ADVERTISEMENT

ಸಿದ್ದರಾಮಯ್ಯ ಎದುರು ತಪ್ಪೊಪ್ಪಿಕೊಂಡ ಸಿಇಓ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 8:20 IST
Last Updated 19 ಏಪ್ರಿಲ್ 2012, 8:20 IST

ಹಾವೇರಿ: ಜಿಲ್ಲೆಯ ಬರ ನಿರ್ವಹಣೆ ಸಮರ್ಪಕವಾಗಿ ಮಾಡಲಾಗಿದೆ. ಕುಡಿ ಯುವ ನೀರು, ಮೇವಿನ ಕೊರತೆ ಇಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಕಷ್ಟು ಉದ್ಯೋಗ ಅವಕಾಶ ನೀಡ ಲಾಗಿದೆ ಎಂದು ಜಿಲ್ಲೆಯ ಜನಪ್ರತಿನಿಧಿ ಗಳಿಗೆ ಹಾಗೂ ಮಾಧ್ಯಮದವರಿಗೆ ಹೇಳುತ್ತಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಎದುರು ಮಾತ್ರ ಬರ ಪರಿಹಾರ ಕಾಮ ಗಾರಿ ನಮಗೆ ತೃಪ್ತಿ ತಂದಿಲ್ಲ ಎಂದು ಒಪ್ಪಿಕೊಂಡರು.

ಜಿಲ್ಲೆಯ ಬರ ಪೀಡಿತ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ನಂತರ ನಗರದ ಪ್ರವಾಸಿ ಮಂದಿರದಲ್ಲಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲೆ ಬರ ಪರಿಸ್ಥಿತಿ ಬಗ್ಗೆ ಮಾಹಿತಿ ಕೇಳಿದಾಗ ಬಹುತೇಕ ಅಧಿಕಾರಿಗಳು ಮಾಹಿತಿ ನೀಡುವಲ್ಲಿ ವಿಫಲವಾದರಲ್ಲದೇ ತಮ್ಮ ಲೋಪವನ್ನು ಒಪ್ಪಿಕೊಂಡರು.

ಆಗ ಆಕ್ರೋಶಗೊಂಡ ಸಿದ್ದರಾಮಯ್ಯ ಅವರು, ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರಲ್ಲದೇ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆತ್ಮಸಾಕ್ಷಿಯಿಂದ ಹೇಳಿ ಜಿಲ್ಲೆಯಲ್ಲಿ ಕೈಗೊಂಡ ಬರ ಪರಿಹಾರ ಕಾಮಗಾರಿ ನಿಮಗಾದರೂ ತೃಪ್ತಿ ತಂದಿದೆಯೇ ಎಂದು ಪ್ರಶ್ನಿಸಿದರು.

ಜಿ.ಪಂ. ಸಿಇಓ ಅವರು ಇಲ್ಲಾ ಸರ್ ನಮಗೆ ತೃಪ್ತಿ ತಂದಿಲ್ಲ. ಇನ್ನು ಮೇಲೆ ಸರಿಯಾಗಿ ಕಾರ್ಯ ನಿರ್ವಹಿಸುವುದಾಗಿ ಹೇಳುವ ಮೂಲಕ ಇಲ್ಲಿವರೆಗೆ ಬರ ಪರಿಹಾರ ಕುರಿತು ಹೇಳಿರುವುದು ಸುಳ್ಳು ಎಂಬುದನ್ನು ಅವರ ಮಾತಿನಿಂದಲೇ ಒಪ್ಪಿಕೊಳ್ಳುವ ಮೂಲಕ ಜನತೆಗೆ ಸುಳ್ಳು ಮಾಹಿತಿ ನೀಡಿರುವುದನ್ನು ಬಹಿರಂಗಪಡಿಸಿದರು.

ಜಿಲ್ಲಾಡಳಿತ ಬರ ನಿರ್ವಹಣೆ ಕುರಿತು ಕೈಗೊಂಡ ಕಾರ್ಯಗಳ ಬಗ್ಗೆ ಅಸಮಾ ಧಾನ ವ್ಯಕ್ತಪಡಿಸಿದ ಸಿದ್ಧರಾಮಯ್ಯ ಅವರು, ಬರ ಪರಿಸ್ಥಿತಿ ನಿರ್ವಹಣೆ ಬಗ್ಗೆ ಯಾವುದೇ ಅಧಿಕಾರಿಗಳು ಗಂಭೀರವಾಗಿ ಕೆಲಸ ಮಾಡಿಲ್ಲ. ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದರಲ್ಲದೇ ಜಿಲ್ಲಾಧಿ ಕಾರಿಗಳು ಸೇರಿದಂತೆ ವಿವಿಧ ಇಲಾ ಖೆಯ ಅಧಿಕಾರಿಗಳ ವಿರುದ್ಧ ಹರಿ ಹಾಯ್ದರು.

