ಬ್ಯಾಡಗಿ: ಪಟ್ಟಣದ ವ್ಯಾಪ್ತಿಯಲ್ಲಿ ಹದ ಮಳೆ ಆಗದೆ ಬಿತ್ತನೆ ಕಾರ್ಯ ವಿಳಂಬವಾಗಿರುವುದರಿಂದ ವರುಣನ ಕೃಪೆಗಾಗಿ ಸೋಮವಾರ ರೈತರು ಹಾಗೂ ಸಾರ್ವಜನಿಕರು ಕತ್ತೆಗಳ ಮದುವೆ ನೆರವೇರಿಸಿ, ಮೆರವಣೆಗೆ ನಡೆಸಿದರು.
ಗಂಡು ಹಾಗೂ ಹೆಣ್ಣು ಕತ್ತೆಗಳಿಗೆ ಪಟ್ಟಣದ ಗ್ರಾಮ ದೇವತೆ ದ್ಯಾಮವ್ವದೇವಿ ದೇವಸ್ಥಾನದಲ್ಲಿ ಅರಿಸಿನ, ಬಳೆ ತೊಡಿಸಿ ಶಾಸ್ತ್ರೋಕ್ತವಾಗಿ ಮುತೈದೆಯರನ್ನಾಗಿ ಮಾಡುವ ಮೂಲಕ ಕತ್ತೆಗಳ ಮದುವೆ ಕಾರ್ಯ ನೆರವೇರಿಸಲಾಯಿತು.
ಬಳಿಕ ಜೋಡಿ ಕತ್ತೆಗಳನ್ನು ಪಟ್ಟಣದ ಮುಖ್ಯ ರಸ್ತೆ, ನೆಹರೂ ವೃತ್ತ, ಬನಶಂಕರಿ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ನಡೆಸಲಾಯಿತು.
ಪುರಸಭೆ ಸದಸ್ಯ ಎಂ.ಆರ್.ಭದ್ರಗೌಡ್ರ, ಪ್ರಶಾಂತ ಯಾದವಾಡ, ರೈತ ಮುಖಂಡರಾದ ಚಿಕ್ಕಪ್ಪ ಛತ್ರದ, ಈಶಪ್ಪ ಮಠದ, ಆಶೋಕ ಮಾಳೇನಹಳ್ಳಿ, ಮಲಕಪ್ಪ ಹಾದರಗೇರಿ, ರಾಜು ಚನ್ನಗೌಡ್ರ, ಬಸವರಾಜ ಚನ್ನಗೌಡ್ರ, ಪ್ರಶಾಂತ ಹಾಲನಗೌಡ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.