ADVERTISEMENT

ರಟ್ಟೀಹಳ್ಳಿ | ಕೋಲ್ಡ್ ಸ್ಟೋರೇಜ್ ಕಾಮಗಾರಿ ಪೂರ್ಣಗೊಳಿಸಿ: ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 15:58 IST
Last Updated 2 ಡಿಸೆಂಬರ್ 2023, 15:58 IST
<div class="paragraphs"><p>ರಟ್ಟೀಹಳ್ಳಿ ಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೋಲ್ಡ್ ಸ್ಟೋರೇಜ್ ಕಾಮಗಾರಿಯನ್ನು ಶನಿವಾರ ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ವೀಕ್ಷಣೆ ಮಾಡಿದರು.</p></div>

ರಟ್ಟೀಹಳ್ಳಿ ಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೋಲ್ಡ್ ಸ್ಟೋರೇಜ್ ಕಾಮಗಾರಿಯನ್ನು ಶನಿವಾರ ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ವೀಕ್ಷಣೆ ಮಾಡಿದರು.

   

ರಟ್ಟೀಹಳ್ಳಿ: ಹಿಂದಿನ ಬಿಜೆಪಿ ಸರ್ಕಾರದಲ್ಲಿ ₹ 124.10 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿ 13 ಕೋಲ್ಡ್ ಸ್ಟೋರೇಜ್ ಗಳು ಮಂಜೂರಾಗಿ ಕೆಲಸ ನಡೆಯುತ್ತಿದ್ದು, ಕಾಮಗಾರಿ ಸಂಪೂರ್ಣವಾಗಿ ಮುಗಿಯಲು ಇನ್ನೂ ₹ 43.43 ಕೋಟಿ ಈಗಿನ ಸರ್ಕಾರ ಬಿಡುಗಡೆಗೊಳಿಸಬೇಕು ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಕೃಷಿ ಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಅವರು ರಟ್ಟೀಹಳ್ಳಿ ಪಟ್ಟಣದಲ್ಲಿ ಶನಿವಾರ ತಮ್ಮ ಅಧಿಕಾರವಧಿಯಲ್ಲಿ ಮಂಜೂರಾದ ತಾವರಗಿ ಮಾರ್ಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೋಲ್ಡ್ ಸ್ಟೋರಿಜ್ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದರು.

ADVERTISEMENT

ಕೋಲ್ಡ್ ಸ್ಟೋರೇಜಿಗೆ ಅವಶ್ಯವಾಗಿರುವ ಟಿ.ಸಿ. ಜನರೇಟರ್, ರಸ್ತೆ, ಕಂಪೌಂಡ್‌ ಇವುಗಳ ನಿರ್ಮಾಣ ಅವಶ್ಯವಿದ್ದು, ಸರ್ಕರ ಕೂಡಲೇ ಮಂಜೂರಾತಿ ನೀಡಬೇಕು. ಇಲ್ಲವಾದಲ್ಲಿ ಯೋಜನೆ ಫಲಪ್ರದಗೊಳ್ಳದೆ ರೈತರಿಗೆ ಅನಾನುಕೂಲವಾಗಲಿದೆ ಎಂದರು.

ಮುಖಂಡರಾದ ಆರ್.ಎನ್.ಗಂಗೋಳ, ಗಣೇಶ ವೇರ್ಣೇಕರ, ಶಿವರಾಜ ಗೂಳಪ್ಪನವರ, ಹನುಮಂತಪ್ಪ ಗಾಜೇರ, ಬಸವರಾಜ ಆಡಿನವರ, ದೇವೇಂದ್ರಪ್ಪ ಗುತ್ತಲ, ಲಿಂಗರಾಜ ವಾಲಿ, ಸಿದ್ದು ಹಲಗೇರಿ, ಸುಶೀಲ ನಾಡಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.