ADVERTISEMENT

ಸವಣೂರ: ನಾಮಪತ್ರದಲ್ಲಿನ 10 ಸೂಚಕರ ಸಹಿ ನಕಲಿ, ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 12:33 IST
Last Updated 6 ಅಕ್ಟೋಬರ್ 2020, 12:33 IST

ಸವಣೂರ: ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ರವಿ ಶಿವಪ್ಪ ಪಡಸಲಗಿ ಎಂಬುವರು ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ್ದು, ಸೂಚಕರಾಗಿ ಸಹಿ ಮಾಡಿರುವ 10 ಮಂದಿಯ ಸಹಿಗಳು ನಕಲಿ ಎಂಬುದು ತನಿಖೆಯಿಂದ ಮಂಗಳವಾರ ಬೆಳಕಿಗೆ ಬಂದಿದೆ.

‘ರವಿ ಪಡಸಲಗಿ ಮೂಲತಃ ಬೆಂಗಳೂರು ಭಾಗದವರಾಗಿದ್ದಾರೆ. ಇವರು ಸೂಚಕರ ಅನುಮತಿ ಪಡೆಯದೇ, ಮತದಾರರ ಪಟ್ಟಿಯಲ್ಲಿರುವ ಸವಣೂರ ತಾಲ್ಲೂಕಿನ 10 ಮತದಾರರ ಹೆಸರು ಹಾಗೂ ಸಹಿಯನ್ನು ದುರ್ಬಳಕೆ ಮಾಡಿಕೊಂಡು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಪರಿಶೀಲನೆ ಸಂದರ್ಭ ಸಂಶಯ ಬಂದ ಕಾರಣ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ ಅವರು ಸವಣೂರಿಗೆ ಭೇಟಿ ನೀಡಿ, ಸೂಚಕರ ಸಹಿ ಇದ್ದ ನಾಲ್ವರನ್ನು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ’ ಎಂದುಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಮಾಹಿತಿ ನೀಡಿದರು.

‘ರವಿ ಪಡಸಲಗಿ ಎಂಬುವರು ನಮಗೆ ಪರಿಚಯವೇ ಇಲ್ಲ. ನಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಎಂದು ಸೂಚಕರಾಗಿ ನಮೂದಾಗಿರುವ ನಾಲ್ವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ’ ಎಂದು ಉಪವಿಭಾಗಾಧಿಕಾರಿ ತಿಳಿಸಿದ್ದಾರೆ.

ADVERTISEMENT

ಈ ಸಂಬಂಧ ಸವಣೂರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.