ಜಿಲ್ಲೆಯ ಕೃಷಿ ಕ್ಷೇತ್ರ, ನೀರಾವರಿ ಕ್ಷೇತ್ರ, ಒಣ ಬೇಸಾಯ, ಬೆಳೆ ಹಾನಿ, ರೂಪಾಯಿಗಳಲ್ಲಿ ಬೆಳೆ ಹಾನಿ ಎಷ್ಟು ಎಂಬುದನ್ನು ಮಾಹಿತಿ ನೀಡುವಂತೆ ಕೃಷಿ ಜಂಟಿ ನಿರ್ದೇಶಕ ಕೆಂಪರಾಜು ಅವರಿಗೆ ಸೂಚಿಸಿದಾಗ ಮಾಹಿತಿ ನೀಡುವಲ್ಲಿ ವಿಫಲರಾದ ಕೆಂಪುರಾಜು ಅವರನ್ನು ನಿವು ಹೇಗೆ ಕೃಷಿ ಅಧಿಕಾರಿಗಳಾದಿರಿ ಎಂದು ತರಾಟೆಗೆ ತೆಗೆದುಕೊಂಡು ನೀವು ತಂದಿರುವ ಮಾಹಿತಿಯನ್ನು ಸಂಪೂರ್ಣ ಓದಿಕೊಂಡು ನಂತರ ಹೇಳುವಂತೆ ಸೂಚಿಸಿದರು. ನಂತರ ಓದಿಕೊಂಡು ಪರೀಕ್ಷೆಗೆ ಸಿದ್ಧರಾಗಿದ್ದೀರಾ ಎಂದು ಕೇಳಿದ ಸಿದ್ದರಾಮಯ್ಯ, ಮಾಹಿತಿ ಹೇಳಿ ಎಂದರೂ ಅವರು ಮಾಹಿತಿ ನೀಡುವಲ್ಲಿ ವಿಫಲರಾದರು.

ಸಭೆಯಲ್ಲಿ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಶಿವರಾಂ ಭಟ್ ಅವರಿಗೆ ಕೂಡಾ ಸಮರ್ಪಕ ಮಾಹಿತಿ ನೀಡಲು ಸಾಧ್ಯವಾಗಲಿಲ್ಲಿ. ಇದರಿಂದ ಅಸಮಾಧನಗೊಂಡ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಬರ ಪೀಡಿತ ಪ್ರದೇಶಗಳಲ್ಲಿ ಭೇಟಿ ನೀಡಿ ಸರಿಯಾದ ಮಾಹಿತಿ ಸಂಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡುವಂತೆ ಸೂಚಿಸಿದರು.

ಜನರು ಗುಳೆ ಹೋಗದಂತೆ ತಡೆ ಯಲು ಉದ್ಯೋಗ ಖಾತ್ರಿ ಯೋಜನೆ ಯಲ್ಲಿ ಜನತೆಗೆ ಉದ್ಯೋಗ ನೀಡಲಾಗು  ತ್ತಿದೆ ಎಂದು ಜಿಪಂ ಮುಖ್ಯ ಕಾರ್ಯ   ನಿರ್ವಾಹಕ ಅಧಿಕಾರಿ ಉಮೇಶ ಕುಸ ಗುಲ್ ಅವರ ಹೇಳಿಕೆಗೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.

ಕಳೆದ ವರ್ಷ ಹಾಗೂ ಈ ವರ್ಷ ಉದ್ಯೋಗ ಖಾತ್ರಿ ಯೋಜನೆಗೆ ಎಷ್ಟು ಖರ್ಚು ಮಾಡಿದ್ದೀರಿ ಎಂದು ಕೇಳಿದಾಗ, ಜಿ.ಪಂ.ಉಪ ಕಾರ್ಯದರ್ಶಿ ಜಿ. ಗೋವಿಂದಸ್ವಾಮಿ ಅವರು ಕಳೆದ ವರ್ಷ  91 ಕೋಟಿ ರೂಪಾಯಿ, ಈ ವರ್ಷ 61 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.

