ADVERTISEMENT

ಆರೋಗ್ಯಕ್ಕಾಗಿ ಸ್ವಚ್ಚತಾ ಕಾರ್ಯ ಅವಶ್ಯ: ಶಾಸಕ ಪಠಾಣ

ಬಂಕಾಪುರ: ಸ್ವಚ್ಚತಾ ಅಭಿಮಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 14:36 IST
Last Updated 27 ಏಪ್ರಿಲ್ 2025, 14:36 IST
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಸ್ವಚ್ಚತಾ ಅಭಿಮಾನಕ್ಕೆ ಶಾಸಕ ಯಾಸೀರ ಅಹ್ಮದಖಾನ್ ಪಠಾಣ ಶನಿವಾರ ಚಾಲನೆ ನೀಡಿ ಸಾರ್ವಜನಿಕರಿಂದ ಮಾಹಿತಿ ಪಡೆದರು
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಸ್ವಚ್ಚತಾ ಅಭಿಮಾನಕ್ಕೆ ಶಾಸಕ ಯಾಸೀರ ಅಹ್ಮದಖಾನ್ ಪಠಾಣ ಶನಿವಾರ ಚಾಲನೆ ನೀಡಿ ಸಾರ್ವಜನಿಕರಿಂದ ಮಾಹಿತಿ ಪಡೆದರು   


ಶಿಗ್ಗಾವಿ: ಪಟ್ಟಣದ ಜನರ ಆರೋಗ್ಯದ ಹಿತ ದೃಷ್ಟಿಯಿಂದ ಸ್ವಚ್ಚತಾ ಕಾರ್ಯ ಕೈಗೊಳ್ಳುವುದು ಮುಖ್ಯವಾಗಿದೆ. ಪ್ರತಿಯೊಂದು ಓಣಿಗಳಲ್ಲಿನ ಚರಂಡಿಗಳ ಸ್ವಚ್ಚತೆಯಾಗಬೇಕು. ಅಲ್ಲದೆ ಮೂಲ ಸೌಕರ್ಯಗಳನ್ನು ನೀಡಲು ಬದ್ದರಾಗಿದ್ದೇವೆ ಶಾಸಕ ಯಾಸೀರ ಅಹ್ಮದಖಾನ್ ಪಠಾಣ ಹೇಳಿದರು.

ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಶನಿವಾರ ಸ್ವಚ್ಚತಾ ಅಭಿಮಾನಕ್ಕೆ ಚಾಲನೆ ನೀಡಿದ ನಂತರ ಅವರು ಕೆಲವು ವಾರ್ಡಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಟ್ಟಣದ ಕೆಲವು ಓಣಿಗಳು ಸ್ವಚ್ಚವಾಗಿವೆ. ಇನ್ನೂ ಕೆಲವು ಬಡವರು ವಾಸಿಸುವ ಓಣಿಗಳಲ್ಲಿ ಚರಂಡಿಗಳು ಕೊಳಚೆ ನೀರು ಮುಂದೆ ಸಾಗುತ್ತಿಲ್ಲ, ಕಸದ ರಾಶಿ ತುಂಬಿ ಗಬ್ಬು ವಾಸನೆ ಹರಡಿದೆ. ಅದರಲ್ಲಿಯೇ ಬಡಜನತೆ ವಾಸವಾಗಿದ್ದಾರೆ. ಅದರಲ್ಲಿ ತಾರತಮ್ಯತೆ ಬೇಡ ಪ್ರತಿ ಓಣಿಗಳಲ್ಲಿ ಚರಂಡಿಗಳು ಸ್ವಚ್ಚವಾಗಬೇಕು. ಅಧಿಕಾರಿಗಳು ನಿಂತು ಸ್ವಚ್ಚತೆ ಮಾಡಿಸಬೇಕು ಎಂದರು.

ADVERTISEMENT

ಪಟ್ಟಣದ ಜನಬೀಡು ಪ್ರದೇಶದಲ್ಲಿರುವ ವಿದ್ಯುತ್ ಕಂಬದಲ್ಲಿನ ಟಿ.ಸಿಗಳನ್ನು ತಕ್ಷಣ ಸ್ಥಳಾಂತರಿಸಬೇಕು. ಜನರ ಪ್ರಾಣಕ್ಕೆ ಕುತ್ತು ತರುವ ಟಿ.ಸಿ.ಗಳನ್ನು ಬೇರಡೆ ಹಾಕಬೇಕು. ಜನರ ಸಂರಕ್ಷಣೆ ಬಹಳ ಮುಖ್ಯವಾಗಿದೆ. ಹೆಸ್ಕಾಂ ಅಧಿಕಾರಿಗಳು ಇಂತಹವುಗಳನ್ನು ಗಮನಿಸಬೇಕು. ಜನರಿಗೆ ತೊಂದರೆಯಾಗಬಾರದು. ತಾಲ್ಲೂಕಿನ ಎಲ್ಲ ಗ್ರಾಮದಲ್ಲಿನ ವಿದ್ಯುತ್ ಟಿ.ಸಿ.ಗಳನ್ನು ಪರಿಶೀಲನೆ ನಡೆಸಿ ಸ್ಥಾಳಾಂತರಿಸುವ ಕಾರ್ಯ ಕೈಗೊಳ್ಳಬೇಕು. ಈ ಕುರಿತು ಕ್ರಿಯಾ ಯೋಜನೆ ಸಿದ್ದಪಡಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಪೌರಕಾರ್ಮಿಕರಿಗೆ ಸನ್ಮಾನ: ಪಟ್ಟಣದ ಸ್ವಚ್ಚತೆಯಲ್ಲಿ ಶ್ರಮವಹಿಸಿ ಕೆಲಸ ಮಾಡುತ್ತಿರುವ ರವಿ ಮಾದರ, ಶಿವು ಕಟ್ಟಿಮನಿ, ಶೇಖಪ್ಪ ಮಾದರ, ನಿಂಬಣ್ಣ ಮಾದರ, ನಾಗಪ್ಪ ಮಾದರ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಅಜ್ಜನವರ ಸೇರಿದಂತೆ ಹಲವು ಪೌರಕಾಮರ್ಿಕರನ್ನು ಸನ್ಮಾನಿಸಿ ಗೌರವಿಸಿದರು.

ಪುರಸಭೆ ಅಧ್ಯಕ್ಷೆ ಮಮತಾ ಮಾಗಿ, ಉಪಾಧ್ಯಕ್ಷ ಆಂಜನೇಯ ಗುಡಿಗೇರಿ ಸೇರಿದಂತೆ ಎಲ್ಲ ಸದಸ್ಯರು, ಪುರಸಭೆ ಸಿಬ್ಬಂದಿ, ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.