇಸಿಐ ಭಾರತ ರಾಷ್ಟ್ರೀಯ ನಿರ್ದೇಶಕ ದೇವರಾಜ್ ಟಿ.ಎನ್. ಹೇಳಿದರು.ನಗರದ ಬಳ್ಳಾರಿ ಕಲ್ಯಾಣ ಮಟಪದಲ್ಲಿ ಈಚೆಗೆ ನಡೆದ ಜೂನಿಯರ್ ಚೇಂಬರ್ ಇಂಟರ್ ನ್ಯಾಶನಲ್‌ನ ರಾಣೆಬೆನ್ನೂರು ಘಟಕದ 18ನೇ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರೂ ಬದಲಾವಣೆ ಕಂಡುಕೊಂಡಾಗ ಮಾತ್ರ ಜೀವನ ಸುಧಾರಣೆಯಾಗುತ್ತದೆ ಎಂದರು.ನೂತನ ಅಧ್ಯಕ್ಷೆ ರತ್ನಾ ಮೋಹನ್ ಪುನೀತ ಅವರಿಗೆ ವಲಯ-24ರ ಅಧ್ಯಕ್ಷೆ ಡಾ. ಪಿ. ಮಾಧವಿದೇವಿ ಪ್ರಮಾಣ ವಚನ ಬೋಧಿಸಿದರು. ನೂತನ ಸದಸ್ಯರಿಗೆ ಪ್ರಾಂತ ವಲಯ ಉಪಾಧ್ಯಕ್ಷ ರವಿಕಾಂತ ಬೋಸಲೆ ಪ್ರಮಾಣ ವಚನ ಬೋಧಿಸಿದರು.

ರತ್ನಾ ಮೋಹನ್ ಪುನೀತ ಮಾತನಾಡಿ, ತಾಲ್ಲೂಕಿನ ಒಂದು ಸರ್ಕಾರಿ ಶಾಲೆ ಮತ್ತು ನಗರದ ಒಂದು ಮುಖ್ಯ ರಸ್ತೆಯನ್ನು ದತ್ತು ತೆಗೆದುಕೊಂಡು ಮಾದರಿ ರಸ್ತೆಯನ್ನಾಗಿ ಪರಿವರ್ತಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.ನಿಕಟಪೂರ್ವ ಅಧ್ಯಕ್ಷ ದೇವಕುಮಾರ, ಡಾ. ಗಣೇಶ, ಸತೀಶ ಕೇಲಗಾರ, ಡಾ. ವಿದ್ಯಾ, ಡಾ. ಶಿವಾನಂದ ಹಿತ್ತಲಮನಿ, ಲತಾ ಶೆಟ್ಟಿ, ಜಿ.ಬಿ. ಮಾಸಣಗಿ, ಶಿವಪ್ಪ ಹೆದ್ದೇರಿ, ಜಿ.ಡಿ. ಬಗಾಡೆ, ಜಯಣ್ಣ ಕರಡೇರ, ಸಿ.ಎನ್. ಕಸವಾಳ, ಎಸ್.ಕೆ. ಅತಡಕರ, ಮುಂಡರಗಿ, ಎಂ.ಎಂ. ಪಾಟೀಲ,ಮೋಹನ ಪುನೀತ ಮತ್ತಿತರರು ಉಪಸ್ಥಿತರಿದ್ದರು.

ರತ್ನಾ ಪುನೀತ ಸ್ವಾಗತಿಸಿದರು. ಪೂರ್ಣಿಮಾ ಜೇಸಿ ವಾಣಿ ಓದಿದರು. ಎಂ.ಪಿ. ಮುದ್ದಿ ಅತಿಥಿಗಳನ್ನು ಪರಿಚಯಿಸಿದರು. ಎಂ.ಎಂ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭುಲಿಂಗಪ್ಪ ಹಲಗೇರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.