ಭೀಕರ ಬರಗಾಲ ಇರುವ ಈ ಸಂದರ್ಭದಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ಹಣ ಖರ್ಚು ಮಾಡಿದ್ದೀರಿ ಎಂದು ಬರ ನಿರ್ವಹಣೆಯಲ್ಲಿ ವಿಫಲ ರಾದಂತೆಯೇ ಅಲ್ಲವೇ ಎಂದಾಗ ಅಧಿ ಕಾರಿಗಳು ಹೌದು ಎಂದು ತಲೆ ಅಲ್ಲಾ ಡಿಸಿದರು.

ಉದ್ಯೋಗ ಖಾತ್ರಿ ಯೋಜನೆ ಕಾಯ್ದೆಯನ್ನು ಅಧಿಕಾರಿಗಳೇ ಸರಿಯಾಗಿ ಓದಿಕೊಂಡಿಲ್ಲ ಎಂದು ದೂರಿದ ಸಿದ್ಧರಾಮಯ್ಯ, ಒಬ್ಬರಿಗೆ ಕನಿಷ್ಠ 100 ದಿನ,  ಗರಿಷ್ಟ ಎಷ್ಟು ದಿನವಾದರೂ ಕೆಲಸ ನೀಡಬೇಕು ಎಂದು ಕಾಯ್ದೆ ಯಲ್ಲಿದೆ. ಅಧಿಕಾರಿಗಳು ಇದನ್ನು ಮರೆ ಮಾಚಿ ಒಬ್ಬ ವ್ಯಕ್ತಿಗೆ ಕೇವಲ 100 ದಿನ ಕೂಲಿ ಕೆಲಸ ನೀಡುತ್ತಿದ್ದಾರೆ ಎಂದರು.

ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿ ಸಿದ್ದರು.



`ಸಾಲ ವಸೂಲಾತಿ ನಿಲ್ಲಿಸಿ~
ಪ್ರಸಕ್ತ ಸಾಲಿನಲ್ಲಿ ಬರ ಪರಿಸ್ಥಿತಿ ಇರುವುದರಿಂದ ಜಿಲ್ಲೆಯ ರೈತರ ಕೃಷಿ ಸಾಲದ ವಸೂಲಾತಿಯನ್ನು ತಕ್ಷಣವೇ ನಿಲ್ಲಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಈ ವಿಷಯವನ್ನು ತಿಳಿಸಬೇಕೆಂದು ನಾಗಶಯನ ಅವರಿಗೆ ಆದೇಶಿಸಿದರು.

ಬುಧವಾರ ನಗರದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸಾಲ ವಸೂಲಾತಿ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದರೆ, ತಾವು ಸಹಿಸುವುದಿಲ್ಲ ಎಂದ ಸಿದ್ಧರಾಮಯ್ಯ, ಸಾಲವಿರುವ ರೈತರಿಗೆ ಮರು ಸಾಲ ನೀಡಬೇಕು ಎಂದು ಆದೇಶಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ಕೃಷಿ ಸಾಲ ಹಾಗೂ ವಸೂಲಾತಿ ಕುರಿತು ಮಾತನಾಡಿದ ಸಹಕಾರಿ ಇಲಾಖೆ ನಿಬಂಧಕ ನಾಗಶಯನ, ಜಿಲ್ಲೆಯಲ್ಲಿ ಒಟ್ಟು 107 ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಇದರಲ್ಲಿ ಶೇ 75 ರಷ್ಟು ವಸೂಲಿಯಾಗಿದೆ ಎಂದರು.

ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆದು ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಂತೆ ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಅವರಿಗೆ ಸಿದ್ದರಾಮಯ್ಯ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಶಾಸಕ ಬಿ.ಸಿ.ಪಾಟೀಲ ಕೂಡಾ, ಅಧಿಕಾರಿಗಳು ಜಿಲ್ಲೆಯ ಬರ ಪರಿಸ್ಥಿತಿಯ ಕುರಿತು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಅಂಕಿ ಅಂಶಗಳನ್ನು ಮರೆ ಮಾಚಿ ಮಾಹಿತಿ ನೀಡುತ್ತಿರುವ ಅಧಿಕಾರಿಗಳು ಹಾಗೂ ಮಂತ್ರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.