ADVERTISEMENT

ಹಾವೇರಿ: ಬುದ್ಧ ಪೂರ್ಣಿಮಾ ಆಚರಣೆ

​ಪ್ರಜಾವಾಣಿ ವಾರ್ತೆ
Published 7 ಮೇ 2020, 15:02 IST
Last Updated 7 ಮೇ 2020, 15:02 IST
ಹಾವೇರಿಯ ಬಸವಕೇಂದ್ರ ಹೊಸಮಠದಲ್ಲಿ ಗುರುವಾರ ಬುದ್ಧ ಜಯಂತಿ ಅಂಗವಾಗಿ ಬಸವಶಾಂತಲಿಂಗ ಸ್ವಾಮೀಜಿ ಅವರು ಬುದ್ಧ ಮತ್ತು ಬಸವ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು 
ಹಾವೇರಿಯ ಬಸವಕೇಂದ್ರ ಹೊಸಮಠದಲ್ಲಿ ಗುರುವಾರ ಬುದ್ಧ ಜಯಂತಿ ಅಂಗವಾಗಿ ಬಸವಶಾಂತಲಿಂಗ ಸ್ವಾಮೀಜಿ ಅವರು ಬುದ್ಧ ಮತ್ತು ಬಸವ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು    

ಹಾವೇರಿ: ಆಸೆಯೇ ದುಃಖಕ್ಕೆ ಮೂಲ ಎಂದು ಜಗತ್ತಿಗೆ ಸಾರಿದ ಭಗವಾನ್ ಬುದ್ಧನ ಜನ್ಮದಿನವನ್ನು ನಗರದ ಬಸವಕೇಂದ್ರ ಹೊಸಮಠದಲ್ಲಿ ಗುರುವಾರ ಬುದ್ಧ- ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು.

ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಗೌತಮ ಬುದ್ಧನು ದೇವರಲ್ಲ, ದೇವದೂತನೂ ಅಲ್ಲ. ದೈವಸಂಭೂತನು ಅಲ್ಲ. ಆದರೆ ತನ್ನ ಸ್ವಸಾಮರ್ಥ್ಯದಿಂದ ಅತ್ಯುನ್ನತ ಜ್ಞಾನ ಪಡೆದು ಜಗತ್ತಿನ ಪರಮ ಸತ್ಯವನ್ನು ಬೋಧಿಸಿದ ಮಹಾಗುರು ಎಂದು ಬಣ್ಣಿಸಿದರು. ಜಯದೇವ ಕೆ. ವಕೀಲರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT