ADVERTISEMENT

ಹಾವೇರಿಯಲ್ಲಿ ಒಂದೇ ದಿನ 15 ಮಂದಿಗೆ ಕೋವಿಡ್‌

ವೈದ್ಯೆ, ಶಿಕ್ಷಕ, ವಕೀಲ, ಪೊಲೀಸ್‌ಗೆ ಸೋಂಕು: ಜಿಲ್ಲೆಯಲ್ಲಿ 166ಕ್ಕೆ ಏರಿದ ಪ್ರಕರಣಗಳು

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 15:35 IST
Last Updated 5 ಜುಲೈ 2020, 15:35 IST

ಹಾವೇರಿ: ಜಿಲ್ಲೆಯಲ್ಲಿ ಮೂವರು ಆಶಾ ಕಾರ್ಯಕರ್ತೆಯರು, ಶಿಕ್ಷಕ, ವಕೀಲ, ವೈದ್ಯ, ಪೊಲೀಸ್, ಚಾಲಕ ಸೇರಿದಂತೆ ಭಾನುವಾರ 15 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಹಾವೇರಿ ತಾಲ್ಲೂಕಿನ ಐವರಿಗೆ, ಹಾನಗಲ್ ತಾಲ್ಲೂಕಿನ ಐವರಿಗೆ, ಶಿಗ್ಗಾವಿ ತಾಲ್ಲೂಕಿನ ಮೂವರಿಗೆ ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಈವರೆಗೆ ಜಿಲ್ಲೆಯಲ್ಲಿ 166 ಪಾಸಿಟಿವ್ ಪ್ರಕರಣ ದೃಢಗೊಂಡಿವೆ. ಈ ಪೈಕಿ 37 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಎರಡು ಜನರು ಮೃತಪಟ್ಟಿದ್ದು, 127 ಪ್ರಕರಣಗಳು ಸಕ್ರಿಯವಾಗಿವೆ ಎಂದು ತಿಳಿಸಿದ್ದಾರೆ.

ರಟ್ಟಿಹಳ್ಳಿ ತಾಲ್ಲೂಕು ತಿಪ್ಪಾಯಿಕೊಪ್ಪದ 28 ವರ್ಷದ ವಾಹನ ಚಾಲಕ (ಪಿ-152), ಶಿಗ್ಗಾವಿಯ ಜಯನಗರದ 54 ವರ್ಷದ ಪುರುಷ (ಪಿ-153), ಹಳೆಪೇಟೆಯ 35 ವರ್ಷದ ಪುರುಷ (ಪಿ-154), ಅರಳೇಶ್ವರದ 26 ವರ್ಷದ ಯುವತಿ (ಪಿ-155), ಹಾನಗಲ್ ತಾಲೂಕಿ ತಿಳವಳ್ಳಿಯ 39 ವರ್ಷದ ಮಹಿಳೆ (ಪಿ-156), 40 ವರ್ಷದ ಮಹಿಳೆ (ಪಿ-157), 39 ವರ್ಷದ ಮಹಿಳೆ (ಪಿ-158), ಹಾನಗಲ್‍ನ ಹೊಸಪೇಟೆ ಓಣಿಯ 38 ವರ್ಷದ ಕೃಷಿಕ ( ಪಿ-159), ಹಾವೇರಿ ಅಶ್ವಿನಿನಗರದ 39 ವರ್ಷದ ಶಿಕ್ಷಕ (ಪಿ-160), ಹಾವೇರಿ ಬಸವೇಶ್ವರನಗರದ ನಿವಾಸಿ ಉತ್ತರ ಪ್ರದೇಶ ಮೂಲದ 33 ವರ್ಷದ ಪೇಂಟರ್ (ಪಿ-161)ಗೆ ಸೋಂಕು ದೃಢಗೊಂಡಿದೆ.

ADVERTISEMENT

ಹಾವೇರಿ ತಾಲ್ಲೂಕು ಕರ್ಜಗಿಯ 20 ವರ್ಷದ ಬಾಣಂತಿ (ಪಿ-162), ಹಾನಗಲ್ ನಗರದ 27 ವರ್ಷದ ವಕೀಲ (ಪಿ-163), ಹಾವೇರಿ ತಾಲ್ಲೂಕಿನ ಕನವಳ್ಳಿಯ 30 ವರ್ಷದ ವೈದ್ಯೆ (ಪಿ-164), ಬೆಂಗಳೂರಿನಿಂದ ಸ್ವ ಗ್ರಾಮಕ್ಕೆ ಬಂದಿದ್ದ ಹಿರೇಕೆರೂರಿನ ಪರ್ವತಸಿದ್ಧಗೇರಿಯ 29 ವರ್ಷದ ಯುವಕ (ಪಿ-165), ಹಾವೇರಿ ನಗರದ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಕಂಠಪ್ಪ ಬಡಾವಣೆ ನಿವಾಸಿ 59 ವರ್ಷದ ಪುರುಷ (ಪಿ-166) ಸೋಂಕು ದೃಢಗೊಂಡಿದೆ. ಸದರಿ ಸೋಂಕಿತರನ್ನು ನಿಗದಿತ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಸದರಿ ಸೋಂಕಿತರ ನಿವಾಸದ 100 ಮೀ. ಪ್ರದೇಶವನ್ನು ಕಂಟೈನ್‍ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದೆ. ನಗರದ ಪ್ರದೇಶದಲ್ಲಿ ವಾಸಿಸುವ ಸೋಂಕಿತರ ನಿವಾಸದ 200 ಮೀಟರ್ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶವಾದ ತಿಪ್ಪಾಯಿಕೊಪ್ಪ, ತಿಳವಳ್ಳಿ, ಕರ್ಜಗಿ, ಕನವಳ್ಳಿ, ಪರ್ವತಸಿದ್ಧಗೇರಿ ಗ್ರಾಮಗಳನ್ನು ಸಂಪೂರ್ಣವಾಗಿ ‘ಬಫರ್ ಜೋನ್’ ಆಗಿ ಪರಿಗಣಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.