ADVERTISEMENT

‘ಪೌರಕಾರ್ಮಿಕರ ಶ್ರಮ ಶ್ಲಾಘನೀಯ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 9:01 IST
Last Updated 17 ಸೆಪ್ಟೆಂಬರ್ 2020, 9:01 IST
ಶಿಗ್ಗಾವಿ ಪಟ್ಟಣದಲ್ಲಿ ಮಂಗಳವಾರ ಜೆಸಿಐ ಸಂಸ್ಥೆ ಸಮಾರಂಭದಲ್ಲಿ ಕೊರೊನಾ ವಾರಿಯರ್ಸ್ ಪುರಸಭೆ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು
ಶಿಗ್ಗಾವಿ ಪಟ್ಟಣದಲ್ಲಿ ಮಂಗಳವಾರ ಜೆಸಿಐ ಸಂಸ್ಥೆ ಸಮಾರಂಭದಲ್ಲಿ ಕೊರೊನಾ ವಾರಿಯರ್ಸ್ ಪುರಸಭೆ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು   

ಶಿಗ್ಗಾವಿ: ‘ಜನರ ಆರೋಗ್ಯಕ್ಕಾಗಿ ನಿತ್ಯ ಶ್ರಮಿಸುವ ಪೌರಕಾರ್ಮಿಕರನ್ನು ಎಲ್ಲರೂ ಪ್ರೋತ್ಸಾಹಿಸಬೇಕು. ಕೊರೊನಾ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ದುಡಿದಿರುವ ಅವರ ಕೆಲಸ ಶ್ಲಾಘನೀಯ’ ಎಂದು ಜೆಸಿಐ ಸಂಸ್ಥೆ ಅಧ್ಯಕ್ಷ ಗುರುರಾಜ ಹುಚ್ಚಣ್ಣವರ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಜೆಸಿಐ ಸಂಸ್ಥೆ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಕೊರೊನಾ ವಾರಿಯರ್ಸ್‌ಗಳಾದ ಪುರಸಭೆಯ 40 ಪೌರಕಾರ್ಮಿಕರನ್ನು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಿ ಅವರು ಮಾತನಾಡಿದರು.

ಜೆಸಿಐ ಸಂಸ್ಥೆ ನಿರ್ದೇಶಕರಾದ ಡಾ.ಕುಮಾರಗೌಡ ಪಾಟೀಲ, ಶರೀಫ್ ಜಂಗ್ಲೆಪ್ಪನವರ, ಡಿ.ಆರ್.ತೋಟಿಗೇರ, ಬಿ.ಎಸ್. ಬಸರೀಕಟ್ಟಿ, ಸುರೇಶಗೌಡ ಪಾಟೀಲ, ಚನ್ನಪ್ಪ ಕೆ.ಬಿ, ಕೆ.ಎಸ್. ದಳವಾಯಿ, ಪುರಸಭೆ ಅಧಿಕಾರಿ ಶೈಲಜಾ ಪಾಟೀಲ, ಪುರಸಭೆ ಸದಸ್ಯ ಗೌಸಖಾನ್ ಮುನಸಿ, ಮಾಹಾಂತೇಶ ಮೋಟೆಬೆನ್ನೂರ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.