ADVERTISEMENT

‘ಕನಕದಾಸರು ಅನುಭಾವಿ ಸಾಹಿತಿ’

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 8:13 IST
Last Updated 4 ಡಿಸೆಂಬರ್ 2020, 8:13 IST
ರಾಣೆಬೆನ್ನೂರಿನ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ದಾಸ ಶ್ರೇಷ್ಠ ಕನಕದಾಸರ 533ನೇ ಜಯಂತಿ ಆಚರಿಸಲಾಯಿತು
ರಾಣೆಬೆನ್ನೂರಿನ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ದಾಸ ಶ್ರೇಷ್ಠ ಕನಕದಾಸರ 533ನೇ ಜಯಂತಿ ಆಚರಿಸಲಾಯಿತು   

ರಾಣೆಬೆನ್ನೂರು: ಕನಕದಾಸರು ಒಂದು ವರ್ಗದ ಪ್ರತಿನಿಧಿಯಲ್ಲ. ನಮ್ಮ ಸಂಸ್ಕೃತಿಯ ಪ್ರತಿನಿಧಿ, ಅಂತರಂಗದ ಮಾರ್ಗದರ್ಶಿ. ಒಬ್ಬ ಅನುಭಾವಿ ಸಾಹಿತಿಯಾಗಿ ಅವರ ಸಾಹಿತ್ಯಕ ಕೊಡುಗೆ ಅನನ್ಯವಾದುದು ಎಂದು ತಹಶೀಲ್ದಾರ್ ಬಸನಗೌಡ ಕೋಟೂರ ಹೇಳಿದರು.

ನಗರದ ಮಿನಿವಿಧಾನಸೌಧದ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ದಾಸ ಶ್ರೇಷ್ಠ ಕನಕದಾಸರ 533ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರೊ.ದೊಡ್ಡಬಿಲ್ಲಾ ಅವರು ಕನಕದಾಸರ ಕುರಿತು ಉಪನ್ಯಾಸ ನೀಡಿದರು. ಉಪ ತಹಶೀಲ್ದಾರ ಮಂಜುನಾಥ ಹಾದಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎನ್‌. ಗುರುಪ್ರಸಾದ, ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಎ.ಬಿ. ಚಂದ್ರಶೇಖರ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಹನುಮಂತಪ್ಪ ದೇವರಗುಡ್ಡ, ಕೃಷ್ಣಪ್ಪ ಕಂಬಳಿ, ವಕೀಲ ಮೃತ್ಯುಂಜಯ ಗುದಿಗೇರ, ಕೊಂಡಜ್ಜಿ, ರವೀಂದ್ರಗೌಡ ಪಾಟೀಲ, ಹನುಮಂತಪ್ಪ ಕಬ್ಬಾರ, ನಗರಸಭಾ ಸದಸ್ಯ ಸಿದ್ದಪ್ಪ ಬಾಗಲವರ, ಹುಚ್ಚಪ್ಪ ಮೇಡ್ಲೇರಿ, ರತ್ನವ್ವ ಪೂಜಾರ, ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಮಲ್ಲಾಡದ, ಸುಭಾಸ ಕುರುಬರ, ಎಂ.ಡಿ. ದ್ಯಾಮಣ್ಣನವರ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.