ADVERTISEMENT

ಹೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 10:15 IST
Last Updated 18 ಅಕ್ಟೋಬರ್ 2012, 10:15 IST

ಬ್ಯಾಡಗಿ: ಬರಗಾಲದ ಕರಿ ನೆರಳಿನಲ್ಲಿ ಬದುಕುತ್ತಿರುವ ತಾಲ್ಲೂಕಿನ ರೈತರ ಪಂಪ್‌ಸೆಟ್‌ಗಳಿಗೆ ಸಿಟಿ ಲೈನ್ ಮೂಲಕ ಸಮರ್ಪಕ ವಿದ್ಯುತ್ ಪೂರೈಕೆ ಮಾಡು ವಂತೆ ಆಗ್ರಹಿಸಿ ರೈತ ಹೋರಾಟ ಸಮಿತಿಯ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ರೈತರು ಹೆಸ್ಕಾಂನ ಸಹಾಯಕ ಎಂಜನಿಯರ್ ಎಸ್.ಪಿ. ಹೊಳಿಯಣ್ಣನವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪುರಸಭಾ ಸದಸ್ಯ ಹಾಗೂ ಸಮಿತಿಯ ಗೌರವ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಮಾತನಾಡಿ, ಇಲ್ಲಿಯ ರೈತರ ಪಂಪ್‌ಸೆಟ್‌ಗಳಿಗೆ ಈಗಲೂ ಸಿಟಿ ಲೈನ್ ಮೂಲಕ ವಿದ್ಯುತ್ ಪೂರೈಕೆಯಾಗು ತ್ತಿದೆ. ಅದನ್ನು ಈಗ ಹೆಸ್ಕಾಂನ ಅಧಿ ಕಾರಿಗಳು ಬದಲಾಯಿಸಲು        ಹೊರಟಿದ್ದು ರೈತರು ತುಂಬಾ ತೊಂದರೆ ಅನು ಭವಿಸಲಿದ್ದಾರೆ. ಹೀಗಾಗಿ ಈ         ಹಿಂದಿನಂತೆ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಹೋರಾಟ ಸಮಿತಿ ಅಧ್ಯಕ್ಷ ಹನುಮಂತಪ್ಪ ಮಾಗೋಡ, ಉಪಾಧ್ಯಕ್ಷ ನಿಂಗಪ್ಪ ಅರಳಿಮಟ್ಟಿ, ಕಾರ್ಯದರ್ಶಿ ಈರಪ್ಪ ಸಂಕಣ್ಣನವರ, ಸದಸ್ಯರಾದ ಮಲಕಪ್ಪ ಹಾದರಗೇರಿ, ಎನ್.ಜಿ.ಪಾಟೀಲ, ಬಸಪ್ಪ ಬೆಳಕೇರಿ, ಮಹದೇವಪ್ಪ ಎಲಿ, ರುದ್ರಪ್ಪ ಹೊಸಮನಿ, ಎಸ್.ಬಿ.ಬಣ ಕಾರ, ಎಸ್.ವಿ.ಹಾಲನಗೌಡ್ರ, ರಮೇಶ ಉದ್ಯೋಗಣ್ಣನವರ, ಎಸ್.ಎಂ. ಮುಲ್ಲಾ, ಕಲ್ಲಪ್ಪ ತಳಮನಿ ಹಾಗೂ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.