ADVERTISEMENT

ರಾಣೆಬೆನ್ನೂರು: ನೇಣುಬಿಗಿದು ರೈತ ಆತ್ಮಹತ್ಯೆ 

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 4:00 IST
Last Updated 11 ಜುಲೈ 2025, 4:00 IST
ರಾಣೆಬೆನ್ನೂರು ತಾಲ್ಲೂಕಿನ  ಜೋಹಿಸರಹರಳಹಳ್ಳಿ ಗ್ರಾಮದ ರೈತ ಉಮೇಶಪ್ಪ ಹವಳಪ್ಪ ತಳವಾರ(49) ಎಂಬುವರು ಸಾಲದ ಬಾದೆ ತಾಳಲಾರದೇ ವಾಸದ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಸರ್ಕಾರಿ ಆಸ್ಪತ್ರೆ ಶವಾಗಾರದ ಮುಂದೆ ರೈತರು ಪ್ರತಿಭಟನೆ ನಡೆಸಿದರು  
ರಾಣೆಬೆನ್ನೂರು ತಾಲ್ಲೂಕಿನ  ಜೋಹಿಸರಹರಳಹಳ್ಳಿ ಗ್ರಾಮದ ರೈತ ಉಮೇಶಪ್ಪ ಹವಳಪ್ಪ ತಳವಾರ(49) ಎಂಬುವರು ಸಾಲದ ಬಾದೆ ತಾಳಲಾರದೇ ವಾಸದ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಸರ್ಕಾರಿ ಆಸ್ಪತ್ರೆ ಶವಾಗಾರದ ಮುಂದೆ ರೈತರು ಪ್ರತಿಭಟನೆ ನಡೆಸಿದರು     

ರಾಣೆಬೆನ್ನೂರು: ತಾಲ್ಲೂಕಿನ ಜೋಹಿಸರಹರಳಹಳ್ಳಿ ಗ್ರಾಮದ ರೈತ ಉಮೇಶಪ್ಪ ಹವಳಪ್ಪ ತಳವಾರ (49) ಸಾಲದ ಬಾದೆ ತಾಳಲಾರದೇ ತಮ್ಮ ವಾಸದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃಷಿ ಮತ್ತು ಮನೆತನದ ಖರ್ಚಿಗಾಗಿ ₹6 ಲಕ್ಷ ಸಾಲ ಮಾಡಿದ್ದರು ಎಂದು ಹಲಗೇರಿ ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನೆ: ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ತಾಲ್ಲೂಕಿನ ರೈತ ಆತ್ಮಹತ್ಯೆ ಪ್ರಕರಣಗಳ ಬಗ್ಗೆಯೂ ಸರ್ಕಾರ ಹೆಚ್ಚಿನ ಗಮನಹರಿಸಿ ರೈತರಿಗೆ ನ್ಯಾಯ ಕೊಡಿಸಬೇಕೆಂದು ತಾಲ್ಲೂಕು ರೈತ ಸಂಘದ ಪದಾಧಿಕಾರಿಗಳು ಗುರುವಾರ ನಗರದ ಸರ್ಕಾರಿ ಆಸ್ಪತ್ರೆಯ ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿ ವರ್ಷ ಅತಿವೃಷ್ಠಿ ಮತ್ತು ಅನಾವೃಷ್ಠಿ, ರೈತ ವಿರೋಧಿ ಕಾನೂನುಗಳು ಮತ್ತು ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಇರುವುದು ಸೇರಿದಂತೆ ವಿವಿಧ ಸಂಕಷ್ಟಗಳ ಮಧ್ಯೆ ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಮುಳ್ಳುಸಜ್ಜೆ ನಿಯಂತ್ರಣಕ್ಕೆ ಕೃಷಿ ತಜ್ಞರು ಅಧ್ಯಯನ ನಡೆಸಬೇಕು. ಆತ್ಮಹತ್ಯೆ ಮಾಡಿಕೊಂಡ ರೈತ ಉಮೇಶಪ್ಪ ತಳವಾರ ಕುಟುಂಬಕ್ಕೆ ಸರ್ಕಾರ ₹25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಕಂದಾಯ ಮತ್ತು ಕೃಷಿ ಅಧಿಕಾರಿಗಳು, ಹಲಗೇರಿ ಠಾಣಾ ಪೊಲೀಸ್ ಅಧಿಕಾರಿಗಳು, ಚಂದ್ರಣ್ಣ ಬೇಡರ, ರವೀಂದ್ರಗೌಡ ಎಫ್. ಪಾಟೀಲ, ನಾಗಪ್ಪ ಸಣ್ಮನಿ, ಕರಬಸಪ್ಪ ಕೂಲಾರ, ಪರಮೇಶಪ್ಪ ತಳವಾರ, ಗುರುರಾಜ ಕೊಂಡಜ್ಜಿ, ರಾಮಪ್ಪ ಬೆನ್ನೂರು, ಹನುಮಂತಪ್ಪ ಹೊಸಳ್ಳಿ, ಬಸವಂತಪ್ಪ ಬೆನ್ನೂರು, ಹನುಮಂತಪ್ಪ ಬೆನ್ನೂರು, ರಾಮಪ್ಪ ಓಲೇಕಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.