ಬ್ಯಾಡಗಿ: ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಜ. 24ರಂದು ನಡೆಯಲಿರುವ 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯೋಜನೆಗೊಂಡಿರುವ ಮುಖ್ಯಶಿಕ್ಷಕ, ಸಾಹಿತಿ ಜೀವರಾಜ ಛತ್ರದ ಅವರಿಗೆ ಕಸಾಪ ವತಿಯಿಂದ ಆಹ್ವಾನ ನೀಡಲಾಯಿತು.
ವಿದ್ಯಾನಗರದ ಅವರ ನಿವಾಸಕ್ಕೆ ಮಂಗಳವಾರ ತೆರಳಿದ ಕಸಾಪ ಪದಾಧಿಕಾರಿಗಳು, ಅವರನ್ನು ಸನ್ಮಾನಿಸಿ ಅಧಿಕೃತ ಆಹ್ವಾನ ನೀಡಿದರು.
ಈ ವೇಳೆ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಂ.ಜಗಾಪುರ, ನಿಕಟಪೂರ್ವ ಅಧ್ಯಕ್ಷ ಮಾಲತೇಶ ಅರಳಿಮಟ್ಟಿ, ಗೌರವ ಕಾರ್ಯದರ್ಶಿ ಎಸ್.ಬಿ.ಇಮ್ಮಡಿ, ಖಜಾಂಚಿ ವೀರೇಂದ್ರ ಶೆಟ್ಟರ, ಸಂಘಟನಾ ಕಾರ್ಯದರ್ಶಿ ಗಿರೀಶ ಇಂಡಿಮಠ, ಪ್ರಾಚಾರ್ಯ ಆನಂದ ಮುದುಕಮ್ಮನವರ, ರಾಜಶೇಖರ ಹೊಸಳ್ಳಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಾಲತೇಶ ಕಂಬಳಿ, ಪ್ರಭಾಕರ ಶಿಗ್ಲಿ, ಮಂಜುನಾಥ ಉಪ್ಪಾರ, ಆರ್.ಐ.ತಳಗೇರಿ, ಎಚ್.ಕೆ.ಕನ್ನಮ್ಮನವರ, ಮಂಜುನಾಥ ಶಿರವಾಡಕರ, ಮಹಾದೇವಪ್ಪ ಕೆಂಚನಗೌಡ್ರ. ಶಕುಂತಲಾ ದಾಳೇರ, ಸಂಧ್ಯಾರಾಣಿ ದೇಶಪಾಂಡೆ, ಜಿತೇಂದ್ರ ಸುಣಗಾರ, ಮಲ್ಲಿಕಾರ್ಜುನ ಪ್ಯಾಟಿ, ಬಿ.ಎನ್.ಹೊಸಗೌಡ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.