ADVERTISEMENT

‘ನಮ್ಮ ದಾರಿ ನಮ್ಮ ಹೊಲ’ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 8:29 IST
Last Updated 5 ಡಿಸೆಂಬರ್ 2013, 8:29 IST

ಹಾನಗಲ್‌: ತಾಲ್ಲೂಕಿನ ಹೇರೂರು ಗ್ರಾಮದಲ್ಲಿ  ಎನ್‌.ಆರ್‌.ಇ.ಜಿ ಯೋಜನೆಯ ಅಡಿಯಲ್ಲಿ ನಮ್ಮ ದಾರಿ–ನಮ್ಮ ಹೊಲ ರಸ್ತೆ ಕಾಮಗಾರಿಗೆ ಜಿಪಂ ಸದಸ್ಯ ಮಹದೇವಪ್ಪ ಬಾಗಸರ ಬುಧವಾರ ಭೂಮಿಪೂಜೆ ನೆರವೇರಿಸಿದರು.

ಗ್ರಾಮದಿಂದ ಹೊಲಗಳಿಗೆ ಸಂಪರ್ಕ ಕಲ್ಪಿಸುವ ₨ 5 ಲಕ್ಷ ಅನುದಾನದಲ್ಲಿ ಈ ರಸ್ತೆ ಕಾಮಗಾರಿಗೆ ಚಾಲನೆ ನೀಡ ಲಾಯಿತು. ಹೇರೂರು ಗುಬ್ಬಿ ಅಜ್ಜನಮಠದ ನಂಜುಂಡ ಪಂಡಿತಾ ರಾಧ್ಯ ಶಿವಾಚಾರ್ಯ ಶ್ರೀಗಳು ಸಾನಿಧ್ಯ ವಹಿಸಿದ್ದರು.

ತಿಳವಳ್ಳಿ ಕ್ಷೇತ್ರದ ಜಿಪಂ ಸದಸ್ಯ ಬಸವರಾಜ ಹಾದಿಮನಿ, ತಾಪಂ ಪ್ರತಿಪಕ್ಷ ನಾಯಕ ಮಧು ಪಾಣಿಗಟ್ಟಿ, ಹೇರೂರು ಗ್ರಾಪಂ ಅಧ್ಯಕ್ಷೆ ವಿನೋದಾ ಬಡಿಗೇರ, ಸದಸ್ಯ ಹನುಮಂತಪ್ಪ ಕಳ್ಳಿ, ಗಂಗಮಾಳವ್ವ ತಹಶಿೀಲ್ದಾರ್‌, ನಾಗಪ್ಪ ಹರಿಜನ, ಗಿರಿಜವ್ವ ಹರಿಜನ, ಗುಡ್ಡನಗೌಡ ಪೋಲಿಸಗೌಡ್ರ, ಗ್ರಾಮದ ಶಿವಾನಂದಪ್ಪ ಹಳ್ಳೂರ, ಕೃಷ್ಣಪ್ಪ ಬಡಿಗೇರ, ರವೀಂದ್ರ ಬೆಟಗೇರಿ, ಮಲ್ಲಿಕಾರ್ಜುನ ಕಳ್ಳಿ, ಉಳಿವೆಪ್ಪ ಕಲಾದಗಿ, ನಾಗಪ್ಪ ಮೆಳ್ಳಳ್ಳಿ, ಶೇಖಪ್ಪ ಗಾಣಿಗೇರ ಮತ್ತಿತರರು ಹಾಜರಿದ್ದರು.

ಕಾಮಗಾರಿಗಳಿಗೆ ಚಾಲನೆ: ಎನ್ಆರ್‌ಇಜಿ ಅಡಿಯಲ್ಲಿ ಬುಧವಾರ ತಾಲ್ಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯ ಆಯ್ದ ಗ್ರಾಮಗಳಲ್ಲಿ ಹೊಲಗಳಿಗೆ ಸಂಪರ್ಕದ ನಮ್ಮದಾರಿ–ನಮ್ಮ ಹೊಲ ಮತ್ತು ಕೆರೆಗಳ ಅಭಿವೃದ್ಧಿ ಕಾಮ ಗಾರಿಗಳಿಗೆ ಚಾಲನೆ ನೀಡಲಾಯಿತು.

ಹಾವೇರಿ ಜಿಪಂನ ಮುಖ್ಯ ಲೇಕ್ಕಾಧಿಕಾರಿ ಡಾ.ಶಿವಪುತ್ರ ಬಾಬು ರಾವ್‌ ಮತ್ತು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಬಸವ ರಾಜಪ್ಪ, ಜಿಪಂ ಎಂಜಿನಿಯರ್‌ ಕೆ.ಆರ್‌.ಮಠದ, ಎನ್‌.ಎಂ.ಪಾಟೀಲ, ಯಶೋಧರ, ಪಾಂಡುರಂಗಪ್ಪ ಮೊದಲಾದ ಅಧಿಕಾರಿಗಳು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾಮಗಾರಿಗಳ ಚಾಲನೆಗೆ ಸಹಕಾರ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.