ADVERTISEMENT

ಸೇವಾದಳದಿಂದ ಶಿಸ್ತುಬದ್ಧ ಶಿಕ್ಷಣ: ಪಟ್ಟಣಶೆಟ್ಟರ್

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 7:33 IST
Last Updated 20 ಜುಲೈ 2013, 7:33 IST

ಶಿಗ್ಗಾವಿ: `ಮಕ್ಕಳಲ್ಲಿ ಶಿಸ್ತುಬದ್ಧ ಶಿಕ್ಷಣ ಕಲಿಕೆ ಭಾರತ ಸೇವಾದಳದಿಂದ ಮಾತ್ರ ಸಾಧ್ಯವಿದೆ. ಹೀಗಾಗಿ ಸೇವಾದಳದ ನಿಯಮಾವಳಿಗಳನ್ನು ಪ್ರತಿ ಶಾಲೆಗಳಲ್ಲಿ ಅಳವಡಿಸುವುದು ಅಗತ್ಯವಾಗಿದೆ' ಎಂದು ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಬಿ.ಎಸ್.ಪಟ್ಟಣಶೆಟ್ಟರ್ ಅಭಿಪ್ರಾಯಪಟ್ಟರು.

ಪಟ್ಟಣದ ಗುರುಭವನದಲ್ಲಿ ಗುರುವಾರ ನಡೆದ ಭಾರತ ಸೇವಾದಳ ತಾಲ್ಲೂಕು ಘಟಕ, ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಕಾರ್ಯಾಲಯ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ಭಾರತ ಸೇವಾದಳ ಶಿಕ್ಷಕರ ಶೈಕ್ಷಣಿಕ ವರ್ಷದ ಮಿಲಾಪ್ ಪುನಶ್ವೇತನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

`ಭಾರತ ಸೇವಾದಳ ಕಾರ್ಯಚಟುವಟಿಕೆಗಳನ್ನು ಶಿಕ್ಷಕರು ಮಕ್ಕಳಿಗೆ ಶಾಲೆಯಲ್ಲಿ ಅಳವಡಿಸಿಕೊಳ್ಳಬೇಕು.  ರಾಷ್ಟ್ರೀಯ ನೇತಾರರ ಹೆಸರಲ್ಲಿ ಶಾಲೆಯಲ್ಲಿ ಘಟಕಗಳನ್ನು ಆರಂಭಿಸಿ ಮಕ್ಕಳಿಗೆ ಶಿಸ್ತು ದೇಶಪ್ರೇಮ, ರಾಷ್ಟ್ರಗೀತೆ ಹಾಗೂ ರಾಷ್ಟ್ರಲಾಂಛನದ ಬಗ್ಗೆ ತಿಳಿಸಬೇಕು' ಎಂದು ಹೇಳಿದರು.

ಸೇವಾದಳದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಪುರದ ಮಾತನಾಡಿ, `ಶಿಸ್ತು ಶಿಕ್ಷಣಕ್ಕೆ ಪೂರಕವಾಗಿದ್ದು, ಮನುಷ್ಯ ಶಿಸ್ತು ಅಳವಡಿಸಿಕೊಂಡಾಗ ಮಾತ್ರ  ಕಾಯಕ ಯಶಸ್ವಿಯಾಗಲು ಸಾಧ್ಯ' ಎಂದರು. ಸೇವಾದಳ ಜಿಲ್ಲಾ ಸಂಚಾಲಕ ಸದಸ್ಯ ಪ್ರಕಾಶ ಗೋಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಶಿಕ್ಷಕ ಎಂ.ಬಿ. ಹಳೇಮನಿ ಅಧ್ಯಕ್ಷತೆ ವಹಿಸಿದ್ದರು. ಎಲ್.ಎಸ್.ಲಮಾಣಿ . ಮುಖ್ಯಶಿಕ್ಷಕ ಸಿ.ಎನ್.ಚರಂತಿಮಠ, ಶೇತಸನದಿ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ವಿ.ಎಂ.ನರೇಗಲ್ಲ ಸ್ವಾಗತಿಸಿದರು. ಎಸ್. ಎಫ್.ಮಸಳೆ ನಿರೂಪಿಸಿದರು. ಬಿ.ಕೆ ಹೊಸಪೇಟೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT