ರಾಣೆಬೆನ್ನೂರು: ಇತಿಹಾಸ ಹೇಳುತ್ತ ಕುಳಿತರೆ ಸಾಲದು. ಇತಿಹಾಸ ಮುಂದಿ ಟ್ಟುಕೊಂಡು ವರ್ತಮಾನ ಕಟ್ಟುವ ಕೆಲಸವಾಗಬೇಕು. ಕನ್ನಡಕ್ಕಾಗಿ ಹೋರಾ ಡುವವರು ಬಹಳ ಜನ ಇದ್ದಾರೆ. ಕನ್ನಡ ದಲ್ಲಿ ಬದುಕುವವರು ಕಡಿಮೆ ಯಾಗಿದ್ದಾರೆ. ಇಂತಹ ಸಮ್ಮೇಳನಗಳ ಮೂಲಕ ಕನ್ನಡ ಕಟ್ಟುವ ಕೆಲಸವನ್ನು ಮಾಡಬೇಕಿದೆ ಎಂದು ತರಳಬಾಳು ಜಗದ್ಗುರು ಸಾಣೆಹಳ್ಳಿ ಶಾಖಾಮಠದ ಡಾ.ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ವಿನಾಯಕನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಕಸಾಪ ತಾಲ್ಲೂಕು ಘಟಕ ಏರ್ಪಡಿಸಿದ್ದ ತಾಲ್ಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
12ನೇ ಶತಮಾನದ ಶರಣರು ಕನ್ನಡದ ಕಣ್ಮಣಿಗಳು. ಕನ್ನಡಕ್ಕಾಗಿ ಬದುಕಿದವರು. ಕನ್ನಡದ ನೆಲ, ಜಲ, ಭಾಷೆಗೆ ಧಕ್ಕೆ ಉಂಟಾದರೂ ಸತ್ತ ವರಂತೆ ಬದುಕುತ್ತಿದ್ದೇವೆ. ಸತ್ತಂತೆ ಇರುವವನ್ನು ಬಡಿದೆಬ್ಬಿಸಬೇಕಿದೆ ಎಂದು ಅವರು ಹೇಳಿದರು.
ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿ ಕನ್ನಡ ಶಾಲೆಗಳು ಮುಚ್ಚುವ ಹಂತ ದಲ್ಲಿವೆ. ಇಂಗ್ಲಿಷ್ ಅಚ್ಚುಕಟ್ಟಾಗಿ ಕಲಿಸು ವವ ಶಿಕ್ಷಕರು ಇಲ್ಲ. ಕನ್ನಡ ಶಿಕ್ಷಕರಿಗೆ ಕಲಿಸುವ ಆಸಕ್ತಿಯಿಲ್ಲ. ಕನ್ನಡ ಮತ್ತು ಇಂಗ್ಲಿಷ್ ಎರಡನ್ನು ಕಲಿಸುವ ಸಾಮರ್ಥ್ಯ ಇಲ್ಲದ ಶಿಕ್ಷಕರು ತುಂಬಿ ದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕನ್ನಡ ಸ್ವಲ್ಪ ಉಳಿದಿದೆ, ಮಹಾ ನಗರಗಳಲ್ಲಿ ಕನ್ನಡ ಅಳಿದು ಹೋಗಿದೆ ಎಂದರು.
ಸರ್ಕಾರ ಗುಟ್ಕಾ ನಿಷೇದ ಮಾಡಿದ್ದು ಸ್ವಾಗತಾರ್ಹ. ಅದೇ ರೀತಿ ಮದ್ಯಪಾನ, ಧೂಮ್ರಪಾನ ನಿಷೇಧ ಮಾಡುವ ಪ್ರಯ ತ್ನಕ್ಕೆ ಕೈಹಾಕಬೇಕು. ಇದರಿಂದ ಸದೃಢ ಸಮಾಜ ಕಟ್ಟಲು ಸಾಧ್ಯ, ಯುವಕರಲ್ಲಿ ಓದುವ ಹವ್ಯಾಸ ಮೂಡಿಸಬೇಕಾದರೆ ಗ್ರಾಮೀಣ ಪ್ರದೇಶಗಳಲ್ಲಿ ಹೆಂಡದ ಅಂಗಡಿಗಳ ಬದಲು ಗ್ರಂಥಾಲಯ ತೆರೆಯಬೇಕು ಎಂದು ಪಂಡಿತಾರಾಧ್ಯ ಸ್ವಾಮೀಜಿ ಸಲಹೆ ನೀಡಿದರು.
ಸರ್ಕಾರದ ಜನಪ್ರಿಯವಾದ ಯೋಜನೆಗಳಿಂದ ಕನ್ನಡ ಉಳಿಸಲು ಸಾಧ್ಯವಿಲ್ಲ, ಜನರನ್ನು ಸೋಮಾರಿತನಕ್ಕೆ ಹಚ್ಚಿದಂತಾಗುತ್ತದೆ, ಜನಪರ ಯೋಜನೆಗಳು ಫಲಪ್ರದವಾದಾಗ ಕನ್ನಡ ಉಳಿಯಲು ಸಾಧ್ಯ. ಯೋಗ್ಯ ವ್ಯಕ್ತಿ ಗಳು ಯೋಗ್ಯ ಸ್ಥಾನದಲ್ಲಿ ಕುಳಿ ತಾಗ ಅದಕ್ಕೆ ಬೆಲೆ ಬರುತ್ತದೆ, ಅಯೋಗ್ಯ ವ್ಯಕ್ತಿಗಳು ಯೋಗ್ಯ ಸ್ಥಾನ ದಲ್ಲಿ ಕುಳಿತರೆ ಅಗ್ಗವಾಗುತ್ತಾರೆ ಎಂದು ಸ್ವಾಮೀಜಿ ಚುಚ್ಚಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಆಯುಕ್ತ ಮನು ಬಳಿಗಾರ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ಅಚ್ಚುಕಟ್ಟಾಗಿ ಕಲಿತರೆ ಪ್ರಾದೇಶಿಕ ಭಾಷೆ ಕಲಿಯುವುದು ಸುಲಭ. ಮನೆ ಮನಗಳಲ್ಲಿ ಸಂಸ್ಕೃತಿ, ಸಾಹಿತ್ಯ ಶ್ರೀಮಂತಿಕೆ ಉಳಿಸುವ ದಿಸೆ ಯಲ್ಲಿ ಸಮ್ಮೇಳನ ನಡೆಯು ವಂತಾಗಬೇಕು ಎಂದರು.
ಒಂದು ಮತ್ತು ಎರಡನೇ ಶತಮಾನದಲ್ಲಿ ಕೂಡ ಕನ್ನಡ ಪ್ರಬಲವಾಗಿತ್ತು. ನಮ್ಮ ಒಳ್ಳೆತನದಿಂದ ಸೌಲಭ್ಯಗಳು ದುರುಪ ಯೋಗವಾಗುತ್ತಿವೆ. 2004ರಲ್ಲಿ ದೊರೆ ಯಬೇಕಿದ್ದ ಶಾಸ್ತ್ರೀಯ ಸ್ಥಾನಮಾನ 2008ರಲ್ಲಿ ಸಿಕ್ಕಿತು. ಕನ್ನಡಕ್ಕೆ ಜ್ಞಾನ ಪೀಠ ಪ್ರಶಸ್ತಿ ತಂದು ಕೊಟ್ಟ ಜಿಲ್ಲೆ ಹಾವೇರಿ. ಅಪಾರ ಸಾಹಿತ್ಯ ಬಂಡವಾಳ ಹೊಂದಿದ್ದು, ಕನಕದಾಸರು, ಸರ್ವಜ್ಞ, ಶರೀಫರು, ಹೆಳವನಕಟ್ಟಿ ಗಿರಿಯ ಮ್ಮನಂತಹ ಮಹಾನ್ ಮೇದಾವಿಗಳಿಗೆ ಜನ್ಮ ನೀಡಿದ ನಾಡಿದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ವಾಧ್ಯಕ್ಷ ಸಮ್ಮೇಳನಾಧ್ಯಕ್ಷ ಜೆ.