ADVERTISEMENT

ಹಾನಗಲ್ಲ: 2854 ಫಲಾನುಭವಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 6:45 IST
Last Updated 1 ಜೂನ್ 2011, 6:45 IST

ಹಾನಗಲ್ಲ: ಸುವರ್ಣ ಭೂಮಿ ಯೋಜ ನೆಯ ಫಲಾನುಭವಿಗಳ ಆಯ್ಕೆ ಲಾಟರಿ ಎತ್ತುವ ಮೂಲಕ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ ದಲ್ಲಿ ಮಂಗಳವಾರ ನಡೆಯಿತು.

ತಾ.ಪಂ. ಅಧ್ಯಕ್ಷೆ ಲಲಿತಾ ಹಿರೇಮಠ, ಜಿ.ಪಂ. ಸದಸ್ಯೆ ಅಬಿದಾಬಿ ನದಾಫ ಹಾಗೂ ಪುರಸಭಾಧ್ಯಕ್ಷೆ ಲಕ್ಷ್ಮವ್ವ ಹಿರೇಮಠ ಚಾಲನೆ ನೀಡಿದರು.

ಯೋಜನೆಯಡಿ ಸೌಲಭ್ಯಕ್ಕಾಗಿ ಒಟ್ಟು 10213 ಅರ್ಜಿಗಳು ಸಲ್ಲಿಕೆಯಾಗಿದ್ದು ಇದರಲ್ಲಿ 2854 ಫಲಾನುಭವಿಗಳನ್ನು ಆಯ್ಕೆ ಮಾಡ ಲಾಯಿತು.

ಹಾನಗಲ್ಲ, ಬಮ್ಮನಹಳ್ಳಿ, ಅಕ್ಕಿ ಆಲೂರು ಬಳಿಗಳಿಗೆ ಪ್ರತ್ಯೇಕವಾಗಿ ಲಾಟರಿ ಎತ್ತುವ ವೇದಿಕೆಗಳನ್ನು ನಿರ್ಮಿ ಸಲಾಗಿತ್ತು.

ಜಿ.ಪಂ. ಸದಸ್ಯ ಪದ್ಮನಾಭ ಕುಂದಾಪೂರ, ಪುರಸಭಾ ಮಾಜಿ  ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ತಹಸೀಲ್ದಾರ್ ಎಸ್. ಎನ್. ರುದ್ರೇಶ, ಸಹಾಯಕ ಕೃಷಿ ನಿರ್ದೇಶಕಿ ಆರ್ ಸ್ಮೀತಾ, ಲೋಕೋಪಯೋಗಿ ಇಲಾ ಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ವೈ.ಬಂಡಿವಡ್ಡರ, ತಾ.ಪಂ .ಕಾರ್ಯನಿರ್ವಾಹಕ ಅಧಿಕಾರಿ ಎ.ಬಿ.ಹೊನ್ನಾವರ, ಜಿ.ಪಂ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಕೆ.ಆರ್.ಮಠದ, ತೋಟಗಾರಿಕೆಯ ಇಲಾಖೆ ಜಿ.ನಾಗಾರ್ಜುನಗೌಡ, ಹೆಸ್ಕಾಂನ ಎಚ್.ಕೃಷ್ಣಪ್ಪ, ಸಿಪಿಐ ಟಿ.ಎಚ್.ರಾಜಪ್ಪ, ಪಿಎಸ್‌ಐ ಚಿದಾನಂದ ಮುಂತಾದವರು ಹಾಜರಿದ್ದರು.

ಹತ್ತಿ ಬೀಜ ವಿತರಣೆ ಇಂದು
ಹಾನಗಲ್ಲ: ಪಟ್ಟಣದ ಎಪಿಎಂಸಿ ಆವರಣ ದಲ್ಲಿ ಜೂ.2ರಂದು ಬೆಳಿಗ್ಗೆ 10 ಗಂಟೆಗೆ ಕನಕ ಹತ್ತಿ ಬೀಜ ವಿತರಿಸಲಾಗುವುದು. ರೈತರು ಪರವಾನಿಗೆ ಹಾಗೂ ಗುರುತಿನ ಚೀಟಿಯೊಂದಿಗೆ ಬಂದು ಬೀಜ ಪಡೆದುಕೊಳ್ಳಬೇಕು. ಪ್ರತಿಯೊಬ್ಬರಿಗೆ ಒಂದೊಂದು ಪ್ಯಾಕೆಟ್ ವಿತರಿಸ ಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕಿ ಆರ್ ಸ್ಮೀತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.