ಹಾವೇರಿ: ಆರೋಗ್ಯ ಇಲಾಖೆ ನೌಕರರು ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ 77 ಮಂದಿಗೆ ಕೋವಿಡ್ ದೃಢಪಟ್ಟಿದ್ದು, 41 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.
ತಾಲ್ಲೂಕುವಾರು ವಿವರ:
ಬ್ಯಾಡಗಿ–2, ಹಾನಗಲ್–9, ಹಾವೇರಿ–22, ಹಿರೇಕೆರೂರು–7, ರಾಣಬೆನ್ನೂರು–31, ಸವಣೂರು ತಾಲ್ಲೂಕಿನ 6 ಮಂದಿಗೆ ಕೋವಿಡ್ ದೃಢಪಟ್ಟಿದೆ.
ಬ್ಯಾಡಗಿ– 9, ಹಾನಗಲ್–4, ಹಾವೇರಿ–7, ರಾಣೆಬೆನ್ನೂರು–19 ಹಾಗೂ ಸವಣೂರು ತಾಲ್ಲೂಕಿನ 2 ಮಂದಿ ಮಂಗಳವಾರ ಬಿಡುಗಡೆಯಾಗಿದ್ದಾರೆ.
ಮರಣದ ವಿವರ:
ಹಾನಗಲ್ ತಾಲ್ಲೂಕಿನ ಕೂಡಲ ಗ್ರಾಮದ 90 ವರ್ಷದ ಪುರುಷ ಮತ್ತು ಸುರಳೇಶ್ವರ ಗ್ರಾಮದ 69 ವರ್ಷದ ಮಹಿಳೆಗೆ ಕೋವಿಡ್ ದೃಢಪಟ್ಟಿದ್ದು, ಇವರ ಮರಣವನ್ನು ಮಂಗಳವಾರ ದೃಢೀಕರಿಸಲಾಗಿದೆ.
***
ಕೋವಿಡ್ ಅಂಕಿಅಂಶ
ಜಿಲ್ಲೆಯಲ್ಲಿ ಒಟ್ಟು:8691
ಸಕ್ರಿಯ ಪ್ರಕರಣ:1314
ಗುಣಮುಖ:7213
ಸಾವು:164
***
ಈ ದಿನದ ಏರಿಕೆ
ಹೊಸ ಪ್ರಕರಣ:77
ಗುಣಮುಖ:41
ಸಾವು:2
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.