ADVERTISEMENT

ಸೆ. 30ರಿಂದ ನಾಡಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 5:10 IST
Last Updated 16 ಸೆಪ್ಟೆಂಬರ್ 2011, 5:10 IST

ಹಾವೇರಿ:  ನಾಡು-ನುಡಿಯ ನಾಡ ಹಬ್ಬವನ್ನು ಇದೇ 30 ಹಾಗೂ ಅ.1 ಮತ್ತು 2 ರಂದು ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಯಿತು. ನಗರದ ಸರ್ಕಾರಿ ನೌಕರರ ಭವನ ದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿ ಷತ್ತು ಮತ್ತು ನಾಡಹಬ್ಬ ಉತ್ಸವ ಸಮಿತಿ ಮಂಗಳವಾರ ನಡೆಸಿದ ಸಭೆ ಯಲ್ಲಿ ಈ ನಿರ್ಧಾರ ಪ್ರಕಟಿಸಲಾ ಯಿತು.

ಸಭೆಯಲ್ಲಿ ಸ್ವಾಗತ ಸಮಿತಿ ಸೇರಿ ದಂತೆ ವಿವಿಧ ಸಮಿತಿಗಳನ್ನು ಆಯ್ಕೆ ಮಾಡಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಗಣ್ಯ ವರ್ತಕ ಸೋಮಣ್ಣ ಎಸ್. ಮುಷ್ಠಿ ಆಯ್ಕೆಯಾದರು. ವಿವಿಧ ಸಮಿತಿಗಳ ಜವಾಬ್ದಾರಿಯನ್ನು ಎಸ್. ಎನ್. ದೊಡ್ಡಗೌಡರ, ಬಿ. ಬಸವರಾಜ, ಎಸ್.ಆರ್.ಹಿರೇಮಠ, ಮಾಲತೇಶ ಅಂಗೂರ, ಸಿ.ಎ. ಕೂಡಲ ಮಠ, ಕೆ.ಆರ್.ಹಿರೇಮಠ ಮುಂತಾದ ವರಿಗೆ ನೀಡಲಾದೆ.

ಇದೇ 16ರಂದು ಮತ್ತೊಂದು ಸುತ್ತಿನ ಸಭೆಯನ್ನು ನಡೆಸಿ ಅದರಲ್ಲಿ ಸಮಿತಿಗಳನ್ನು ಪೂರ್ಣ ಪ್ರಮಾಣದಲ್ಲಿ ರಚಿಸಲಾಗುವುದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್‌ನ ಹಿರಿಯ ಸದಸ್ಯ ಆರ್.ಎಸ್.ಮಾಗ ನೂರ ತಿಳಿಸಿದರು.

ನಾಡ ಹಬ್ಬದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಉಪನ್ಯಾಸಗಳನ್ನು ನಡೆಸಲು ಸಭೆ ಯಲ್ಲಿ ಭಾಗವಹಿಸಿದ ವಿರೂಪಾಕ್ಷ ಬಣ ಕಾರ, ಕೆ.ಎಸ್.ಪುರದ, ರವಿ ಹಿಂಚಿ ಗೇರಿ, ಚಂದ್ರಶೇಖರ       ಮಾಳಗಿ, ಶಂಕರ ಸುತಾರ, ಎಸ್.ಬಿ.ಮಸಲ ವಾಡ, ಶಿವಯೋಗಿ ಮರಡೂರ, ಗಂಗಾಧರ ನಂದಿ, ಬಸವರಾಜ ಪೂಜಾರ, ಕೆ.ಎಂ. ಹೂಗಾರ,     ಪ್ರಕಾಶ ಜೈನ್, ಅಶೋಕ ಸಂಕಣ್ಣನ ವರ, ಮಾಲತೇಶ ಅಂಗೂರ, ಬಸಮ್ಮ ಹಳಕೊಪ್ಪ, ಅಮೃತಕ್ಕ ಶೀಲವಂತರ, ರೇಣುಕಾ ಗುಡಿಮನಿ, ಅಕ್ಕಮಹಾ ದೇವಿ ಹಾನಗಲ್ಲ, ಮಲ್ಲಿಕಾರ್ಜುನ ಹಿಂಚಿಗೇರಿ, ಕಲಾವಿದರಾದ ಕೆ.ಎಂ. ಹಂಚಿನಮನಿ, ವೀರಣ್ಣ ಶೀಲವಂತರ ನೀಡಿದರು. ತಾಲ್ಲೂಕು ಕ.ಸಾ.ಪ ಅಧ್ಯಕ್ಷ ವಿ.ಎಂ.ಪತ್ರಿ ಸ್ವಾಗತಿಸಿದರು, ನಾಗರಾಜ ವಂದಿಸಿದರು.

ನೀರಿನ ಸೆಳೆತ: ಎತ್ತು ಸಾವು

ನರಗುಂದ: ಹಳ್ಳ ದಾಟುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಎರಡು ಎತ್ತುಗಳು ಸಾವನ್ನಪ್ಪಿದ್ದು, ಅದೃಷ್ಟವ ಶಾತ್ ಮೂವರು ಪ್ರಾಣಾಪಾಯ ದಿಂದ ಪಾರಾಗಿರುವ ಘಟನೆ ತಾಲ್ಲೂ ಕಿನ ಹುಣಸಿಕಟ್ಟಿಯಲ್ಲಿ ಗುರುವಾರ ನಡೆದಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.