ADVERTISEMENT

`ಸರ್ಕಾರದ ಶೈಕ್ಷಣಿಕ ಸೌಲಭ್ಯ ಬಳಕೆ ಮಾಡಿಕೊಳ್ಳಿ'

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 8:16 IST
Last Updated 13 ಜೂನ್ 2013, 8:16 IST

ಹಿರೇಕೆರೂರ: ಗ್ರಾಮೀಣ ಪ್ರದೇಶದಲ್ಲಿ ಕಲಿಯುವ ಮಕ್ಕಳು ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಪಟ್ಟಣದ ವಿದ್ಯಾರ್ಥಿಗಳೊಂದಿಗೆ ಪೈಪೋಟಿ ನಡೆಸಲು ಮುಂದಾಗುವಂತೆ ಹಂಸಭಾವಿ ಕ್ಷೇತ್ರದ ಜಿ.ಪಂ ಸದಸ್ಯೆ ಪಾರ್ವತಿ ಭೋಗಾವಿ ಹೇಳಿದರು.

ಹಿರೇಕೆರೂರ ತಾಲ್ಲೂಕು ಚಿನ್ನಮುಳಗುಂದ ಗ್ರಾಮದ ಶ್ರೀ ಕೆ.ಬಿ.ಪಾಟೀಲ ಪ್ರೌಢ ಶಾಲೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರತ್ಯೇಕವಾಗಿ ಮಂಜೂರಿಯಾದ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಅಡುಗೆ ಕೋಣೆಗಳ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಬೈಸಿಕಲ್ ಹಾಗೂ ಪ್ರೋತ್ಸಾಹ ಧನವನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳನ್ನು ತಪ್ಪದೆ ದಿನನಿತ್ಯ ಶಾಲೆಗೆ ಕಳುಹಿಸುವ ಮೂಲಕ ಅವರನ್ನು ವಿದ್ಯಾವಂತರನ್ನಾಗಿ ಮಾಡುವಂತೆ ಮನವಿ ಮಾಡಿಕೊಂಡರು.
ಮಂಜೂರಿಯಾದ ಜಿ.ಪಂ ಅನುದಾನದಲ್ಲಿ ಯಾವುದೆ ಕಳಪೆಯಾಗದಂತೆ ಅಡುಗೆ ಕೋಣೆಗಳನ್ನು ನಿರ್ಮಾಣ ಮಾಡುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ  ಚನ್ನಬಸಪ್ಪ ಭೋಗಾವಿ, ತಾ.ಪಂ ಸದಸ್ಯ ಬಸನಗೌಡ ಕಳ್ಳೇರ, ಗ್ರಾ.ಪಂ ಅಧ್ಯಕ್ಷ ದೇವೆಂದ್ರಪ್ಪ ದೊಡ್ಡಆರೇರ, ಉಪಾಧ್ಯಕ್ಷೆ ರೇಣುಕಾ ರಾಜಂಗಳದ, ಸದಸ್ಯರಾದ ಬಸವರಾಜ ಉಳ್ಳಾಗಡ್ಡಿ, ಮಾಲತೇಶ ಅಂಗಡಿ, ಸರೋಜವ್ವ ರಾಗೇರ, ಬಸಪ್ಪ ಕರಿಯಣ್ಣನವರ, ಖಿಲಾತಬಿ ಬ್ಯಾಡಗಿ, ಗ್ರಾಮದ  ಮುಖಂಡರಾದ ಪುಟ್ಟಪ್ಪ ರಾಜಂಗಳದ, ಸಂಜೀವ ಕಬ್ಬಿಣಕಂತಿಮಠ, ಮೌನೇಶ ಬಡಿಗೇರ, ಸಂಸ್ಥೆಯ ಅಧ್ಯಕ್ಷ ಫಕ್ಕಿರಪ್ಪ ಮಾಯಣ್ಣನವರ, ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಭೀಮಪ್ಪ ಅಂಗಡಿ, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ವೀರೇಶ ಕೊಪ್ಪದ, ಸಿಬ್ಬಂದಿಗಳಾದ ನಾಗನಗೌಡ ಖಂಡೆಪ್ಪಗೌಡ್ರ, ರಮೇಶ ಮುದಕಮ್ಮನವರ, ಎಂ.ಬಿ.ಆರೀಕಟ್ಟಿ, ವಿ.ಆರ್.ಪಾಟೀಲ, ಕೆ.ವಿ.ಕಂಬಾಳಿಮಠ, ಎಸ್.ಬಿ.ಮುಳಗುಂದ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಭಗವಂತಗೌಡ್ರ ಸ್ವಾಗತಿಸಿದರು. ಚಿನ್ನಿಕಟ್ಟಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT