ADVERTISEMENT

ಭೂದಾನಿಗಳಿಗೆ ಸರ್ಕಾರಿ ಜಾಗೆ ಮಂಜೂರು

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 15:50 IST
Last Updated 18 ಜೂನ್ 2025, 15:50 IST

ಬ್ಯಾಡಗಿ: ತಾಲ್ಲೂಕಿನ ಹಿರೇಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಎರಡು ಎಕರೆ ಭೂಮಿಯನ್ನು ದಾನ ಮಾಡಿದ ಭೂದಾನಿಗಳಿಗೆ ಶಾಸಕ ಬಸವರಾಜ ಶಿವಣ್ಣನವರ 9.20 ಎಕರೆ ಸರ್ಕಾರಿ ಭೂಮಿಯ ಹಕ್ಕುಪತ್ರಗಳನ್ನು ಬುಧವಾರ ವಿತರಿಸಿದರು.

ಊರ ಪಕ್ಕದಲ್ಲಿದ್ದ ಎರಡು ಎಕರೆ ಜಮೀನನ್ನು ವೀರಯ್ಯ ಲೋಣಿಮಠ ಶಾಲೆಗೆ ದಾನವಾಗಿ ನೀಡಿದ್ದರು. ಆ ಜಾಗೆಯಲ್ಲಿ ಶಾಲಾ ಕಟ್ಟಡವನ್ನೂ ಸಹ ನಿರ್ಮಿಸಲಾಗಿತ್ತು. ಆದರೆ ವೀರಯ್ಯ ಅವರ ಪತ್ನಿ ಈರಮ್ಮ ಲೋಣಿಮಠ, ಪುತ್ರರಾದ ಸಿದ್ಧಲಿಂಗಯ್ಯ ಮತ್ತು ಕುಮಾರಸ್ವಾಮಿ ಅವರು ಈಚೆಗೆ ನೋಂದಣಿ ಮಾಡಿಸಿಕೊಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಸರ್ಕಾರಿ ಭೂಮಿಯ ಹಕ್ಕುಪತ್ರಗಳನ್ನು ವಿತರಿಸುವ ಮೂಲಕ ಕಳೆದ 20 ವರ್ಷಗಳಿಂದ ಉಂಟಾಗಿದ್ದ ಸಮಸ್ಯೆಗೆ ಪರಿಹಾರ ಒದಗಿಸಿದ್ದಾರೆ. ಈಚೆಗೆ ತಹಶೀಲ್ದಾರ ಕಚೇರಿಯಲ್ಲಿ 9.20 ಎಕರೆ ಸರ್ಕಾರಿ ಭೂಮಿಯಲ್ಲಿ ಮೂವರಿಗೂ ಭಾಗ ಮಾಡಿದ ಹಕ್ಕು ಪತ್ರಗಳನ್ನು ವಿತರಿಸಿದರು.

ADVERTISEMENT

ಈ ವೇಳೆ ತಹಶೀಲ್ದಾರ್ ಫಿರೋಜಷಾ ಸೋಮನಕಟ್ಟಿ, ಮುಖಂಡರಾದ ರುದ್ರಣ್ಣ ಹೊಂಕಣ, ಮಾರುತಿ ಅಚ್ಚಿಗೇರಿ, ಚಿನ್ನಮ್ಮ ಎಮ್ಮೆರ, ಶಿವನಗೌಡ ಪಾಟೀಲ, ಬಿ.ಎಂ.ಗೌರಾಪುರ, ಕೆ.ಸಿ.ಮಠದ, ಮಲ್ಲನಗೌಡ ಘಂಟಿಗೌಡ, ಎನ್.ಎಫ್.ಹರಿಜನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.