ADVERTISEMENT

ಬ್ಯಾಡಗಿ: ಡಬ್ಬಿ ಮೆಣಸಿನಕಾಯಿ ಗರಿಷ್ಠ ದರ ಸ್ಥಿರ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 14:22 IST
Last Updated 13 ಫೆಬ್ರುವರಿ 2025, 14:22 IST
<div class="paragraphs"><p>&nbsp; ಸಾಂದರ್ಭಿಕ ಚಿತ್ರ</p></div>

  ಸಾಂದರ್ಭಿಕ ಚಿತ್ರ

   

ಬ್ಯಾಡಗಿ: ಇಲ್ಲಿಯ ಮಾರುಕಟ್ಟೆಗೆ ಗುರುವಾರ 1,70,359 ಚೀಲ (42,589 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿತ್ತ, ಆವಕದಲ್ಲಿ ತುಸು ಇಳಿಕೆಯಾಗಿದೆ. ಡಬ್ಬಿ ಮೆಣಸಿನಕಾಯಿ ಗರಿಷ್ಠ ಬೆಲೆಯಲ್ಲಿ ಸ್ಥಿರತೆ ಮುಂದುವರಿದಿದೆ.

ಪ್ರಸಕ್ತ ಸಾಲಿನ ಹಂಗಾಮಿನಲ್ಲಿ 6ನೇ ಬಾರಿಗೆ ಒಂದೂವರೆ ಲಕ್ಷಕ್ಕಿಂತ ಹೆಚ್ಚು ಚೀಲ ಮೆಣಸಿನಕಾಯಿ ಮಾರಾಟವಾಗಿವೆ. ಕಳೆದ ಸೋಮವಾರ ಮಾರುಕಟ್ಟೆಗೆ 1,78,874 ಚೀಲ (44,718 ಕ್ವಿಂಟಲ್‌) ಮೆಣಸಿನಕಾಯಿ ಆವಕವಾಗಿತ್ತು. ಗುರುವಾರ ಮಾರುಕಟ್ಟೆಗೆ ಒಟ್ಟು 15,347 ಲಾಟ್‌ ಮೆಣಸಿನಕಾಯಿ ಚೀಲಗಳನ್ನು ಟೆಂಡರ್‌ಗೆ ಇಡಲಾಗಿದ್ದು, ಈ ಪೈಕಿ ತೇವಾಂಶ ಹೆಚ್ಚಿರುವ ಹಾಗೂ ಗುಣಮಟ್ಟದ ಕೊರತೆ ಇರುವ 525 ಲಾಟ್‌ಗಳಿಗೆ ವರ್ತಕರು ಟೆಂಡರ್ ನಮೂದಿಸಿಲ್ಲ.

ADVERTISEMENT

5 ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹ 37,999ರಂತೆ, 11 ಚೀಲ ಕಡ್ಡಿ ಮೆಣಸಿನಕಾಯಿ ₹33,009ರಂತೆ ಹಾಗೂ ಗುಂಟೂರು ತಳಿ ಮೆಣಸಿನಕಾಯಿ ₹16,329ರಂತೆ ಗರಿಷ್ಠ ಬೆಲೆಗೆಲಿ ಮಾರಾಟವಾದವು. ಸರಾಸರಿ ಬೆಲೆಯಲ್ಲಿ ಬ್ಯಾಡಗಿ ಡಬ್ಬಿ ₹29,809, ಬ್ಯಾಡಗಿ ಕಡ್ಡಿ ₹28,500 ಹಾಗೂ ಗುಂಟೂರು ತಳಿ ₹14,509ರಂತೆ ಮಾರಾಟವಾಗಿವೆ.

ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ 398 ವರ್ತಕರು ಪಾಲ್ಗೊಂಡಿದ್ದು, ಅವರು ಒಟ್ಟಾರೆ 1.21 ಲಕ್ಷ ಬಾರಿ ದರವನ್ನು ಕೋಟ್‌ ಮಾಡಿದ್ದಾರೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.