ADVERTISEMENT

ಪ್ರತಿಭೆ ಅನಾವರಣಕ್ಕೆ ಸ್ಪರ್ಧೆ ಸಹಕಾರಿ: ಮಹೇಶ ಅಕ್ಕಿವಳ್ಳಿ

ದೈಹಿಕ ಶಿಕ್ಷಣ ನಿರ್ದೇಶಕ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 16 ಮೇ 2025, 14:30 IST
Last Updated 16 ಮೇ 2025, 14:30 IST
ತಿಳವಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಸ್ಪರ್ಧೆಗಳನ್ನು ತಿಳವಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಮಹೇಶ ಅಕ್ಕಿವಳ್ಳಿ ಉದ್ಘಾಟಿಸಿದರು
ತಿಳವಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಸ್ಪರ್ಧೆಗಳನ್ನು ತಿಳವಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಮಹೇಶ ಅಕ್ಕಿವಳ್ಳಿ ಉದ್ಘಾಟಿಸಿದರು   

ತಿಳವಳ್ಳಿ: ‘ಕಾಲೇಜು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಸ್ಪರ್ಧೆ ಸಹಕಾರಿ ಆಗಲಿವೆ’ ಎಂದು ತಿಳವಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಮಹೇಶ ಅಕ್ಕಿವಳ್ಳಿ ಹೇಳಿದರು.

ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.

‘ಇಂದು ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾರ್ಜನೆಗಾಗಿ ಕಾಲೇಜುಗಳಿಗೆ ಸೇರುತ್ತಿರುವುದು ಸಂತಸದ ಸಂಗತಿ. ಹೀಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳನ್ನು ಅಧ್ಯಯನ ಮಾಡಿದರೆ ತಮ್ಮಲ್ಲಿರುವ ಪ್ರತಿಭೆ ಹೊರಬರುವುದಿಲ್ಲ. ಬದಲಾಗಿ ಪಠ್ಯೇತರ ಚಟುವಟುಕೆಗಳಾದ ಕ್ರೀಡೆ, ಭಾವಗೀತೆ, ಜಾನಪದ ಗೀತೆ, ಸಂಗೀತ, ಕಲೆ, ನಾಟಕ ಹಾಗೂ ಮಿಮಿಕ್ರಿ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸ್ಪರ್ಧೆಗಳಲ್ಲಿ ಭಾಗವಹಿಸಿದಲ್ಲಿ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಸಹಾಯಕವಾಗಲಿದೆ’ ಎಂದರು.

ADVERTISEMENT

ಸಾಂಸ್ಕೃತಿಕ ವಿಭಾಗದ ಸಂಚಾಲಕಿ ಶಾರದಮ್ಮ ಮಾತನಾಡಿ, ‘ಸ್ಪರ್ಧೆಗಳಲ್ಲಿ ಸೋಲು-ಗೆಲವು ಇದ್ದೇ ಇರುತ್ತದೆ. ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಬದಲಾಗಿ ಅವುಗಳಲ್ಲಿ ಪಾಲ್ಗೊಳ್ಳುವುದು ಬಹು ಮುಖ್ಯ. ಒಂದು ವೇಳೆ ಇಂದಿನ ಸ್ಪರ್ಧೆಯಲ್ಲಿ ಸೋತರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ ಸೋಲೇ ಗೆಲುವಿನ ಸೋಪಾನ ಎಂಬ ನಾಣ್ಣುಡಿಯನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ’ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಜಾನಪದ ಗೀತೆ ಸ್ಪರ್ಧೆಯಲ್ಲಿ ಮೇಘಾ ಮತ್ತು ಸಂಗಡಿಗರು ಪ್ರಥಮ, ಮೋನಿಕಾ ಸಂಗಡಿಗರು ದ್ವಿತೀಯ, ದಿವ್ಯಶ್ರೀ ತೃತೀಯ. ಭಾವಗೀತೆ ಸ್ಪರ್ಧೆಯಲ್ಲಿ ಲತಾ ಮತ್ತು ಸಂಗಡಿಗರು ಪ್ರಥಮ, ಭೂಮಿಕಾ ಮತ್ತು ಸಂಗಡಿಗರು ದ್ವಿತೀಯ, ದೀಪಿಕಾ ಮತ್ತು ಸಂಗಡಿಗರು ತೃತೀಯ. ಭಕ್ತಿಗೀತೆ ಸ್ಪರ್ಧೆಯಲ್ಲಿ ವೇದಾ ಮತ್ತು ಸಂಗಡಿಗರು ಪ್ರಥಮ, ಭಾರ್ಗವಿ.ಪಿ.ಎಂ ದ್ವಿತೀಯ, ಕನ್ನಿಕಾ ಮತ್ತು ಸಂಗಡಿಗರು ತೃತೀಯ ಸ್ಥಾನ ಪಡೆದರು.

ಚಿತ್ರಕಲೆಯಲ್ಲಿ ಮಂಜುನಾಥ ವಾಲೀಕಾರ ಪ್ರಥಮ, ಅಣ್ಣಪ್ಪ.ಎಚ್ ದ್ವಿತೀಯ, ಕುಶಾಲ್.ಎಸ್.ಆರ್ ತೃತೀಯ. ರಂಗೋಲಿ ಸ್ಪರ್ಧೆಯಲ್ಲಿ ದೀಪಿಕಾ.ಬಿ ಪ್ರಥಮ, ಚೇತನಾ ಜಾಬಿನ್ ದ್ವಿತೀಯ, ಪವನ.ಟಿ ತೃತೀಯ. ಮೆಹಂದಿ ಸ್ಪರ್ಧೆಯಲ್ಲಿ ಆಪ್ರೀನಾಬಾನು ಮುಬಾರಕ್ ಪ್ರಥಮ, ಬಶೀರಾ ಲೋಹಾರ ದ್ವಿತೀಯ, ಸಾನೀಯಾ ಶೇಕ್ ತೃತೀಯ ಪಡೆದು ಬಹುಮಾನ ಗಳಿಸಿರುತ್ತಾರೆ.

ಉಪನ್ಯಾಸಕರಾದ ಪ್ರಶಾಂತ ಬಾರಾಟಕ್ಕೆ, ರಮೇಶ್.ಆರ್, ರವಿ.ಎಂ, ಹನುಮಂತಪ್ಪ ಆನವೇರಿ, ಉಮೇಶ ಕುಬುಸದ್, ನೀಲಮ್ಮ ಪೂಜಾರ, ರಾಜಶೇಖರ.ಕೆ.ಆರ್, ಉಮೇಶ.ಎಸ್, ಮಹೇಶ್ವರಪ್ಪ, ಪ್ರಶಾಂತ, ಗಣೇಶ ಗೌಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.