
ಬ್ಯಾಡಗಿ ಮೆಣಸಿನಕಾಯಿ
ಬ್ಯಾಡಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಜ.1ರಂದು (ಗುರುವಾರ) 48,555 ಚೀಲ (12,138 ಕ್ವಿಂಟಲ್) ಮೆಣಸಿನಕಾಯಿ ಮಾರಾಟವಾಗಿದ್ದು, ಆವಕದಲ್ಲಿ ಇಳಿಕೆ ಕಂಡು ಬಂದಿದೆ, ಆದರೆ ಮೆಣಸಿನಕಾಯಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.
ಕಳೆದ ಡಿ.29ರಂದು ಮಾರುಕಟ್ಟೆಯಲ್ಲಿ 80,939 ಚೀಲ (20,234 ಕ್ವಿಂಟಲ್) ಮೆಣಸಿನಕಾಯಿ ಮಾರಾಟವಾಗಿದ್ದವು. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮೆಣಸಿನಕಾಯಿ ಅವಕದಲ್ಲಿ ಇಳಿಕೆಯಾಗಿದೆ ಎನ್ನಲಾಗಿದೆ.
ಮುಂದಿನ ಸೋಮವಾರದಿಂದ ಆವಕದಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ. ಬಳ್ಳಾರಿ, ರಾಯಚೂರು ಹಾಗೂ ಇನ್ನಿತರ ಭಾಗದಲ್ಲಿ ಬೆಳೆದ ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, 5531 ತಳಿ ಮೆಣಸಿನಕಾಯಿ ಹೆಚ್ಚು ಮಾರಾಟವಾಗಿದೆ. ಬ್ಯಾಡಗಿ ಮೂಲ ತಳಿ (ಲೋಕಲ್) ಮೆಣಸಿನಕಾಯಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ 9 ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹68,119ರಂತೆ, 7 ಚೀಲ ಕಡ್ಡಿ ಮೆಣಸಿನಕಾಯಿ ₹60,021 ರಂತೆ ಹಾಗೂ ಗುಂಟೂರ ತಳಿ ₹16,729 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿವೆ.
ಗುರುವಾರ ಮಾರುಕಟ್ಟೆಗೆ ಒಟ್ಟು 7,129 ಲಾಟ್ ಮೆಣಸಿನಕಾಯಿ ಟೆಂಡರ್‌ಗೆ ಇಡಲಾಗಿದ್ದು, ಈ ಪೈಕಿ ತೇವಾಂಶ ಹೆಚ್ಚಿರುವ ಮತ್ತು ಗುಣಮಟ್ಟದ ಕೊರತೆ ಇರುವ 285 ಲಾಟ್‌ಗಳಿಗೆ ವರ್ತಕರು ಟೆಂಡರ್ ನಮೂದಿಸಿಲ್ಲ. ಸರಾಸರಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.
ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹38,509, ಬ್ಯಾಡಗಿ ಕಡ್ಡಿ ₹36,009 ಹಾಗೂ ಗುಂಟೂರ ತಳಿ ₹13,109ರಂತೆ ಮಾರಾಟವಾಗಿವೆ. ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 339 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.
ಗುರುವಾರದ ಮಾರುಕಟ್ಟೆ ದರ (ಪ್ರತಿ ಕ್ವಿಂಟಲ್‌ಗೆ) ಕನಿಷ್ಠ– ಗರಿಷ್ಠ
ಬ್ಯಾಡಗಿ ಕಡ್ಡಿ ₹4,189- ₹60,021
ಬ್ಯಾಡಗಿ ಡಬ್ಬಿ ₹4,629- ₹68,119
ಗುಂಟೂರ ತಳಿ ₹1,469- ₹16,729
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.