ಎಂ.ಮಠದ ಮಾತನಾಡಿದರು. ಡಿವೈ ಎಸ್‌ಪಿ ಜಯಪ್ರಕಾಶ, ಎಪಿಎಂಸಿ ಅಧ್ಯಕ್ಷ ಸಣ್ಣತಮ್ಮಪ್ಪ ಬಾರ್ಕಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಮಾಸಣಗಿ ಅಭಿಪ್ರಾಯ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕಣ್ಣು ನಮ್ಮ ಸಂಪತ್ತು, ಡಾ. ವೀರಣ್ಣ ರಾಜೂರು ಮತ್ತು ರಂಗಭೂಮಿ ಮತ್ತು ನುಡಿ ದಾರಿ ಎಂಬ ಮೂರು ಪುಸ್ತಕಗಳನ್ನು ಸ್ವಾಮೀಜಿ ಬಿಡುಗಡೆ ಮಾಡಿದರು.
ಶ್ವೇತಾ ನೇಕಾರ ಭರತ ನಾಟ್ಯ ಮಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿ.ಪಂ. ಸದಸ್ಯರಾದ ಮಂಜುನಾಥ ಓಲೇಕಾರ, ಶಿವಕುಮಾರ ಮುದ್ದ ಪ್ಪಳವರ, ಲಲಿತಾ ಜಾಧವ, ಮಂಜುಳಾ ಅಂಬಲಿ ಮತ್ತು ತಾ.ಪಂ. ಅಧ್ಯಕ್ಷೆ ಶಾರದಾ ಲಮಾಣಿ, ಶಾರದಾ ಮಠದ, ಶೇಖಪ್ಪ ಹೊಸಗೌಡ್ರ, ಬಸವ ರಾಜ ಹುಚಗೊಂಡರ, ಎಂ.ಎಸ್. ಅರಳಿ, ಜಿ.ಜಿ. ಹೊಟ್ಟಿಗೌಡ್ರ, ಎಂ.ಎಂ. ಖನ್ನೂರು, ರತ್ನಾಪುನೀತ, ಜಯಶ್ರೀ ಶಿವ ಮೊಗ್ಗಿ, ಸುರೇಶ ಕರೂರು, ಎಸ್.ಸಿ. ಆರಾಧ್ಯಮಠ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಗರಸಭೆ 31 ಸದಸ್ಯರನ್ನು ಸ್ವಾಮೀಜಿ ಸನ್ಮಾನಿಸಿದರು. ಸಾಹಿತಿ ಡಾ.ಕೆ.ಎಚ್. ಮುಕ್ಕಣ್ಣನವರ ಹಿಂದಿನ ಸಮ್ಮೇಳನಾಧ್ಯಕ್ಷರ ನುಡಿಗಳನ್ನು ಮೆಲುಕು ಹಾಕಿದರು.
ಭಾರತಿ ಜಂಬಗಿ ಹಾಗೂ ಪುಷ್ಪಾ ಬದಾಮಿ ಸಂಗಡಿಗರು ನಾಡಗೀತೆ ಹಾಡಿದರು. ಬಿ.ಎನ್. ಪಾಟೀಲ ಸ್ವಾಗತಿಸಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಸಂಗಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಆರ್. ಚೂಡಾಮಣಿ ಮತ್ತು ಎಚ್.ಎಸ್. ಮುದಿಗೌಡ್ರ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಅಜ್ಮನಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.