ADVERTISEMENT

ಬ್ಯಾಡಗಿ ಮೆಣಸಿನಕಾಯಿ: ಆವಕ ತುಸು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 29 ಮೇ 2023, 15:53 IST
Last Updated 29 ಮೇ 2023, 15:53 IST
   

ಬ್ಯಾಡಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ 5,824 ಕ್ವಿಂಟಲ್ ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ತುಸು ಹೆಚ್ಚಳವಾಗಿದೆ.

ಕಳೆದ ಗುರುವಾರ ಮಾರುಕಟ್ಟೆಗೆ 4,896 ಕ್ವಿಂಟಲ್ ಮೆಣಸಿನಕಾಯಿ ಆವಕವಾಗಿತ್ತು. ಮಳೆಗಾಲ ಆರಂಭವಾಗಿದ್ದು ರೈತರು ಬಿತ್ತನೆಗೆ ಹೊಲಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ ಎನ್ನಲಾಗಿದೆ. ಸೋಮವಾರ ತೇವಾಂಶ ಹೆಚ್ಚಿರುವ ಹಾಗೂ ಕನಿಷ್ಠ ಗುಣಮಟ್ಟ ಹೊಂದಿರದ 219 ಲಾಟ್‌ಗಳಿಗೆ ಟೆಂಡರ್ ನಮೂದಿಸಿಲ್ಲ.

ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹60,021ರಂತೆ ಗರಿಷ್ಠ ಬೆಲೆಗೆ ಮಾರಾಟವಾಗಿದ್ದು, ಕಳೆದ ಸೋಮವಾರಕ್ಕಿಂತ ₹2 ಸಾವಿರ ಇಳಿಕೆಯಾಗಿದೆ. ಬ್ಯಾಡಗಿ ಕಡ್ಡಿ ತಳಿ ₹45,699ರಂತೆ, ಗುಂಟೂರ ತಳಿ ₹18,299ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿವೆ. ಸರಾಸರಿ ಬೆಲೆಯಲ್ಲಿ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹38,729, ಕಡ್ಡಿ ಮೆಣಸಿನಕಾಯಿ ₹28,609 ಹಾಗೂ ಗುಂಟೂರು ತಳಿ ₹14,829ರಂತೆ ಮಾರಾಟವಾಗಿದ್ದು ಸ್ಥಿರತೆಯನ್ನು ಕಾಯ್ದುಕೊಂಡಿವೆ. ಇಂದಿನ ಟೆಂಡರ್‌ ಪ್ರಕ್ರಿಯೆಯಲ್ಲಿ ಒಟ್ಟು 191 ಖರೀದಿ ವರ್ತಕರು ಪಾಲ್ಗೊಂಡಿದ್ದು, ಒಟ್ಟಾರೆ 26 ಸಾವಿರ ಬಾರಿ ದರವನ್ನು ಕೋಟ್‌ ಮಾಡಿದ್ದಾರೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ADVERTISEMENT

ಸೋಮವಾರದ ದರ ಪ್ರತಿ ಕ್ವಿಂಟಲ್‌ಗೆ
ಕನಿಷ್ಠ;ಗರಿಷ್ಠ
ಬ್ಯಾಡಗಿ ಡಬ್ಬಿ; ₹2,259-₹45,699
ಬ್ಯಾಡಗಿ ಕಡ್ಡಿ;₹3,609-₹60,021
ಗುಂಟೂರು ತಳಿ;₹1,499-₹18,299

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.